ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟ್ಲದ ಅಡ್ಯನಡ್ಕ ರಾಸಲೀಲೆಗೆ ಹೊಸ ಅಡ್ಡಾ!

By Mahesh
|
Google Oneindia Kannada News

Vitla Adyanadka Sex Scandal
ವಿಟ್ಲ, ಜ.6: ನಿಜಕ್ಕೂ ವಿಟ್ಲಗೆ ಏನೋ ಶಾಪ ಬಡಿದಿದೆ. ಇಲ್ಲಿನ ಕಾಲೇಜಿನ ಹದಿಹರೆಯದವರನ್ನು ಮಾತ್ರ ಕಾಡುತ್ತಿದ್ದ ಮದನ ಕಾಮರಾಜ ಈಗ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದಾನೆ. ಯುವ ಜೋಡಿಗಳ ಅತೃಪ್ತ ಕಾಮನೆಗಳನ್ನು ಕೆರಳಿಸಿ ರಾಸಲೀಲೆಗೆ ಕುಖ್ಯಾತಿಯಾಗುತ್ತಿರುವ ಅಡ್ಯನಡ್ಕದ ಅಡ್ಡಾಗೆ ದೂಡುತ್ತಿದ್ದಾನೆ. ಅಡ್ಯನಡ್ಕದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ದಿನ ನಿತ್ಯ ಕುಚ್ ಕುಚ್ ನಡೆಯುತ್ತಿರುವುದು ಗೊತ್ತಿದ್ದರೂ ಕೂಡಾ ಪೊಲೀಸರೂ ನಿಯಂತ್ರಯಿಸದಿರುವುದು ಸ್ಥಳೀಯ ಸುಶಿಕ್ಷಿತರು ಆಕ್ರೋಶಕ್ಕೆ ಎಡೆಮಾಡಿದೆ.

ಇತ್ತೀಚೆಗೆ ಸಾರಡ್ಕ-ಪುಣಚ ರಸ್ತೆಯ ಕೊಲ್ಲದವು ಅಡ್ಕ ಬಳಿ ಆಟೋ ರಿಕ್ಷಾ ಚಾಲಕ ಹಾಗೂ ಕಾಲೇಜು ವಿದ್ಯಾರ್ಥಿ ಸರಸ ಕಂಡು ಹೌಹಾರಿದ್ದ ಸ್ಥಳೀಯರು, ರಾಸಲೀಲೆಗೆಂದು ಕಾರಿನಲ್ಲಿ ಗುಡ್ಡಕ್ಕೆ ತೆರಳುತ್ತಿದ್ದ ಜೋಡಿಯನ್ನು ಪತ್ತೆ ಹಚ್ಚಿ ಬಳಿಕ ಯುವಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಸಾರಡ್ಕ ಚೆಕ್‌ಪೋಸ್ಟ್ ಬಳಿಯ ತೋರಣಕಟ್ಟೆ ಎಂಬಲ್ಲಿ ನಡೆದಿದೆ.

ಕೇರಳದ ಜೋಡಿ: ಕೇರಳ ಬದಿಯಡ್ಕದ ಯುವಕ ಹಾಗೂ ಅಲ್ಲಿಯವಳೇ ಆದ ಪ್ರೇಯಸಿಯೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ತೋರಣಕಟ್ಟೆಯಲ್ಲಿರುವ ಗುಡ್ಡಪ್ರದೇಶಕ್ಕೆ ತೆರಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಸಂಶಯಗೊಂಡು ಗುಡ್ಡ ಹತ್ತಿ ಯುವಕನನ್ನು ತರಾಟೆಗೆ ತೆಗೆದುಕೊಂಡರು.

ಜನ ಸೇರತೊಡಗಿದಾಗ ಗಾಬರಿಗೊಂಡ ಯುವತಿ ಮೆಲ್ಲಗೆ ಕಾರಿನಿಂದ ಇಳಿದು ಓಡಿ ಪರಾರಿಯಾಗಿದ್ದಾಳೆ. ಇದರಿಂದ ಇನ್ನಷ್ಟು ಸಂಶಯಗೊಂಡ ಸ್ಥಳೀಯರು ಕಾರನ್ನು ತೀವ್ರವಾಗಿ ತಪಾಸಣೆ ನಡೆಸಿದಾಗ ಕಾರಿನೊಳಗೆ ಕಾಂಡೋಮ್ ಪತ್ತೆಯಾಗಿದೆ. ಇದರೊಂದಿಗೆ ಈ ಜೋಡಿ ರಾಸಲೀಲೆಗೆ ಬಂದಿರುವುದು ನಿಜ ಎಂದು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರು ಕಾರಿನ ದಾಖಲೆಪತ್ರಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡು, ಯುವಕನನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದರು. ಯುವತಿಯ ಪತ್ತೆಯಾಗಿಲ್ಲ. ಈಗಾಗಲೇಕಾಲೇಜು ಪ್ರೇಮಿಗಳ ನಾಲ್ಕಾರು ಪ್ರಕರಣಗಳನ್ನು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಕಠಿಣ ಕ್ರಮ ಕೈಗೊಳ್ಳದ ಪೊಲೀಸರ ಬಗ್ಗೆ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. [ರಾಸಲೀಲೆ]

English summary
Vitla, Adyanadka has become home for love affairs, sex scandals in the recent past. Locals afraid that Vitla town image is being damaged by these scandals. people accuse that Dakshina Kannada police also taking the case negligibly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X