ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾಚಿಯಲ್ಲಿ ರಿಯಾಜ್ ಭಟ್ಕಳ್ ಹತ್ಯೆ?

By Mrutyunjaya Kalmat
|
Google Oneindia Kannada News

Terrorists
ಕರಾಚಿ, ಜ. 12 : ಬೆಂಗಳೂರು ಸ್ಫೋಟ ಸೇರಿದಂತೆ ಭಾರತ ವಿವಿಧ ಪ್ರದೇಶಗಳಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಪಟ್ಟಿಯಲ್ಲಿರುವ ರಿಯಾಜ್ ಭಟ್ಕಳ್ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೊಂಡಿದ್ದಾನೆಲ್ಲಾಗಿದೆ. ರಿಯಾಜ್ ಮತ್ತು ಆತನ ಸ್ನೇಹಿತ ಅನ್ವರ್ ನನ್ನು ನಗರದ ಗುಲ್ಷನ್ ಇಕ್ಬಾಲ್ ಪ್ರದೇಶದಲ್ಲಿ ಗುಂಡಿಟ್ಟು ಕೊಲೆ ಮಾಡಿರುವುದಾಗಿ ಭೂಗತ ಜಗತ್ತಿನ ಡಾನ್ ಚೋಟಾ ರಾಜನ್ ಹೇಳಿಕೊಂಡಿದ್ದಾನೆ ಎಂದು ರಿಡೀಫ್ ವರದಿ ಮಾಡಿದೆ.

ಈ ಬಗ್ಗೆ ಮತ್ತಷ್ಟು ವಿವರ ನೀಡಿರುವ ಚೋಟಾ ರಾಜನ್, ರಿಯಾಜ್ ನಗರದ ಜಿಯಾಉದ್ದೀನ್ ಆಸ್ಪತ್ರೆಯ ವಾರ್ಡ್ ನಂಬರ್ 222 , 18ನೇ ನಂಬರಿನ ಹಾಸಿಗೆಯಲ್ಲಿ ರಿಯಾಜ್ ನನ್ನು ಹತ್ಯೆ ಮಾಡಲಾಗಿದೆ. ಅಬ್ದುಲ್ ಅಜೀಜ್ ಬಿದಾನಿ ಎನ್ನುವ ಇನ್ನೊಬ್ಬ ಪಾತಕಿ ರಿಯಾಜ್ ಶವವನ್ನು ಗುರುತಿಸಿದ್ದಾನೆಂದು ಹೇಳಿಕೆ ನೀಡಿದ್ದಾನೆ. ಮುಂಬೈ ಗುಪ್ತಚರ ಇಲಾಖೆ, ಎಟಿಎಸ್, ಕರ್ನಾಟಕ ಪೋಲೀಸ್ ಮತ್ತು ಭಟ್ಕಳ್ ಸಂಬಂಧಿಕರು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ, ಜೈಪುರ, ಬೆಂಗಳೂರು, ಪುಣೆ ಜರ್ಮನ್ ಬೇಕರಿ, ಅಹಮದಾಬಾದ್ ಮತ್ತು ದೆಹಲಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿಯಾಗಿರುವ ರಿಯಾಜ್ ಭಟ್ಕಳ್, ಈ ದುಷ್ಕೃತ್ಯ ನಡೆಸಿದ ನಂತರ ಪಾಕ್ ಗೆ ಪರಾರಿಯಾಗಿದ್ದ ಎಂದು ಸಮಯ್ ಲೈವ್ ವರದಿ ಮಾಡಿದೆ.(ಭಯೋತ್ಪಾದನೆ)

English summary
Is it the end of India's most wanted terrorist Riyaz Bhatkal? Underworld don Chota Rajan has claimed that his aides have killed Riyaz Bhatkal and an associate of his, Anwar, at the Gulshan Iqbal area in Karachi, Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X