ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಗೆ ಯುದ್ಧ ವಿಮಾನ ತೇಜಸ್ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಜ.10: ದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ತೇಜಸ್(LCA) ಇಂದು ವಿದ್ಯುಕ್ತವಾಗಿ ಭಾರತೀಯ ವಾಯು ಸೇನೆಗೆ ಸೇರ್ಪಡೆಗೊಂಡಿದೆ. ಸುಮಾರು 1800 ಗಂಟೆಗಳ ಪರೀಕ್ಷಾರ್ಥ ಹಾರಾಟ ಹಾಗೂ ವಿದೇಶಗಳಲ್ಲೂ ಪ್ರಾಯೋಗಿಕ ಪರೀಕ್ಷೆಗಳು ನಡೆದು ಯಶಸ್ವಿಯಾಗಿ ಪೂರೈಸಲಾಗಿತ್ತು. ಇಂದು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ ಅಂಟನಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಪಿವಿ ನಾಯಕ್ ಅವರ ಸಮ್ಮುಖದಲ್ಲಿ ವಾಯುಪಡೆಗೆ ತೇಜಸ್ ಸೇರ್ಪಡೆಗೊಂಡಿದೆ.

ರಕ್ಷಣಾ ಉತ್ಪಾದನಾ ಹಾಗೂ ಸಂಶೋಧನಾ ಸಂಸ್ಥೆಗಳಾದ ಎಡಿಎ, ಡಿಆರ್ ಡಿಓ ಹಾಗೂ ಎಲ್ ಆರ್ ಡಿಇ ಪಟ್ಟ ಶ್ರಮಕ್ಕೆ ಬೆಲೆ ಸಿಕ್ಕಿಂದ್ದಂತಾಗಿದೆ. 2001ರ ಜ.4 ರಂದು ಮೊದಲ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿತ್ತು. ನಂತರ 2001ರಲ್ಲಿ ಕಾರ್ಯಕ್ಷಮತೆ ಬಗ್ಗೆ ಮತ್ತೊಂದು ಪರೀಕ್ಷೆ ಒಳಪಡಿಸಿದಾಗ ಮಿರಾಜ್ 2000 ಜೆಟ್ ವಿಮಾನಕ್ಕಿಂತ ಸುಲಭ ಹಾರಾಟ ಹಾಗೂ ರೆಡಾರ್ ಸಂಪರ್ಕ ಸಾಧನಗಳನ್ನು ಸಾಧಿಸಲಾಗಿತ್ತು. ಒಟ್ಟಾರೆ 1500ಕ್ಕೂ ಹೆಚ್ಚು ಪರೀಕ್ಷಾ ಹಂತಗಳನ್ನು ತೇಜಸ್ ದಾಟಿ ಬಂದಿದೆ.

ಈ ಶಕ್ತಿಶಾಲಿ ಲಘು ಯುದ್ಧ ವಿಮಾನಕ್ಕೆ ತೇಜಸ್ ಎಂದು ನಾಮಕರಣ ಮಾಡಿದವರು ಮಾಜಿ ಪ್ರಧಾನಿ ಎಬಿ ವಾಜಪೇಯಿ. ಭಾರತೀಯ ವಾಯುಸೇನೆ ಅಲ್ಲದೆ, ನೌಕಾದಳ 50 ತೇಜಸ್ ವಿಮಾನಕ್ಕಾಗಿ ಬೇಡಿಕೆ ಇಟ್ಟಿದೆ. ಡಿಸೆಂಬರ್ ಅಂತ್ಯಕ್ಕೆ ನಾಲ್ಕು ತೇಜಸ್ ವಾಯುಪಡೆ ಸೇರಲಿದೆ. ಪ್ರತಿ ತೇಜಸ್ ತಯಾರಿಕೆಗೆ ಸುಮಾರು 200 ಕೋಟಿ ವೆಚ್ಚ ತಗುಲುತ್ತದೆ. ಶೇ.75ರಷ್ಟು ಭಾಗ ದೇಶಿ ನಿರ್ಮಿತವಾಗಿದ್ದು, ಶೇ.25 ರಷ್ಟು ಭಾಗವನ್ನು ವಿದೇಶಗಳಿಂದ ಪಡೆಯಲಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಪಿವಿ ನಾಯಕ್ ಹೇಳಿದರು. [ವಿಮಾನ]

English summary
Tejas the Light Combat Aircraft (LCA) The indigenously developed aircraft is developed jointly by the Defence Research and Development Organisation (DRDO) and Hindustan Aeronautics Limited (HAL) got initial operational clearance and inducted to Indian Air Force(IAF)today(Jan 10) at Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X