ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹ್! ಎಚ್ಚರವಿದ್ದಾಗಲೇ ಬುರುಡೆ ಬಿಚ್ಚಿ ಶಸ್ತ್ರಚಿಕಿತ್ಸೆ

By Mahesh
|
Google Oneindia Kannada News

Awake Brain Surgery, Manipal Hospital
ಬೆಂಗಳೂರು, ಜ. 12: ಇದನ್ನು ವೈದ್ಯಕೀಯ ಲೋಕದ ಮಹತ್ಸಾಧನೆ ಎನ್ನಬಹುದು. ರೋಗಿಗೆ ಪ್ರಜ್ಞೆ ಇರುವಾಗಲೇ ಆತನ ತಲೆಬುರುಡೆಯನ್ನು ಬಿಚ್ಚಿ ಮೆದುಳಿನಲ್ಲಿರುವ ಬೇಡದ ಗಡ್ಡೆಯನ್ನು ಹೊರತೆಗೆಯುವುದು ಎಂದರೇ ಸಾಮಾನ್ಯ ಸಾಧನೆಯೇನಲ್ಲ. ಅಪರೂಪದ ಶಸ್ತ್ರಚಿಕಿತ್ಸೆಗೆ ತಲೆ ಒಡ್ಡಿದ್ದವರು ಸುಂಕದಕಟ್ಟೆಯ ನಿವಾಸಿ ಚೇತನ್(33). ನಗರದ ಮಣಿಪಾಲ್ ಆಸ್ಪತ್ರೆಯ ಡಾ. ಸತೀಶ್ ರುದ್ರಪ್ಪ ಹಾಗೂ ಅವರ ತಂಡ ಈ ಕಠಿಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದು, ಚೇತನ್ ಆರೋಗ್ಯಕರವಾಗಿದ್ದಾರೆ.

ತಮ್ಮ ಆಸ್ಪತ್ರೆಯ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಈ ಶಸ್ತ್ರಚಿಕಿತ್ಸೆಯ ರೂವಾರಿ ಡಾ. ಸತೀಶ್ ರುದ್ರಪ್ಪ ಮಾತನಾಡಿ, ಇಂತಹದೊಂದು ಸೂಕ್ಷ್ಮ ಹಾಗೂ ಅಪರೂಪದ ಚಿಕಿತ್ಸೆ ಯಶಸ್ವಿಯಾಗಲು ರೋಗಿ ಚೇತನ್ ಅವರ ಧೈರ್ಯವೇ ಕಾರಣ. ಎಚ್ಚರದಲ್ಲಿರುವಾಗಲೇ ಮೆದುಳಿನ ಶಸ್ತ್ರಚಕಿತ್ಸೆ ನಡೆಸುತ್ತೇವೆ ಎಂದರೆ ಯಾರೂ ಒಪ್ಪುವುದಿಲ್ಲ. ಎಂದರು.

ತೀವ್ರ ತಲೆನೋವಿನಿಂದ ಬಳಲುತಿದ್ದ ಚೇತನ್ (ಮದುವೆಯಾಗಿ ಅರು ತಿಂಗಳುಗಳಾಗಿದೆ) ಅವರನ್ನು ಪರೀಕ್ಷಿಸಿದಾಗ ಮೆದುಳಿನ ಬಲಭಾಗದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಈ ಭಾಗವು ಮುಖ ಹಾಗೂ ಎಡಗೈನ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಈ ಗಡ್ಡೆಯನ್ನು ತೆಗೆಯದಿದ್ದರೆ ಮುಂದೆ ದೇಹದ ಎಡಭಾಗಕ್ಕೆ ಲಕ್ವಾ ಹೊಡೆಯುವ ಸಂಭವ ಇತ್ತು. ಇದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಶಸ್ತ್ರಚಿಕಿತ್ಸೆಗೆ ಸಿದ್ಧಗೊಳಿಸಿದೆವು ಎಂದು ವಿವರಿಸಿದರು.

