• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಣಗಳ ಮೇಲೆ ಧೋನಿ ಪಡೆ ಭರ್ಜರಿ ಸವಾರಿ

By Mahesh
|
ಡರ್ಬನ್, ಜ.9: ಇಲ್ಲಿನ ಮೊಸೆಸ್ ಮಬಿದಾ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟ್ವೆಂಟಿ 20 ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಪ್ರವಾಸಿ ಭಾರತದ ಯುವ ಪಡೆ 21 ರನ್‌ಗಳಿಂದ ಬಗ್ಗು ಬಡಿಯುವಲ್ಲಿ ಯಶಸ್ಸು ಕಂಡಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಉತ್ತಮ ಆಟ ಪ್ರದರ್ಶಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಗೆಲ್ಲಲು 169 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 147 ರನ್ ಮಾಡಿ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್ ಮೋರ್ನ್ ವ್ಯಾನ್ ವೈಕೆ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಇರುವ 67 ರನ್ ಬಾರಿಸಿ ಭಾರತದ ಬೌಲರ್‌ಗಳ ಎದೆ ನಡುಗಿಸಿದರು. ಆದರೆಮ್ ವೈಕೆಗೆ ಇತರ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ವಿಜಯದ ಗುರಿ ತಲುಪಲು ಸಾಧ್ಯವಾಗಲಿಲ್ಲ.

ವಿಜಯದ ಗುರಿಯನ್ನು ಬೆಂಬತ್ತುವ ಹಂತದಲ್ಲಿ ದಕ್ಷಿಣ ಆಫ್ರಿಕಾ 2ನೇ ಓವರ್‌ನ 2ನೇ ಎಸೆತದಲ್ಲಿ 1 ರನ್ ಮಾಡಿದ್ದ ಹಾಶಿಮ್ ಅಮ್ಲ ಅವರು ವೇಗಿ ನೆಹ್ರಾಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಇವರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಆಗಮಿಸಿದ್ದ ಮೋರ್ನ್ ವ್ಯಾನ್ ವೈಕೆ ಮಾತ್ರ ಗುಡುಗತೊಡಗಿದರು. ಆದರೆ ತಂಡದ ಮೊತ್ತ 31 ತಲುಪುವ ಹೊತ್ತಿಗೆ ಇಂಗ್ರಾಮ್ (2) ಅವರಿಗೆ ಮುನಾಫ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.

ಎಬಿ ಡೆವಿಲಿಯರ್ಸ್‌ (14), ಡೇವಿಡ್ ಮಿಲ್ಲರ್ (10), ನಾಯಕ ಜೋನ್ ಬೋಥಾ (25), ವಯ್ನೆ ಪಾರ್ನೆಲ್ (14) ಎರಡಂಕಿಯ ಕೊಡುಗೆಯನ್ನು ತಂಡದ ಖಾತೆಗೆ ನೀಡಿದರು. ಆದರೆ ಡುಮಿನಿ (0) ಹಾಗೂ ಪೀಟರ್ಸನ್ (2) ಅವರಿಂದ ಹೆಚ್ಚಿನ ಕೊಡುಗೆ ಬರಲಿಲ್ಲ. ಭಾರತದ ಪರ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿ ಆಶೀಶ್ ನೆಹ್ರಾ 22ಕ್ಕೆ 2, ಯೂಸುಫ್ ಪಠಾಣ್ 22ಕ್ಕೆ 2 ವಿಕೆಟ್ ಪಡೆದರೆ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್.ಅಶ್ವಿನ್, ಯುವರಾಜ್ ಸಿಂಗ್ ತಲಾ 1 ವಿಕೆಟ್ ಪಡೆದರು.

ಟ್ವೆಂಟಿ 20 ಪಂದ್ಯದ ಸ್ಕೋರ್ ಕಾರ್ಡ್

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹವಾಗ್‌ರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ರೋಹಿತ್ ಶರ್ಮರ ಆಕರ್ಷಕ ಅರ್ಧಶತಕ (34 ಎಸೆತಗಳಲ್ಲಿ 53 ರನ್), ಮತ್ತು ಸುರೇಶ್ ರೈನಾ (23 ಎಸೆತಗಳಲ್ಲಿ 41)ರ ನೆರವಿನಲ್ಲಿ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಮಾಡಿತ್ತು.

ಭಾರತದ ಉತ್ತಮ ಮೊತ್ತ:ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಭಾರತ 82 ನಿಮಿಷಗಳ ಆಟದಲ್ಲಿ ನಿಗದಿತ 20 ಓವರ್‌ಗಳಲ್ಲಿ 8.40 ಸರಾಸರಿಯಂತೆ 6 ವಿಕೆಟ್ ನಷ್ಟದಲ್ಲಿ 168 ರನ್‌ಗಳನ್ನು ಗಳಿಸಿತ್ತು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ (14) ಬೇಗನೆ ಔಟಾದರೆ, ಯುವರಾಜ್ ಸಿಂಗ್ (12), ಯೂಸುಫ್ ಪಠಾಣ್ (6), ಮಹೇಂದ್ರ ಸಿಂಗ್ ಧೋನಿ (10) ತಂಡದ ಖಾತೆಗೆ ತಮ್ಮಿಂದ ಸಾಧ್ಯವಿರುವ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು.

ರೋಹಿತ್ ಶರ್ಮರ ಆಕರ್ಷಕ ಅರ್ಧಶತಕ(34 ಎಸೆತಗಳಲ್ಲಿ 53 ರನ್) ಮತ್ತು ಸುರೇಶ್ ರೈನಾ (23 ಎಸೆತಗಳಲ್ಲಿ 41) ರ ವಿರಾಟ್ ಕೊಹ್ಲಿ (28) ಇವರ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಭಾರತ ದೊಡ್ಡ ಸ್ಕೋರ್ ದಾಖಲಿಸಿ, ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಸಿಲುಕಿಸಿತ್ತು. ರಸ್ಟಿ ಥೇರೊನ್ 39ಕ್ಕೆ 2 ವಿಕೆಟ್, ಪಾರ್ನೆಲ್ , ಬೋಥಾ, ಡುಮಿನಿ 1 ವಿಕೆಟ್ ಕಬಳಿಸಿದರು. [ಟ್ವೆಂಟಿ20]

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India registered a comprehensive victory over South Africa in one off Twenty 20 Cricket match held at Durban lastday(jan,9). Rohit Sharma and Suresh Raina and Virat kohli helped India to put up a challenging target to Protreas. Morne van Dyke fought well but RSA fell short of target by 21 runs. Rohit Sharma declared as Man of the Match.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more