ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಮುನ್ನ ಎಚ್ ಐವಿ ಪರೀಕ್ಷೆ ಕಡ್ಡಾಯ!

By Mahesh
|
Google Oneindia Kannada News

KWC demands HIV test before marriage
ತಿರುವನಂತಪುರಂ, ಜ.11: ಮದುವೆಗೆ ಮುನ್ನ ಎಚ್ ಐವಿ ಪರೀಕ್ಷೆ ಕಡ್ಡಾಯಗೊಳಿಸುವಂತೆ ಕೇರಳ ಮಹಿಳಾ ಆಯೋಗ(KWC) ಇಲ್ಲಿನ ಸರ್ಕಾರಕ್ಕೆ ಆಗ್ರಹ ಪೂರ್ವಕ ಮನವಿ ಪತ್ರ ಕಳಿಸಿದೆ. ಇಡೀ ಮಾನವ ಸಮಾಜಕ್ಕೆ ಮಾರಕವಾಗಿರುವ ಈ ಕಾಯಿಲೆ ಮೇಲೆ ನಿಯಂತ್ರಣ ಸಾಧಿಸಲು ಈ ರೀತಿಯ ಕ್ರಮ ಅನಿವಾರ್ಯ ಎಂದು ಕೆಡಬ್ಲ್ಯೂಸಿಯ ಮುಖ್ಯಸ್ಥೆ ಮಾಜಿ ಜಡ್ಜ್ ಡಿ ಶ್ರೀದೇವಿ ಹೇಳಿದ್ದಾರೆ.

ಎಚ್ ಐವಿ ಪಾಸಿಟಿವ್ ಎಂದು ಗೊತ್ತಿದ್ದರೂ ಕೂಡಾ ಹಲವು ಮಂದಿ ಪುರುಷರು ಮದುವೆಗೆ ಮುಂದಾಗುತ್ತಿದ್ದಾರೆ. ನಂತರ ಎಚ್ ಐವಿ ಪೀಡಿತ ಪುರುಷರಿಂದ ಅವರ ಪತ್ನಿಯರಿಗೆ ರೋಗ ಹರಡುತ್ತಿದೆ. ಇದು ಏನೂ ಅರಿಯದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ, ಆರ್ಥಿಕವಾಗಿ ಸಮಾಜವನ್ನು ದುರ್ಬಲಗೊಳಿಸುತ್ತಿರುವ ಈ ಮಹಾಪುರುಷರ ಒಂದು ಸಣ್ಣ ತಪ್ಪಿನಿಂದ ಜೀವನವಿಡೀ ಇವರನ್ನು ನಂಬಿಕೊಂಡವರು ಹೆಣಗಬೇಕಾಗಿದೆ ಎಂದು ಮಹಿಳಾ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.

ಕೇರಳದ ಏಡ್ಸ್ ನಿಯಂತ್ರಣ ಪ್ರಾಧಿಕಾರ(KSACS) ವರದಿಯಂತೆ ಸುಮಾರು 55,167 ಮಂದಿಗೆ ಎಚ್ ಐವಿ/ಏಡ್ಸ್ ರೋಗ ಅಂಟಿದೆ. ರಾಷ್ಟ್ರಮಟ್ಟಕ್ಕೆ ಹೋಲಿಸಿದರೆ ಕೇರಳದಲ್ಲಿ ಶೇಕಡವಾರು ಏರಿಕೆ ಪ್ರಮಾಣ ಕಡಿಮೆಯಿದೆ. ಮುಂದಿನ ತಿಂಗಳಿನ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಕೇರಳ ಸರ್ಕಾರ ಮಸೂದೆ ಮಂಡನೆ ಮಾಡುವ ನಿರೀಕ್ಷೆಯಿದೆ. ಈ ಮಸೂದೆ ಇತರೆ ರಾಜ್ಯಗಳಿಗೂ ಮಾದರಿಯಾಗಲಿದೆ ಎಂದು ಮಹಿಳಾ ಆಯೋಗದ ಮುಖ್ಯಸ್ಥೆ ಶ್ರೀದೇವಿ ಹೇಳಿದ್ದಾರೆ. [ಎಚ್ ಐವಿ]

English summary
The Kerala Women's Commission (KWC) has requestedKerala government to pass resolutions a law to ensure that all HIV test is made compulsary to those who get marry. This move is after KSACS Report on HIV/AIDS Patients indicated on increase in HIV postive patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X