ವಿರಳ ಶಸ್ತ್ರಚಿಕಿತ್ಸೆ: ಅತ್ಯಂತ ವಿರಳವಾದ ಪ್ರಜ್ಞಾಸ್ಥಿತಿಯಲ್ಲಿಯೇ ಮೆದುಳಿನ ಶಸ್ತ್ರಚಿಕಿತ್ಸೆ(ಅವೇಕ್ ಕ್ರೇನಿಯೋಟೊಮಿ)ಯನ್ನು ಜ. 5ರಂದು ನಡೆಸಲಾಗಿದೆ. ಸ್ಥಳೀಯ ಅರಿವಳಿಕೆ ನೀಡಿ, ತಲೆ ಬುರುಡೆಯನ್ನು ತೆರೆದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸುಮಾರು ಒಂದೂವರೆ ಗಂಟೆವರೆಗೆ ನಡೆದ ಈ ಕ್ರಿಯೆಯಲ್ಲಿ ರೋಗಿಯ ಜೊತೆ ನಿರಂತರವಾಗಿ ಮಾತುಕತೆ ನಡೆಸಲಾಯಿತು.

ಪ್ರಯೋಜನ: ರೋಗಿಯನ್ನು ಪ್ರಜ್ಞಾಹೀನಗೊಳಿಸಿ ಶಸ್ತ್ರಚಿಕಿತ್ಸೆ ಮಾಡುವುದಕ್ಕಿಂತ ಇಲ್ಲಿ ಕಡಿಮೆ ವೆಚ್ಚ ತಗಲುತ್ತದೆ. ಅಲ್ಲದೇ, ರೋಗಿ ಬಹಳ ಬೇಗನೇ (2-3 ದಿನಗಳ ನಂತರ) ಮನೆಗೆ ಹೋಗಬಹುದು. ಈ ಚಿಕಿತ್ಸಾ ಮಾದರಿಯನ್ನು ಎಲ್ಲ ಪ್ರಕರಣಗಳಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸಾಕಷ್ಟು ನುರಿತ ನರರೋಗ ಶಸ್ತ್ರಚಿಕಿತ್ಸಾ ತಜ್ಞರು ಇರಬೇಕು ಹಾಗೂ ರೋಗಿಯು ಧೈರ್ಯಶಾಲಿಯಾಗಿರಬೇಕು ಎಂದು ವೈದ್ಯಕೀಯ ನಿರ್ದೇಶಕ ಸುದರ್ಶನ ಬಲ್ಲಾಳ್ ಹೇಳಿದರು.

ಕತ್ತರಿಸುವ ಭಾಗದಲ್ಲಿ ಸ್ಥಳೀಯ ಅರಿವಳಿಕೆ ಮದ್ದು ನೀಡಿದ್ದರಿಂದ ನೋವು ಅನ್ನಿಸಲಿಲ್ಲ. ವೈದ್ಯರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದೆ. ಅವರು ಹೇಳಿದಂತೆ ಕೈ, ಕಾಲು ಅಲುಗಾಡಿಸಿದೆ. ಇಡೀ ಪ್ರಕ್ರಿಯೆ ಮುಗಿಯುವವರೆಗೂ ನಾನು ಎಚ್ಚರವಾಗಿಯೇ ಇದ್ದೆ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಚೇತನ್ ಹೇಳುತ್ತಾರೆ. [ಶಸ್ತ್ರಚಿಕಿತ್ಸೆ]

English summary
Manipal Hospital, Bengaluru Dr. Satish Rudrappa and team have successfully performed Awake Brain Surgery (medically known as Awake Craniotomy) on Chetan Shivkumar, a 34 year old man without general Anesthesia(not even with intubation to remove a Brain Tumor briefed Dr. Sudarshan Ballal, Medical Director of Manipal Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X