ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಪಿನ್ ಬಳಕೆ ಒಮ್ಮೆ ಮಾತ್ರ ಸಾಧ್ಯ

By Mahesh
|
Google Oneindia Kannada News

Single Entry Pin ATM transaction
ನವದೆಹಲಿ, ಜ.6: ಬ್ಯಾಂಕ್ ಎಟಿಎಂ ಗಳಲ್ಲಿ ವಹಿವಾಟು ನಡೆಸುವಾಗ ಒಮ್ಮೆ ಪಿನ್(personal identification number) ಬಳಸಿದರೆ ಮತ್ತೆ ಬಳಸುವಂತಿಲ್ಲ. ಹೊಸ ವ್ಯವಸ್ಥೆಯಂತೆ ಹಣ ತೆಗೆಯುವುದು, ಉಳಿಕೆ ವಿಚಾರಣೆ ಹಾಗೂ ಖಾತೆಯ ವಿವರ ಪರಿಶೀಲನೆ ಇತ್ಯಾದಿ ಪ್ರತಿ ವ್ಯವಹಾರಕ್ಕೆ ನಿಮ್ಮ ಪಿನ್ ಸಂಖ್ಯೆಯನ್ನು ಹೊಸದಾಗಿ ಮರು ದಾಖಲಿಸಬೇಕಾಗುತ್ತದೆ ಎಂದು ಆರ್ ಬಿಐ ನಿರ್ದೇಶನ ನೀಡಿದೆ.

ಹ್ಯಾಕರ್ ಗಳು, ಸ್ಕಿಮ್ಮರ್ ಮುಂತಾದ ಅನಧಿಕೃತ ವ್ಯಕ್ತಿಗಳಿಂದ ಎಟಿಎಂ ಕಾರ್ಡ್‌ಗಳ ದುರ್ಬಳಕೆ ಯಾಗುತ್ತಿರುವುದನ್ನು ತಪ್ಪಿಸಲು, ಒಮ್ಮೆ ಪಿನ್ ದಾಖಲಿಸಿದಾಗ ಎಟಿಎಂ ಯಂತ್ರದಲ್ಲಿ ಕೇವಲ ಒಂದು ವ್ಯವಹಾರವಷ್ಟೇ ಸಾಧ್ಯವಾಗುವಂತೆ ಮಾಡಲು ಆರ್ ಬಿಐ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಜ 1, 2011 ರಿಂದ ಈ ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಲಾಗಿದ್ದರೂ ಅನೇಕ ಬ್ಯಾಂಕ್ ಗಳು ಇನ್ನೂ ಪಾಲಿಸಿಲ್ಲ. ಎಚ್ ಡಿಎಫ್ ಸಿ ಎಟಿಎಂ ನಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿದ್ದು, ಎರಡನೇ ಬಾರಿ ಎಟಿಎಂ ಬಳಸುವಾಗ ಮತ್ತೊಮ್ಮೆ ಪಿನ್ ನಂಬರ್ ದಾಖಲಿಸುವಂತೆ ಕೋರುತ್ತದೆ.

ಬ್ಯಾಂಕ್‌ನ ಗ್ರಾಹಕನೊಬ್ಬನು ಎಟಿಎಂಗಳ ಮೂಲಕ ಕಾರ್ಡನ್ನು ಒಳ ಹಾಕಿ ಅಥವಾ ಸ್ವೀಪ್ ಮಾಡಿ ಹಾಗೂ ಪಿನ್ ಸಂಖ್ಯೆಯನ್ನು ದಾಖಲಿಸುವ ಮೂಲಕ ಹಣ ತೆಗೆಯುವುದು, ಠೇವಣಿ ಇರಿಸುವುದು, ನಿಧಿ ವರ್ಗಾವಣೆ, ಬಿಲ್ ಪಾವತಿ, ಖಾತೆಯ ವಿವರ ಪರಿಶೀಲನೆ ಇತ್ಯಾದಿ ವ್ಯವಹಾರಗಳನ್ನು ನಡೆಸಬಹುದು.

ಈ ಹಿಂದೆ ಎಟಿಎಂಗಳಲ್ಲಿ ಕೇವಲ ಒಂದು ಬಾರಿ ಪಿನ್ ಸಂಖ್ಯೆ ದಾಖಲಿಸಿ ಹಲವು ವ್ಯವಹಾರಗಳನ್ನು ನಡೆಸುವ ಅವಕಾಶವಿತ್ತು. ಕೆಲವು ಪ್ರಕರಣಗಳಲ್ಲಿ ವಂಚಕರು, ವ್ಯವಹಾರದ ಬಳಿಕ ಗ್ರಾಹಕನಿಗೆ ಎಟಿಎಂ ಕಾರ್ಡ್ ಮರಳಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರ ಲಾಭ ಪಡೆದು ವಂಚಕರು ಹಣ ದೋಚುತ್ತಿದ್ದರು.

ಈ ರೀತಿಯ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ, ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಒಮ್ಮೆ ಪಿನ್ ನಮೂದಿಸಿದಾಗ ಒಂದೇ ವ್ಯವಹಾರ ನಡೆಯುವಂತೆ ಅಥವಾ ಪ್ರತಿ ವ್ಯವಹಾರಕ್ಕೆ ಪ್ರತಿ ಸಲ ಪಿನ್ ನಮೂದಿಸುವಂತೆ ವ್ಯವಸ್ಥೆ ಮಾಡಲು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ. [ಎಟಿಎಂ]

English summary
In order to protect ATM cards from Skimmers and Hackers, RBI has introduced single entry PIN(personal identification number)at ATMs for bank customers. RBI had asked all banks to follow these guidelines with effect from January 1, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X