ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡೀಗಡದಲ್ಲಿ ವೃದ್ದೆಯ ಅತ್ಯಾಚಾರ, ಕೊಲೆ?

By Mrutyunjaya Kalmat
|
Google Oneindia Kannada News

Crimebeat
ಚಂಡೀಗಡ, ಜ. 7: ಮಾನವ ಕುಲವೇ ತಲೆತಗ್ಗಿಸುವಂತ ಘಟನೆ ಚಂಡೀಗಡದಲ್ಲಿ ನಡೆದಿದೆ. 75 ವರ್ಷದ ವಯೋವೃದ್ದೆಯ ಮೇಲೆ ಅತ್ಯಾಚಾರ ಎಸಗಿ ನಂತರ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಾರದ ನಂತರ ಬೆಳಕಿಗೆ ನಡೆದಿದೆ.

ಮೃತಪಟ್ಟ ವೃದ್ದೆ ಪಂಜಾಬ್ ಹಂಗಾಮಿ ಅಡ್ವಕೇಟ್ ಜನರಲ್ ಅವರ ಅತ್ತೆ. ಪ್ರತಿಷ್ಟಿತ ಸೆಕ್ಟರ್ 21ರಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವೃದ್ದೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಶವ ಕೊಳೆತು ನಾರುತ್ತಿದ್ದು, ಒಂದು ವಾರದ ಕೆಳಗೆ ಈ ಘಟನೆ ನಡೆದಿರಬಹುದೆಂದು ಮತ್ತು ಅತ್ಯಾಚಾರವೆಸಗಿ ಪಾತಕಿಗಳು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದೆಂದು ಪೋಲಿಸ್ ಆಯುಕ್ತ ನಾನಿಹಾಲ್ ಸಿಂಗ್ ಹೇಳಿಕೆ ನೀಡಿದ್ದಾರೆ.

15 ದಿನಗಳ ಕೆಳಗೆ 5 ವರ್ಷದ ಬಾಲಕನನ್ನು ಅಪಹರಿಸಿ ಕೊಲೆಗೈಯಲಾಗಿತ್ತು. ಇದರ ಬಗ್ಗೆಯೂ ಪೊಲೀಸರಿಗೆ ಯಾವುದೇ ಸುಳಿವು ಇದುವರೆಗೆ ಲಭ್ಯವಾಗಿಲ್ಲ. ಈ ಎರಡು ಘಟನೆಯ ನಂತರ ಚಂಡೀಗಡ ಪೋಲಿಸ್ ಇಲಾಖೆ ಜನತೆಯ ತೀವ್ರ ಟೀಕೆಗೆ ಒಳಗಾಗಿದೆ.(ಕ್ರೈಂ)

English summary
A 75-year-old woman was found dead at her residence in the posh Sector 21 locality of Chandigarh. She lived alone and prima facie seems to have been strangled to death sometime last week. Police suspect she was raped before being murdered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X