ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಗೇಟ್ ಮಡಿಲಿಗೆ ಪಟ್ನಿ ಕಂಪ್ಯೂಟರ್ಸ್

By Mrutyunjaya Kalmat
|
Google Oneindia Kannada News

Phaneesh Murthy
ಬೆಂಗಳೂರು ಜ 11: ಸಾಫ್ಟ್‌ವೇರ್ ಉದ್ದಿಮೆಯಲ್ಲಿನ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆಯಲ್ಲಿ ಒಂದಾದ ಮತ್ತು ದೇಶದ ಆರನೇ ದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್‌ನ ಶೇ 63ರಷ್ಟು ಬಂಡವಾಳವನ್ನು ಅಮೆರಿಕ ಮೂಲದ ಸಾಫ್ಟ್‌ವೇರ್ ಸಂಸ್ಥೆ ಐಗೇಟ್ ನೇತೃತ್ವದ ಆರ್ಥಿಕ ಒಕ್ಕೂಟವು ಖರೀದಿಸಿದೆ. ಈ ವರ್ಷದ ಮೊದಲಾರ್ಧದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಈ ಸ್ವಾಧೀನ ಪ್ರಕ್ರಿಯೆಯ ಒಟ್ಟು ಮೊತ್ತ 921 ದಶಲಕ್ಷ ಡಾಲರ್‌. ಈ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಪಟ್ನಿ ಕಂಪ್ಯೂಟರ್‌ನ ಷೇರು ಬೆಲೆ ಶೇ 1.46ರಷ್ಟು ಏರಿಕೆಯಾಗಿದೆ. ಐಟಿ ಸೇವಾ ಉದ್ದಿಮೆ ರಂಗದಲ್ಲಿ ಇದು ಹೊಸ ದೊಡ್ಡ ಒಪ್ಪಂದಗಳನ್ನು ಹಾಗೂ ಗುತ್ತಿಗೆಗಳನ್ನು ಪಡೆಯಲು ನೆರವಾಗಲಿದೆ.

ಸಂಸ್ಥೆಯ ಸ್ಥಾಪಕರಾಗಿರುವ ನರೇಂದ್ರ ಪಟ್ನಿ, ಗಜೇಂದ್ರ ಪಟ್ನಿ ಮತ್ತು ಅಶೋಕ್ ಪಟ್ನಿ ಅವರ ಶೇಕಡಾ 45.60ರಷ್ಟು ಪಾಲು ಬಂಡವಾಳವನ್ನು ಮತ್ತು ಜನರಲ್ ಅಟ್ಲಾಂಟಿಕ್‌ನ ಶೇ 17.4ರಷ್ಟು ಪಾಲನ್ನು ಖರೀದಿಸಲಾಗುವುದು ಎಂದು ಐಗೇಟ್‌ನ ಸಿಇಒ ಫಣೀಶ್ ಮೂರ್ತಿ ಹೇಳಿದ್ದಾರೆ.

1978ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಟ್ನಿ ಕಂಪ್ಯೂಟರ್, ಮಧ್ಯಮ ಗಾತ್ರದ ಐಟಿ ಸೇವಾ ಸಂಸ್ಥೆಯಾಗಿದೆ. ದೂರಸಂಪರ್ಕ, ವಿಮೆ, ನಾಗರಿಕ ಸೇವೆ ಮತ್ತು ಚಿಲ್ಲರೆ ವಹಿವಾಟು ವಲಯದಲ್ಲಿ ಸೇವೆ ಒದಗಿಸುತ್ತಿದೆ. 2010ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಅವಧಿಯಲ್ಲಿ ಸಂಸ್ಥೆಯಲ್ಲಿ ಒಟ್ಟು 16,446 ಉದ್ಯೋಗಿಗಳು ಮತ್ತು 282 ಗ್ರಾಹಕರು ಇದ್ದಾರೆ.(ಸಾಫ್ಟ್ ವೇರ್ ಕಂಪನಿ)

English summary
In a significant consolidation in the fragmented IT services market US headquartered iGate Corporation, headed by former Infosys top honcho Phaneesh Murthy, moved to pick up a 63 per cent stake in Patni Computer Systems Ltd in a deal estimated at $ 1.22 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X