ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಐಸಿಗೆ ಗುಡ್ ಬೈ ಎಂದ ಸಿಪಿ ಯೋಗೀಶ್ವರ

By Mahesh
|
Google Oneindia Kannada News

CP Yogishwar resgins
ಬೆಂಗಳೂರು, ಜ. 7: ರಾಮನಗರ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ ಸೋಲುಂಟಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಕೆಎಸ್‌ಐಸಿ ಅಧ್ಯಕ್ಷ ಸ್ಥಾನಕ್ಕೆ ಸಿ.ಪಿ.ಯೋಗೀಶ್ವರ್ ರಾಜೀನಾಮೆ ನೀಡಿದ್ದಾರೆ. ಕೆಐಸಿಎ ಪುನರುತ್ಥಾನಕ್ಕಾಗಿ, ಕರ್ನಾಟಕ ರೇಷ್ಮೆಗೆ ಹೆಚ್ಚಿನ ಮಾರುಕಟ್ಟೆ ಒದಗಿಸಲು ಸಾಕಷ್ಟು ಶ್ರಮಿಸಿದ್ದ ಯೋಗೀಶ್ವರ್, ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.

ರಾಮನಗರ ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ ಸೊನ್ನೆ ಸಾಧನೆ ಮಾಡಿದ್ದು, ಚನ್ನಪಟ್ಟಣ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ದೊರಕಿಲ್ಲ. ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸಿ.ಪಿ. ಯೋಗೀಶ್ವರ್, 'ಆಪರೇಷನ್ ಕಮಲ"ಕ್ಕೆ ಬಲಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದರು. ಅಲ್ಲದೆ ರಾಮನಗರ ಜಿಲ್ಲಾಧ್ಯಕ್ಷರು ಕೂಡ ಆಗಿದ್ದರು. ಜಿಲ್ಲಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸೋಲಿನ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಸಿ.ಪಿ. ಯೋಗೀಶ್ವರ್ ಪ್ರಕಟಿಸಿದ್ದಾರೆ. ಈ ಮಧ್ಯೆ ಯೋಗೀಶ್ವರ್ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಕೆಎಸ್ಐಸಿ ಯೋಜನೆಗಳ ಹರಿಕಾರ?: ಬಡವರಿಗೆ ಸಿಲ್ಕ್ ಸ್ಯಾರಿ, ಸ್ಪನ್ ಸ್ಕಿಲ್ ಕಾರ್ಖಾನೆಗೆ ಪುನರ್ ಚಾಲನೆ, ಬೃಹತ್ ಸಿಲ್ಕ್ ಷೋರೂಂ ಹೊಕ್ಕ ಮೈಸೂರು ರೇಷ್ಮೆ ಸೀರೆ, ರೇಷ್ಮೆ ಸ್ಮಾರಕ ಭವನ, ಆನ್ ಲೈನ್ ಮೂಲಕ ರೇಷ್ಮೆ ಸೀರೆ ಮಾರಾಟ ಮುಂದಾದ ಯೋಜನೆಗಳನ್ನು ಯೋಗೀಶ್ವರ್ ಹಮ್ಮಿಕೊಂಡಿದ್ದರು. ಇವರ ಅಧಿಕಾರವಧಿಯಲ್ಲಿ ಸಂಸ್ಥೆ ಒಟ್ಟಾರೆ 7.5 ಕೋಟಿ ರೂ. ಲಾಭ ಗಳಿಸಿತ್ತು. [ಸಿಪಿ ಯೋಗೀಶ್ವರ್]

English summary
Former Channapatna MLA Yogeshwar quits as chairman of Karnataka Silk Industries Corporation following defeat o BJP in Channapatna constituency in the Zilla panchayat and Taluk Panchayat elections held recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X