ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತುಗಳ ಕಿಂಗ್ ಸಚಿನ್ ಕೈಲಿ ಕೋಕ್ ?

By Mahesh
|
Google Oneindia Kannada News

Sachin to Endross Coca Cola
ಮುಂಬೈ, ಜ.6: ಬೂಸ್ಟ್ ಇಸ್ ದ ಸೀಕ್ರೇಟ್ ಆಫ್ ಮೈ ಎನರ್ಜಿ ಎನ್ನುವ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ತಮ್ಮ ಬ್ರ್ಯಾಂಡ್ ನೇಮ್ ಅನ್ನು ಎತ್ತರಕ್ಕೇರಿಸಿಕೊಂಡಿದ್ದಾರೆ. ಇದುವರೆವಿಗೂ ದಿಲ್ ಮಾಂಗೆ ಮೋರ್ ಎಂದು ಪೆಪ್ಸಿ ಬಾಟಲಿ ಕೈಲಿ ಹಿಡಿಯುತ್ತಿದ್ದ ಸಚಿನ್, ಈಗ ಪೆಪ್ಸಿ ಎದುರಾಳಿ ಕೋಕಾ ಕೋಲಾಗೆ ಮಾರು ಹೋಗಿದ್ದಾರೆ. ಜಾಹೀರಾತು ಕ್ಷೇತ್ರದ ಗುಸುಗುಸು ಸುದ್ದಿಗೆ ಕಿವಿ ಕೊಟ್ಟಾಗ, ಬರೋಬ್ಬರಿ 20 ಕೋಟಿ ಪಡೆದಿರುವ ಸಚಿನ್ ಕೋಕಾ ಕೋಲಾಗೆ ರಾಯಭಾರಿಯಾಗುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರಂತೆ.

2008ರ ತನಕ ಪೆಪ್ಸಿ ಬ್ರ್ಯಾಂಡ್ ಗೆ ರಾಯಭಾರಿಯಾಗಿದ್ದ ಸಚಿನ್ ಅವರ ಹೊಸ ಕೊಕ್ ಜಾಹೀರಾತಿನ ಶೂಟಿಂಗ್ ಮುಂದಿನ ತಿಂಗಳು ಆರಂಭವಾಗಲಿದ್ದು, ಪ್ರಸೂನ್ ಜೋಶಿ ಅವರ ಪರಿಕಲ್ಪನೆಯಲ್ಲಿ ವಿಭಿನ್ನವಾಗಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಮುಂಬರುವ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕಿಳಿಯಲಿ ಕೋಕಾ ಕೋಲಾ ಯೋಜಿಸಿದೆ.

ಆದರೆ, ಸಚಿನ್ ಕೋಕಾ ಕೋಲಾ ಒಪ್ಪಂದ ಇನ್ನು ಮಾತುಕತೆ ಹಂತದಲ್ಲಿದೆ. ಗಣ್ಯಾತಿಗಣ್ಯರನ್ನು ಬಳಸಿಕೊಂಡು ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಸಚಿನ್ ಗಿಂತ ಉತ್ತಮವಾದ ರಾಯಭಾರಿ ಸಿಗಲಾರರು ಎಂದು ಕೋಕಾ ಕೋಲಾ ಸಂಸ್ಥೆ ಹೇಳಿದೆ.

ಕೇಪ್ ಟೌನ್ ಟೆಸ್ಟ್ :

English summary
According to report Sachin Tendulkar has signed three year endorsement contract with Coca Cola for a whooping amount of Rs. 20 Crore. But, World Sport Group has not commented on the deal. Earlier Sachin was endorsing Pepsi brand. Sachin Coke ad will be scripted by Prasoon Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X