ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೆಲಸದವಳ ಹಲ್ಲೆಗಾಗಿ ಸೌದಿ ಮಹಿಳೆಗೆ ಶಿಕ್ಷೆ

By Prasad
|
Google Oneindia Kannada News

Physicall assault on woman
ದುಬೈ, ಜ. 11 : ಇಂಡೋನೇಷ್ಯಾ ಮೂಲದ ಮನೆಗೆಲಸದವಳ ಮೇಲೆ ದೈಹಿಕ ದೌರ್ಜನ್ಯವೆಸಗಿದ ಆರೋಪಕ್ಕೆ ತುತ್ತಾಗಿದ್ದ ಸೌದಿ ಅರೇಬಿಯಾದ ಮಹಿಳೆಗೆ ಮೂರು ವರ್ಷಗಳ ಕಠಿಣ ಕಾರಾಗ್ರಹ ವಾಸ ಶಿಕ್ಷೆ ವಿಧಿಸಲಾಗಿದೆ.

23 ವರ್ಷ ಇಂಡೋನೇಷ್ಯಾದ ಮಹಿಳೆ ಸುಮಿತಿ ಮುಸ್ತಾಫಾ ಮೇಲೆ ಚೂರಿಯಿಂದ ತಿವಿದ, ದೈಹಿಕವಾಗಿ ಹಲ್ಲೆ ಮಾಡಿದ ಮತ್ತು ಕಬ್ಬಿಣದ ಸಲಾಕೆಯಿಂದ ಸುಟ್ಟದ್ದಕ್ಕಾಗಿ ಹೆಸರು ಬಹಿರಂಗವಾಗದ ಸೌದಿ ಮಹಿಳೆಯ ಮೇಲೆ ಮೊಕದ್ದಮೆ ಹೂಡಲಾಗಿತ್ತೆಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದವರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದು ಅಥವಾ ಲೈಂಗಿಕವಾಗಿ ದೌರ್ಜನ್ಯವೆಸಗುವುದು ಮಹಾ ಅಪರಾಧ. ಆರೋಪ ಸಾಬೀತಾಗಿದ್ದರಿಂದ ಮದಿನಾದ ನ್ಯಾಯಾಲಯ ಸೌದಿ ಮಹಿಳೆಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಈ ಪ್ರಕರಣ ದುಬೈನಲ್ಲಿ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಮೂಳೆ ಮುರಿತ ಮತ್ತು ತೀವ್ರಸ್ವರೂಪದ ಸುಟ್ಟಗಾಯಗಳಿಂದ ಆಸ್ಪತ್ರೆ ಸೇರಿದ್ದ ಮುಸ್ತಾಫಾ ಮೇಲೆ ವಿಶ್ವದೆಲ್ಲೆಡೆಯಿಂದ ಅನುಕಂಪದ ವ್ಯಕ್ತವಾಗಿತ್ತು. ಆದರೆ, ಆಕೆಯ ಮೇಲಾದ ಹಲ್ಲೆಗೂ ತನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂದು ಸೌದಿ ಮಹಿಳೆ ನ್ಯಾಯಾಲಯದಲ್ಲಿ ವಾದಿಸಿದ್ದಳು.

ಸರಣಿ ಶಸ್ತ್ರಕ್ರಿಯೆಗೆ ಮುಸ್ತಾಫಾ ಒಳಗೊಂಡಿದ್ದರೂ ಆಕೆ ಇನ್ನೂ ಮೊದಲಿನಂತಾಗಲು ಕೆಲ ಸಮಯ ಬೇಕು ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳಿದ್ದಾರೆ. ಅವರ ಪ್ರಕಾರ, ಮುಸ್ತಾಫಾಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. [ದೌರ್ಜನ್ಯ]

English summary
A Saudi Arabian woman has been sentences to 3 years imprisonment for torchuring a housemaid from Indonesia physically in Dubai. 23 year old Sumiati Mustafa was stabbed, beaten up and burnt using iron rod by Saudi woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X