• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ಸೇರಿದವರಿಗಿಂತ ಬಿಟ್ಟವರೆ ಜಾಸ್ತಿ

By Mrutyunjaya Kalmat
|

ಮುಂಬೈ, ಜ. 13 : ಆರ್ಥಿಕ ಕುಸಿತದ ನಂತರ ಸಾಫ್ಟ್ ವೇರ್ ಉದ್ಯಮದಲ್ಲಿ ಭಾರಿ ನೇಮಕಾತಿ ಆರಂಭವಾಗಿದ್ದು, ಟೆಕ್ಕಿಗಳಿಗೆ ಹಬ್ಬವೂ ಹಬ್ಬ. ಅನುಭವಿ ಟೆಕ್ಕಿಗಳಿಗಂತೂ ಎಲ್ಲಿದ ಬೇಡಿಕೆ ಉಂಟಾಗಿದ್ದು, ಕಂಪನಿಯಿಂದ ಕಂಪನಿಗೆ ವಲಸೆ ಪರ್ವ ಜೋರಾಗಿಯೇ ನಡೆದಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಗೆ ಸುಮಾರು 5,756 ಉದ್ಯೋಗಿಗಳು ನೌಕರಿಗೆ ಗುಡ್ ಬೈ ಹೇಳಿದ್ದಾರೆ.

ಬಾಂಬೆ ಸ್ಟಾಕ್ ಎಕ್ಸ್ ಜೇಂಜ್ ಗೆ ಇನ್ಫೋಸಿಸ್ ಸಲ್ಲಿಸಿರುವ ತನ್ನ ತ್ರೈಮಾಸಿಕ ವರದಿಯಲ್ಲಿ ಇದನ್ನು ಪ್ರಸ್ತಾಪಿಸಿದೆ. ತ್ರೈಮಾಸಿಕ ಅವಧಿ 2010 ರ ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಕಂಪನಿಯೂ ಸುಮಾರು 11,067 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಇದರಲ್ಲಿ 5,756 ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿದ್ದು, ಖಾಲಿ ಇರುವ ಹುದ್ದೆಗಳ ಜೊತೆಗೆ 5,311 ಉದ್ಯೋಗಿಗಳನ್ನು ಹೆಚ್ಚುವರಿಯಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗ ಮುಖ್ಯಸ್ಥರಾದ ಟಿವಿ ಮೋಹನ್ ದಾಸ್ ಪೈ ತಿಳಿಸಿದ್ದಾರೆ.

ಆರ್ಥಿಕ ಕುಸಿತದಿಂದ ಉದ್ಯಮ ಚೇತರಿಸಿಕೊಂಡಿದೆ. ಕಂಪನಿಗೆ ಅನೇಕ ನೂತನ ಯೋಜನೆಗಳು ಬರುತ್ತಿವೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ 11,067 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಂಪನಿಯ ಇತ್ತೀಚೆಗಿನ ದಿನಗಳಲ್ಲಿ ಇದೊಂದು ದೊಡ್ಡ ಮಟ್ಟದ ನೇಮಕಾತಿ ಎಂದೇ ಹೇಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರಂಭಿಕ ಹಂತದಲ್ಲಿ ಉದ್ಯೋಗಿಗಳ ನೇಮಕಾತಿಯಲ್ಲಿ ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ, ಅನುಭವಿಗಳನ್ನು ಕಂಪನಿಯಲ್ಲಿ ಇಟ್ಟುಕೊಳ್ಳುವುದು ದೊಡ್ಡ ಸಾಹಸದ ಕೆಲಸವಾಗಿದೆ ಇನ್ಫೋಸಿಸ್ ಸಿಇಓ ಎಸ್ ಗೋಪಾಲಕೃಷ್ಣ ಹೇಳಿದ್ದಾರೆ. ಇನ್ಫೋಸಿಸ್ ನಲ್ಲಿ ಒಟ್ಟು 1,27,779 ಮಂದಿ ಕೆಲಸ ಮಾಡುತ್ತಿದ್ದಾರೆ. ಇದೇ ಅವಧಿ 2009 ರಲ್ಲಿ 1,09,882 ಮಂದಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಇನ್ಫಿ ಮೂರನೇ ತ್ರೈಮಾಸಿಕ : ಇನ್ಫೋಸಿಸ್ ಮೂರನೇ ತ್ರೈಮಾಸಿಕ ಘೋಷಣೆಯಾಗಿದ್ದು, ಕಂಪನಿ ಎರಡನೇ ತ್ರೈಮಾಸಿಕಕ್ಕಿಂತ ಶೇ. 4 ರಷ್ಟು ಹಣಕಾಸು ವ್ಯವಹಾರ ಕಡಿಮೆಯಾಗಿದೆ. ಅಗಸ್ಟ್ ನಿಂದ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಕಂಪನಿಯೂ 15,401 ಕೋಟಿ ರುಪಾಯಿ ವ್ಯವಹಾರ ನಡೆಸಿದ್ದರೆ, ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ 14,819 ಕೋಟಿ ರುಪಾಯಿ ವ್ಯವಹಾರ ನಡೆಸಿದೆ. ಒಟ್ಟಾರೆ ವಹಿವಾಟಿನಲ್ಲಿ ಶೇ.14 ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ. (ಇನ್ಫೋಸಿಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys hired 11,067 employees in the third quarter this fiscal, but nearly 5,756 employees left the organisation during the same period, bringing the net addition at 5,311, the company said in a filing to the Bombay Stock Exchange.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more