• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕಾರಿಪುರದ ಫೈನಾನ್ಸಿಯರ್ ನಿಗೂಢ ಸಾವು

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಜ.6: ಜಿಲ್ಲೆಯ ಶಿಕಾರಿಪುರ ಪಟ್ಟಣದ ಫೈನಾನ್ಸಿಯರ್‌ರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬುಧವಾರ ತಡರಾತ್ರಿ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಕಟ್ಟೆ-ಜೋಗ ಗ್ರಾಮದ ಸಮೀಪ ನಡೆದಿದೆ. ಮೃತರನ್ನು ಶಿಕಾರಿಪುರ ಪಟ್ಟಣದ ಸುಬೇದಾರ ಬೀದಿ ನಿವಾಸಿ ಶ್ರೀನಿವಾಸ್(30) ಎಂದು ಗುರುತಿಸಲಾಗಿದೆ. ಇವರು ಬಡ್ಡಿ ವ್ಯವಹಾರದ ಜೊತೆಗೆ, ಬೀಡಿ ಅಂಗಡಿಯೊಂದನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು.

ನಿನ್ನೆ ರಾತ್ರಿ ಅಂಗಡಿ ವ್ಯವಹಾರ ಮುಗಿಸಿಕೊಂಡು ವ್ಯಕ್ತಿಯೊಬ್ಬರೊಂದಿಗೆ ತಮ್ಮ ಬೈಕ್‌ನಲ್ಲಿ ಹೊರಟಿದ್ದಾರೆ. ಆದರೆ ಅವರು ಚಿನ್ನಕಟ್ಟೆ-ಜೋಗ ಸಮೀಪದ ರಸ್ತೆಯಲ್ಲಿ ಬೈಕ್ ಸಮೇತ ಬಿದ್ದಿದ್ದರು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಅಂಬ್ಯುಲೈನ್ಸ್ ಚಾಲಕರೊಬ್ಬರು ಅವರನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ತಲೆಗೆ ತೀವ್ರವಾಗಿ ಹೊಡೆತ ಬಿದ್ದ ಕಾರಣ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯದಲ್ಲಿಯೇ ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ಅವರ ಬಳಿಯಿದ್ದ ಮೊಬೈಲ್ ಮೂಲಕ ಅಂಬ್ಯುಲೈನ್ಸ್ ಚಾಲಕ ಅವರ ಪತ್ನಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಗಳು ಹೇಳಿದ್ದಾರೆ.

ಮೇಲ್ನೋಟಕ್ಕೆ ಇದು ರಕ್ತ ಅಪಘಾತದಿಂದ ಸಂಭವಿಸಿದ ಘಟನೆಯಲ್ಲವೆಂದು ಸಂಬಂಧಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ನಿರ್ಮಾಣವಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. [ಕೊಲೆ]

English summary
A Financier from Shikaripura has been killed mysteriously in Nyamati Police Station limits. Meggan Hospital Ambulance driver saw financier Srinivas laying on Joga Chinnakatte road and tried to save his life. But couldn't succeed. Financier Family suspect someday has killed Srinivas,investigation is going on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X