ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಮೇರ್ ಸ್ಫೋಟದಲ್ಲಿ ಹಿಂದು ಮುಸ್ಲಿಂ ಕೈವಾಡ

By Mrutyunjaya Kalmat
|
Google Oneindia Kannada News

Swami Aseemananda
ನವದೆಹಲಿ, ಜ. 11 : ಹಿಂದೂಗಳು ದರ್ಗಾಕ್ಕೆ ಹೋಗಬಾರದು ಎಂಬ ಕಾರಣಕ್ಕಾಗಿ ರಾಜಸ್ತಾನದ ಅಜ್ಮೇರ್ ಚಿಸ್ತೀ ಷರೀಫ್ ದರ್ಗಾದಲ್ಲಿ ಬಾಂಬ್ ಸ್ಫೋಟಿಸಲಾಯಿತು. ಈ ಘಟನೆಯ ಹಿಂದೆ ಹಿಂದೂ ಮುಸ್ಲಿಂ ಸಂಘಟನೆಗಳು ಭಾಗಿಯಾಗಿವೆ ಎಂದು ಶಬರಿಧಾಮ ಆಶ್ರಮದ ಅಸೀಮಾನಂದ ಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ.

ಸ್ಫೋಟಕ್ಕೆ ದರ್ಗಾವನ್ನೇ ಏಕೆ ಆಯ್ಕೆ ಮಾಡಿಕೊಂಡಿವೆ ಎಂಬ ಸಂಗತಿಯನ್ನು ವಿವರಿಸಿದ ಅಸೀಮಾನಂದ ಸ್ವಾಮಿ, ಅಜ್ಮೇರ್ ಷರೀಫ್ ದರ್ಗಾಕ್ಕೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದನ್ನು ತಡೆಯಬೇಕು ಎಂಬ ಏಕೈಕ ಕಾರಣದಿಂದ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಯಿತು ಎಂದು ಹೇಳಿದ್ದಾರೆ.

42 ಪುಟಗಳ ತಪ್ಪೊಪ್ಪಿಗೆ ವಿವರದಲ್ಲಿ ಅಸೀಮಾನಂದ ಸ್ವಾಮಿ, ಸ್ಫೋಟದಲ್ಲಿ ಪಾಲ್ಗೊಂಡವರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಆರ್ಎಸ್ಎಸ್ ಪ್ರಮುಖ ಕಾರ್ಯಕರ್ತ ಇಂದ್ರೇಶ್ ಕುಮಾರ್ ಅವರು ಅಜ್ಮೇರ್ ದರ್ಗಾ, ಮಾಲೇಗಾಂವ್ ಸ್ಫೋಟ, ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಹಾಗೂ ಸಮ್ ಜೋತಾ ರೈಲು ಸ್ಫೋಟದಲ್ಲಿ ಕೈವಾಡವಿದೆ. ಜೊತೆಗೆ ಆರ್ಎಸ್ಎಸ್ ಪ್ರಚಾರಕ ಸುನೀಲ್ ಜೋಶಿ, ಸಾಧ್ವಿ ಪ್ರಗ್ಯಾಸಿಂಗ್, ಸಂದೀಪ್ ಡಾಂಗೆ, ರಾಮಜೀ ಕಾಲಸಂಗ್ರ ಕೂಡಾ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಸಂಘದಿಂದ ಉಗ್ರರ ಅಮಾನತು : ಭಯೋತ್ಪಾದನೆಯಲ್ಲಿ ತೊಡಗಿರುವ ಸಂಘದ ತೀವ್ರಗಾಮಿಗಳಿಗೆ ಸಂಘ ಬಿಟ್ಟು ಹೊರನಡೆಯುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸ್ಪಷ್ಟಪಡಿಸಿದ್ದಾರೆ. ಭಯೋತ್ಪಾದನೆ ಆರೋಪ ಹೊತ್ತುಕೊಂಡು ಸಂಘದಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ತೀವ್ರಗಾಮಿಗಳಿಗೆ ಸಂಘ ಬಿಟ್ಟು ಹೋಗುವಂತೆ ಸೂಚಿಸಿ ಬಹಳ ದಿನಗಳೆ ಆಗಿವೆ ಎಂದು ಅವರು ಹೇಳಿದರು. 2007ರಲ್ಲಿ ನಡೆದ ಅಜ್ಮೇರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಸೀಮಾನಂದನನ್ನು ಸಿಬಿಐ ಪೊಲೀಸರು ಇತ್ತೀಚೆಗೆ ಹರಿದ್ವಾರ್ ದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.(ಆರ್ಎಸ್ಎಸ್)

English summary
Arrested Rashtriya Swayamsevak Sangh (RSS) leader Swami Aseemanand has confessed that he and other Hindu activists were involved in bombings at Muslim religious places because they wanted to answer every Islamist terror act with 'a bomb for bomb' policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X