ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರಿನ ಚಿದಂಬರೇಶ್ವರ ಆರಾಧನೆಗೆ ಬನ್ನಿ

By * ಚಂದ್ರಶೇಖರ್, ಸವಣೂರು
|
Google Oneindia Kannada News

Audumbarnath Temple, Savanur
ಸವಣೂರ, ಜ.7: ನಗರದ ಶುಕ್ರವಾರ ಪೇಟೆಯಲ್ಲಿರುವ ಅತ್ಯಂತ ಪುರಾತನವಾದ ಶ್ರೀ ಔದುಂಬರೇಶ್ವರ ದೇವಸ್ಥಾನದಲ್ಲಿ ಶ್ರೀ ಚಿದಂಬರೇಶ್ವರರ ಆರಾಧನಾ ಮಹೋತ್ಸವ ಶುಕ್ರವಾರ(ಜ.7)ದಿಂದ ಆರಂಭಗೊಂಡಿದೆ.

ಸತತ ಮೂರು ದಿನಗಳ ಪರ್ಯಂತ ಜರುಗಲಿರುವ ಪುಣ್ಯೋತ್ಸವದ ಅಂಗವಾಗಿ, ದಿ.7 ರಂದು ಪೂರ್ವಾರಾಧನೆ ಹಾಗೂ ಅನ್ನಪೂರ್ಣೆಯ ಪೂಜೆ ಜರುಗಿತು. ಜ.8 ರಂದು ಶ್ರೀ ಚಿದಂಬರೇಶ್ವರರ ಪುಣ್ಯೋತ್ಸವ, ಲಘುನ್ಯಾಸಪೂರ್ವಕ ಲಘುರುದ್ರಾಭಿಷೇಕ, ನವಗ್ರಹ ಗಣಪತಿ ಅರಾಯಿಕಾಣೆ ಹೋಮ ಹಾಗೂ ಸತ್ಯಚಿದಂಬರ ಪೂಜೆಗಳನ್ನು ವಿಶೇಷವಾಗಿ ಕೈಗೊಳ್ಳಲಾಗುತ್ತದೆ.

ಜ.9 ರಂದು ಉತ್ತರಾರಾಧನೆ ಜರುಗಲಿದ್ದು, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ ಸಹಿತ ರುದ್ರಾಭಿಷೇಕ, ವಿಶೇಷ ಅಲಂಕಾರದ ಬುತ್ತಿ ಪೂಜಾ ಕೈಗೊಳ್ಳಲಾಗುತ್ತದೆ. ಆರಾಧನಾ ಮಹೋತ್ಸವದ ನಿಮಿತ್ಯ ಪ್ರತಿನಿತ್ಯ ಕಾಕಡಾರತಿ, ಮಹಾಅಭಿಷೇಕ, ಅಲಂಕಾರ, ಸಂತರಿಂದ ಕೀರ್ತನೆ, ಭಜನೆ, ತೀರ್ಥಪ್ರಸಾದ ವಿತರಣೆ ಜರುಗಲಿದೆ. ಕರ್ಕಿಹಳ್ಳಿಯ ಸಂತಶ್ರೇಷ್ಠ ಸುರೇಶಪಂಥ್ ಜಿ ಪಾಟೀಲ ಅವರ ನೇತೃತ್ವದಲ್ಲಿ ಸಂಪ್ರದಾಯಿಕವಾದ ಭಜನೆ, ಕೀರ್ತನೆ ನೆರವೇರಲಿದೆ.

ಇದರ ಜೊತೆಗೆ ಜ.9 ರಂದು ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ಅರ್ಚಕರಾದ ನಾಗರಾಜ್ ಸಾರಥರಾಮ್ ಹಾಗೂ ವಿನಾಯಕ್ ಸಾರಥರಾಮ್ ಅವರು ದಟ್ಸ್ ಕನ್ನಡ ಪ್ರತಿನಿಧಿಗೆ ತಿಳಿಸಿದ್ದಾರೆ. [ಸವಣೂರು]

English summary
Three day(Jan.7 t0 9) Chidambarareshwara Aaradhan Mahotsav has been organized at Audumbareshwar Temple in Savanur, Haveri district. Sant Sureshpant Patil of Karkihalli bhajan program is scheduled for Jan 9th. Various rituals, pooja, archanas to be held during the mahatsav said main priest Nagaraj sarathram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X