ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಗೆ ಯೋಗೀಶ್ವರ್ ಅವಶ್ಯಕತೆ ಇಲ್ಲ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

HD Kumaraswamy on CP yogeshwar
ಮಂಡ್ಯ, ಜ. 10: ನನ್ನೊಂದಿಗೆ ಚನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಪಕ್ಷಕ್ಕೆ ಬರುವ ಬಗ್ಗೆ ಮಾತುಕತೆ ನಡೆಸಿದ್ದಾರೆಂಬುದು ಸುಳ್ಳಿನ ವಿಚಾರವಾಗಿದೆ. ಚನ್ನಪಟ್ಟಣದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷವನ್ನ ಸಧೃಢಗೊಳಿಸಿದ್ದಾರೆಂಬುದಕ್ಕೆ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯ್ತಿ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ಆದರೆ ಅನಗತ್ಯವಾಗಿ ಯೋಗೀಶ್ವರ್ ಜೆಡಿಎಸ್‌ಗೆ ಬರುತ್ತಾರೆಂಬ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾರೆ. ಯೋಗೀಶ್ವರ್‌ರಂತಹ ಅವಕಾಶವಾದಿ ರಾಜಕಾರಣಿಗಳು ಜೆಡಿಎಸ್ ಪಕ್ಷಕ್ಕೆ ಅಗತ್ಯವಿಲ್ಲವೆಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಠುಸ್ ಆಗುವ ಬಲೂನ್ ಬಿಜೆಪಿ : 8 ವಿಧಾನಸಭಾ ಸದಸ್ಯರನ್ನ ರಾಜೀನಾಮೆ ಕೊಡಿಸಿದ ಬಿಜೆಪಿ ನಾಯಕರು ಆಪರೇಷನ್ ಕಮಲವೆಂಬ ಹೆಸರು ನೀಡಿದ್ದಾರೆ. ನಂತರ ಗ್ರಾಮಪಂಚಾಯಿತಿ ತಾಲ್ಲೂಕ್ ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲೂ ಕೂಡ ಆಪರೇಷನ್ ಕಮಲ ಆರಂಭಿಸಿದ್ದಾರೆ.

ಬಿಜೆಪಿ ಸರ್ಕಾರ ಆರಂಭಿಸಿರುವ ಆಪರೇಷನ್ ಕಮಲ ಬಹಳ ದಿನ ಮುಂದುವರೆಯಲು ಸಾಧ್ಯವಾಗುವುದಿಲ್ಲ. ಅವೆಲ್ಲಾ ತಾತ್ಕಾಲಿಕವಾದಂತಹ ಸಂತೋಷ ಪಡುತ್ತಿದ್ದಾರೆ. ಗಾಳಿ ತುಂಬಿದ ಬಲೂನ್‌ನಂತಿರುವ ಬಿಜೆಪಿ ಸರ್ಕಾರ ಯಾವಾಗ ಬೇಕಾದ್ರು ಠುಸ್ ಆಗಬಹುದು ಎಂದು ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರ ಶೀಘ್ರ ಪತನದ ಬಗ್ಗೆ ಮಾರ್ಮಿಕವಾಗಿ ನುಡಿದರು.

ಚರ್ಚೆ : ರಾಮನಗರ ಜಿಲ್ಲೆಯ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯ್ತಿ ಚುನಾವಣೆ ಸೋಲು ಗೆಲುವಿನ ಬಗ್ಗೆ ನಾಲ್ಕು ಕ್ಷೇತ್ರಗಳ ಮುಖಂಡರಗಳೊಂದಿಗೆ ಸೇರಿ ಚರ್ಚೆ ನಡೆಸಲಾಗುವುದು ಎಂದು ಎಚ್ಡಿಕೆ ಹೇಳಿದರು.

ಬಿಡದಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಭಿನ್ನಾಭಿಪ್ರಾಯ ಮುನಿಸಿನಿಂದ ಪಕ್ಷಕ್ಕೆ ಸೋಲಾಗಿದೆ. ಅದೇ ರೀತಿ ಕೂಟಗಲ್ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ರೈತರ ಭೂಮಿಯನ್ನ ಕೊಳ್ಳೆ ಹೊಡೆದಿದ್ದ ಸರ್ಕಾರಿ ನೌಕರನೊಬ್ಬ ಅಕ್ರಮವಾಗಿ ಗಳಿಸಿದ ಹಣವನ್ನ ಚೆಲ್ಲಿ ಮತದಾರರನ್ನ ಸೆಳೆದು ತನ್ನ ಪತ್ನಿಯನ್ನ ಗೆಲ್ಲಿಸಿಕೊಂಡಿದ್ದಾರೆ.

ಎಚ್ಡಿಕೆ ಬೇಸರ: ರಾಮನಗರ ಜನರ ಮನೆಯ ಮಗನಂತಿರುವ ನನ್ನನ್ನ ಎಲ್ಲಾ ಸಂಧರ್ಭಗಳಲ್ಲಿಯೂ ಬೆಳೆಸಿ ಅತ್ಯುನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ನನ್ನನ್ನ ಬೆಳಿಸಿ ಪೋಷಿಸಿದ ತಂದೆ ತಾಯಂದಿರೇ ಕೂಟಗಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನ ಸೋಲಿಸಿರುವುದಕ್ಕೆ ಬೇಸರವಾಗುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಕ್ಷದ ಏಳಿಗೆ ಶ್ರೇಯಸ್ಸಿಗಾಗಿ ಅರ್ಪಣಾ ಮನೋಭಾವದಿಂದ ಶ್ರಮಿಸಿದ ಮುಖಂಡರಿಗೆ ಕಾರ್ಯಕರ್ತರಿಗೆ ಇದೇ ಸಂಧರ್ಭದಲ್ಲಿ ಹೆಚ್.ಡಿ.ಕೆ ಕೃತಜ್ಞತೆ ಅರ್ಪಿಸಿದರು. ನೂತನ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯ್ತಿ ಸದಸ್ಯರೆಲ್ಲರೂ ಒಗ್ಗೂಡಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡಿ ಸಮರ್ಪಣಾ ಮನೋಭಾವದಿಂದ ಜನತೆ ನೀಡಿರುವ ಅಧಿಕಾರವನ್ನ ಸದ್ಭಳಕೆ ಮಾಡಿಕೊಳ್ಳಬೇಕೆಂದು ಎಚ್ ಡಿ.ಕುಮಾರಸ್ವಾಮಿಯವರು ಕರೆ ನೀಡಿದರು. [ಸಿಪಿ ಯೋಗೀಶ್ವರ್]

English summary
HD Kumaraswamy said JDS is not interested in including Ex MLA CP Yogeshwar and other who resigned their respective post after defeat in recently held Karnataka Zilla Panchayat and Taluk Panchayar Elections. Kumaraswamy gave thanks to voters who elected JDS men in TP elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X