ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಜಗನ್ ಉಪವಾಸ

By Mrutyunjaya Kalmat
|
Google Oneindia Kannada News

YS Jaganmohan Reddy
ನವದೆಹಲಿ, ಜ. 11 : ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಾಧೀಕರಣ ನೀಡಿರುವ ತೀರ್ಪು ವಿರೋಧಿಸಿ ಮಾಜಿ ಸಂಸದ ಜಗನ್ಮೋಹನ್ ರೆಡ್ಡಿ ನವದೆಹಲಿಯ ಜಂತರ್-ಮಂತರ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದ್ದಿರುವ ಜಗನ್ ಅವರ ಪ್ರತಿಭಟನೆಗೆ ಕಾಂಗ್ರೆಸ್ಸಿನ ಅನೇಕ ಶಾಸಕರು ಬೆಂಬಲ ಸೂಚಿಸಿರುವುದು ಭಾರಿ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣ ನ್ಯಾಯಾಧೀಕರಣ ನೀಡಿರುವ ತೀರ್ಪಿನಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದರಿಂದ ರಾಜ್ಯದ ರೈತರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಾರದು ಎಂದು ಜಗನ್ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.

ಜಗನ್ಮೋಹನ್ ರೆಡ್ಡಿ ಆರಂಭಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ಸಿನ ಸುಮಾರು 18 ಶಾಸಕರು ಮತ್ತು ಅನೇಕ ಸಂಸದರು ಬೆಂಬಲ ಸೂಚಿಸಿರುವುದು ವಿಶೇಷವಾಗಿದೆ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜಗನ್ ಇತ್ತೀಚೆಗೆ 48 ಗಂಟೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. (ಕೃಷ್ಣಾ ನ್ಯಾಯಾಧೀಕರಣ)

ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಮುಖ್ಯಾಂಶಗಳು

* ಆಲಮಟ್ಟಿನ ಆಣೆಕಟ್ಟಿನ ಎತ್ತರವನ್ನು 519.6 ರಿಂದ 524.25 ಅಡಿಗೆ ಹೆಚ್ಚಿಸಲು ಅನುಮತಿ.
* ಎ ಮತ್ತು ಬಿ ಸ್ಕೀಂ ನಲ್ಲಿ ರಾಜ್ಯಕ್ಕೆ ಒಟ್ಟು 911 ಟಿಎಂಸಿ ನೀರು ಲಭ್ಯ.
* ಎ ಸ್ಕೀಂನಲ್ಲಿ 734 ಟಿಎಂಸಿ ಮತ್ತು, ಬಿ ಸ್ಕೀಂ ನಲ್ಲಿ 177 ಟಿಎಂಸಿ ನೀರು ಹಂಚಿಕೆ.
* ಆಂಧ್ರಪ್ರದೇಶಕ್ಕೆ ಸುಮಾರು 1001 ಟಿಎಂಸಿ ನೀರು ಬಳಕೆಗೆ ನ್ಯಾಯಾಧೀಕರಣ ಅನುಮತಿ.
* ಮಹಾರಾಷ್ಟ್ರ ಕೇವಲ 81 ಟಿಎಂಸಿ ನೀರು ಬಳಕೆಗೆ ಅನುಮತಿ.
* ಬಿ ಸ್ಕೀಂನಲ್ಲಿ ಅಂಧ್ರಪ್ರದೇಶ 190 ಟಿಎಂಸಿ ನೀರು ಬಳಕೆಗೆ ಅನುಮತಿ.
* 2050 ರ ತನಕ ಈ ತೀರ್ಪಿನಲ್ಲಿ ಯಾವುದೇ ಬದಲಾದವಣೆ ಇಲ್ಲ.

English summary
Former Congress MP and the late YSR's son Jaganmohan Reddy has brought his water war to the national Capital. He is on a day-long fast at Jantar Mantar to protest the "injustice" meted out to Andhra Pradesh in the Krishna Water Disputes Tribunal verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X