ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಗ್ರಾಮಕ್ಕೂ ಬ್ರಾಡ್ ಬ್ಯಾಂಡ್ ಸಂಪರ್ಕ

By Mahesh
|
Google Oneindia Kannada News

Sam Pitroda
ಬೆಂಗಳೂರು, ಜ. 12: ದೇಶದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೌಲಭ್ಯವನ್ನು ಮುಂದಿನ 18 ತಿಂಗಳೊಳಗೆ ನೀಡಲಾಗುವುದು ಎಂದು ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯ ಮತ್ತು ಸಂಶೋಧನೆಗಳ ಸಲಹೆಗಾರ(public information infrastructure and innovations)ದ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

2012ರ ಮಧ್ಯಂತರದ ವೇಳೆಗೆ ಸುಮಾರು 2,50,000 ಗ್ರಾಮ ಪಂಚಾಯತಿಗಳು ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕ ಹೊಂದಲಿವೆ. ಸುಮಾರು 4 ಬಿಲಿಯನ್ ಮೌಲ್ಯದ ಯೋಜನೆ ಇದಾಗಿದ್ದು, ಬಡವರ್ಗಕ್ಕೆ ತಂತ್ರಜ್ಞಾನದ ಪ್ರಯೋಜನವನ್ನು ತಲುಪುವಂತೆ ಮಾಡುವುದು ಮೂಲ ಉದ್ದೇಶ ಎಂದು ಪಿತ್ರೋಡಾ ಹೇಳಿದರು.

ಮುಂದಿನ 18 ತಿಂಗಳೊಳಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗುವುದು. ನೆಟ್ ವರ್ಕ್ ನಿರ್ವಹಣೆ ಹೊಣೆಯನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ವಹಿಸಿಕೊಡಲಾಗುತ್ತದೆ. ಈಗಾಗಲೇ ಸುಮಾರು 100,000 ಗ್ರಾಮ ಪಂಚಾಯತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ ನೀಡಲಾಗಿದೆ. ಗ್ರಾಮೀಣ ಭಾಗಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೌಲಭ್ಯ ಸಿಗುವುದರಿಂದ ಟೆಲಿ ಮೆಡಿಸಿನ್, ವಾತಾವರಣ ಮುನ್ಸೂಚನೆ, ರೈತರಿಗೆ ಬೆಳೆ, ಮಾರುಕಟ್ಟೆ ಹಾಗೂ ಕೃಷಿ ನಿರ್ವಹಣೆ ಬಗ್ಗೆ ದೂರ ಸಂವೇದಿ ಸಂಪರ್ಕ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪಿತ್ರೋಡಾ ವಿವರಿಸಿದರು.

ಇದಲ್ಲದೆ ದೂರ ಸಂಪರ್ಕ ಇಲಾಖೆಯ Universal Service Obligation Fund(USOF) ನ ಆರ್ಥಿಕ ಸೌಲಭ್ಯ ಯೋಜನೆಗೆ ಅನುಗುಣವಾಗಿ ಗ್ರಾಮೀಣ ಭಾಗದಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯುವ ಗ್ರಾಮೀಣ ಜನರಿಗೆ ನೋಂದಣಿ, ಮೋಡೆಮ್, ಸುರಕ್ಷಿತ ಠೇವಣಿ, ಅಳವಡಿಕೆ ವೆಚ್ಚ ಮುಂತಾದ ಹೊರೆಯನ್ನು ಹೊರೆಸಿಲ್ಲ. [ಬ್ರಾಡ್ ಬ್ಯಾಂಡ್]

English summary
With in 18 months all village panchayat will be covered with broadband internet connections said advisor to Prime Minister , Sam Pitroda. Currently Some 100,000 village Panchayats in the India already have broadband. Internet connection soon penetrate rural India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X