ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋ ಮ್ಯಾಕ್ಸ್ ಮೊಬೈಲ್ ನಲ್ಲಿ ಲೈವ್ ಟಿವಿ

By Mahesh
|
Google Oneindia Kannada News

Micromax eg333 mobile
ಮುಂಬೈ, ಜ.7: ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮೈಕ್ರೋ ಮ್ಯಾಕ್ಸ್ ಹೊಚ್ಚ ಹೊಸ ಆಂಡ್ರ್ಯಾಡ್ ಮೊಬೈಲ್ ಅನ್ನು ಹೊರತರಲು ಸಿದ್ಧತೆ ನಡೆಸಿದೆ. 2010ರಲ್ಲಿ ಸೈಬರ್ ಲೋಕದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಮೊಬೈಲ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಡೆದ ಮೈಕ್ರೋ ಮ್ಯಾಕ್ಸ್ ಹೊಸ ಮೊಬೈಲ್ EG333 ಹೊರ ತರುತ್ತಿದೆ.

ಆಂಡ್ರ್ಯಾಡ್ ಮಾರುಕಟ್ಟೆಗೆ ಕೆಲ ತಿಂಗಳ ಹಿಂದೆಯಷ್ಟೇ ಕಾಲಿಟ್ಟ ಮೈಕ್ರೋಮ್ಯಾಕ್ಸ್ ಗೆ, ಮೊದಲ ಉತ್ಪನ್ನ ಆಂಡ್ರೋ ಎ 60 ಮೂಲಕ ಜನಮನ ಗೆದ್ದಿದೆ. ಎ60ನಲ್ಲಿದ್ದ ಸೌಲಭ್ಯಕ್ಕೆ ಇನ್ನಷ್ಟು ಹೊಸ ಹೊಸ ಸೌಕರ್ಯಗಳನ್ನು ಸೇರಿಸಿ ಇಜಿ333 ಸ್ಮಾರ್ಟ್ ಫೋನ್ ಬರುತ್ತಿದೆ. ಇಜಿ 333ರಲ್ಲಿ ಮೊಟ್ಟಮೊದಲಿಗೆ ಆಕರ್ಷಕವಾಗಿ ಕಾಣಿಸುವುದು ಲೈವ್ ಟಿವಿ ಅಪ್ಲಿಕೇಷನ್. ಈ ಸೌಲಭ್ಯದ ಮೂಲಕ ಗ್ರಾಹಕರು 70 ಕ್ಕೂ ಅಧಿಕ ವಾಹಿನಿಗಳನ್ನು ವೀಕ್ಷಿಸಬಹುದು ಇದಕ್ಕೆ ಪೂರಕವಾಗಿ ಟಾಟಾ ಫೋಟನ್ ಪ್ಲಸ್ ಬೆಂಬಲ ಕೂಡಾ ಮೊಬೈಲಿಗಿದೆ.

ಮೈಕ್ರೋಮ್ಯಾಕ್ಸ್ ಇಜಿ 333 ನಲ್ಲಿ 3.2 ಟಚ್ ಸ್ಕ್ರೀನ್ ಹಾಗೂ 2 ಮೆಗಾ ಪಿಕ್ಸಲ್ ಕೆಮೆರಾವಿದೆ. ಸಿಡಿಎಂಎ ಹಾಗೂ ಜಿಸಿಎಂ ಎರಡೂ ಮಾದರಿಯಲ್ಲೂ ಈ ಮೊಬೈಲ್ ಲಭ್ಯವಿದೆ. ಸುಮಾರು ಇಜಿ333ನಿಂದ 3.1Mbps ಅತಿ ವೇಗದಲ್ಲಿ ಇಂಟರ್ ನೆಟ್ ಸಾಧ್ಯ ಎಂದು ಮೈಕ್ರೋ ಮ್ಯಾಕ್ಸ್ ಹೇಳಿದೆ.

ಮೈಕ್ರೋ ಮ್ಯಾಕ್ಸ್ ಇಜಿ333 ವಿಶೇಷತೆಗಳು:
* 3.2 ಟಚ್ ಸ್ಕ್ರೀನ್
* 2 MP ಕೆಮೆರಾ
* ಸ್ಟಿರಿಯೋ ಎಫ್ ಎಂ ರೇಡಿಯೋ, ರೆಕಾರ್ಡಿಂಗ್ ಸೌಲಭ್ಯದೊಂದಿಗೆ
* ಬ್ಲೂಟೂಥ್ A2DPಬೆಂಬಲಿತ
* ಲೈವ್ ಟಿವಿ ಅಪ್ಲಿಕೇಷನ್
* 512 MB SDRAM
* ಇಂಟರ್ ನೆಟ್ ಡೌನ್ ಲೋಡ್ ವೇಗ 3.1 Mbps
* ಜಿಎಸ್ ಎಂ / ಜಿಪಿಆರ್ ಎಸ್
* Nimbuzz ವಿವಿಧ ತ್ವರಿತ ಸಂದೇಶ ಅಪ್ಲಿಕೇಷನ್
* 3.5 mm ಆಡಿಯೋ ಜಾಕ್
* ಒಪೆರಾ ಬ್ರೌಸರ್

ಜನವರಿ ತಿಂಗಳ ಅಂತ್ಯಕ್ಕೆ ಮೈಕ್ರೋ ಮ್ಯಾಕ್ಸ್ ಇಜಿ333 ಮೊಬೈಲ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಭಾರತದಲ್ಲಿ ಇಜಿ 333 ಮೊಬೈಲ್ ನ ಬೆಲೆ 8,000 ರಿಂದ 10,000ರ ಆಸು ಪಾಸಿನಲ್ಲಿರುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. [ಆಂಡ್ರ್ಯಾಡ್]

English summary
Just months after launching its first Android running mobile, Andro A60, Micromax plans to sustain its rocketing power in India with the launch of EG333. This new smartphone offers LiveTV application with which users can watch 70+ channels on the go with Tata Photon+ support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X