ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಬಳಾಪುರಂ ಗ್ರಾಮದಲ್ಲಿ ಸಿಬಿಐ ಬೂಟುಗಳ ಸದ್ದು

By * ರೋಹಿಣಿ, ಬಳ್ಳಾರಿ
|
Google Oneindia Kannada News

CBI eyes Obulapuram illegal mining
ಬಳ್ಳಾರಿ, ಜ. 11: ಕರ್ನಾಟಕ ಆಂಧ್ರದ ಗಡಿಯಲ್ಲಿಯ ಓಬಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿಯ ವಿವಾದಿತ ಆರು ಗಣಿಗಳ ಪ್ರದೇಶಕ್ಕೆ ಸಿಬಿಐನ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ಮತ್ತು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ತಂಡದ ನೇತೃತ್ವವನ್ನು ಆಂಧ್ರದ ಸತ್ಯಂ ಸಂಸ್ಥೆಯ ಆರ್ಥಿಕ ಅವ್ಯವಹಾರಗಳ ತನಿಖೆ ನಡೆಸಿದ್ದ ಸಿಬಿಐನ ಡಿಐಜಿ ಲಕ್ಷ್ಮೀನಾರಾಯಣ ಅವರು ವಹಿಸಲಿದ್ದು, ಸಾಕಷ್ಟು ಮಹತ್ವ ಪಡೆದಿದೆ. ಇಂದು ಬೆಳಗ್ಗೆ 11.30 ನಿಮಿಷ ಸುಮಾರಿಗೆ 10 ಜೀಪುಗಳಲ್ಲಿ ಓಬಳಾಪುರ ಪ್ರವೇಶಿಸಿರುವ ಸಿಬಿಐ ಅಧಿಕಾರಿಗಳು ಗಣಿ ಪ್ರದೇಶ ಪರಿಶೀಲನೆಗೆ ಸಿದ್ಧತೆ ನಡೆಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಆಂಧ್ರ ಸರ್ಕಾರ ಓಬಳಾಪುರಂ ಗ್ರಾಮ ವ್ಯಾಪ್ತಿಯ ಆರು ಗಣಿಗಳ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಹಿನ್ನಲೆಯಲ್ಲಿ ಈ ತಂಡ ಗಣಿಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯ ಬಿಗಿ ಬಂದೋಬಸ್ತ್ ಭದ್ರತೆಯನ್ನು ಒದಗಿಸಲು ಪೊಲೀಸರಿಗೆ ಸಂದೇಶ ರವಾನೆ ಆಗಿದೆ.

ತನಿಖೆಗೆ ಓಕೆ ಅಂದ ಸುಪ್ರೀಂ: ಸಿಬಿಐ ತನಿಖೆ ಮುಂದುವರೆಸದಂತೆ ಓಎಂಸಿ ಗಣಿ ಕಂಪನಿ ಆಂಧ್ರ ಹೈಕೋರ್ಟ್‌ನಲ್ಲಿ ಪಡೆದಿದ್ದ ತಡೆಯಾಜ್ಞೆ ಇತ್ತೀಚೆಗೆ ತೆರವಾಗಿದ್ದು, ತನಿಖೆ ಚುರುಕಿನಿಂದ ನಡೆದಿದೆ. ಅಲ್ಲದೇ, ಇದೇ ಆರು ಗಣಿಗಳ ಕುರಿತು ಸುಪ್ರೀಂಕೋರ್ಟ್‌ನ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ.

ಸಿಇಸಿಯ ವರದಿಯ ಹಿನ್ನಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಗದ್ದಲ ನಡೆದಿದೆ. ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಮಧ್ಯೆ ರಾಜಕೀಯ ತಿಕ್ಕಾಟವೆ ನಡೆದಿದೆ. ಈ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ಜನವರಿ 11 ಮತ್ತು 12 ರಂದು ಗಣಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಸಿಬಿಐ ಅಧಿಕಾರಿಗಳು ಗಣಿಗಳಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಸಂಬಂಧಿಸಿದ ಗಣಿ ಉದ್ಯಮಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಅಗತ್ಯ ಮಾಹಿತಿ ನೀಡಲಿದ್ದಾರೆ. [ಅಕ್ರಮ ಗಣಿಗಾರಿಕೆ]

English summary
CBI team lead by DIG Lakshmi Narayan entered Obulapuram town today and plan to raid many illegal mining firms connected to Karnataka Andra Pradesh border. After the CEC report submission, CBI officer Lakshmi narayan who raided Scam hit Satyam computers earlier is now ready with team t o curb illegal mining
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X