ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಟಿಸಿ ಮೊಜಾರ್ಟ್ ಹೊಸ ವಿಂಡೋಸ್ ಮೊಬೈಲ್

By Mahesh
|
Google Oneindia Kannada News

HTC 7 Mozart
ಮುಂಬೈ, ಜ.5: ತೈವಾನ್ ಮೂಲದ ಸ್ಮಾರ್ಟ್ ಫೋನ್ ತಯಾರಕಾ ಸಂಸ್ಥೆ ಎಚ್ ಟಿಸಿ,ವಿಂಡೋಸ್ 7 ಆಧಾರಿತ ಸ್ಮಾರ್ಟ್ ಫೋನ್ ಎಚ್ ಟಿಸಿ ಮೊಜಾರ್ಟ್ 7(HTC 7 Mozart) ಅನ್ನು ಪರಿಚಯಿಸಿದೆ. ಅನೇಕ ಸೌಲಭ್ಯಗಳುಳ್ಳ ಈ ಮೊಬೈಲ್ ಗೆ ಸ್ಪರ್ಧಾತ್ಮಕವಾಗಿ 26,490 ರು ಬೆಲೆ ನಿಗದಿಪಡಿಸಲಾಗಿದೆ. ವಿಂಡೋಸ್ ಫೋನ್ 7 ಆಪರೇಟಿಂಗ್ ಸಿಸ್ಟಮ್ ವುಳ್ಳ ಎರಡನೇ ಮೊಬೈಲ್ ಆಗಿ ಮೊಜಾರ್ಟ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

ಎಚ್ ಟಿಸಿ 7 ಮೊಜಾರ್ಟ್ ನಲ್ಲಿ 480 x 800 pixels ರೆಸ್ಯೂಲೂಷನ್ ನ 3.7 ಸೂಪರ್ ಎಲ್ ಸಿಡಿ ಟಚ್ ಸ್ಕ್ರೀನ್ ಇದೆ. ಅಲ್ಯೂಮಿನಿಯಂ ಹೊರ ಮೈವುಳ್ಳ ಹ್ಯಾಂಡ್ ಸೆಟ್ ಆಕರ್ಷಕವಾಗಿದೆ. 8 ಮೆಗಾ ಪಿಕ್ಸಲ್ ಕೆಮೆರಾ ಕ್ಸೆನನ್ ಫ್ಲಾಶ್ ಇದ್ದು, 720p ವಿಡಿಯೋ ಮುದ್ರಣ ಸೌಲಭ್ಯ ಕೂಡಾ ಇದೆ.

ಇದಲ್ಲದೆ, ಸಂಗೀತ ಪ್ರೇಮಿಗಳಿಗಾಗಿ ಡಿಜಿಟಲ್ ಡಾಲ್ಬಿ ಸೌಂಡ್ ಹಾಗೂ SRS WOW HD ಸೌಲಭ್ಯ ನೀಡಲಾಗಿದೆ. 1 GHz ಪ್ರೊಸೆಸರ್ ಕ್ವಾಲ್ ಕಾಮ್MSM8250 ಚಿಪ್ ಸೆಟ್ ಇರುವುದರಿಂದ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. 512 MB ROM ಹಾಗೂ 576MB RAM ಹೊಂದಿದ್ದು, ಮ್ಯೂಸಿಕ್ ಫೈಲ್ಸ್ ಶೇಖರಿಸಿ ಇಟ್ಟುಕೊಳ್ಳಲು ಅನುಕೂಲಕರವಾಗಿದೆ.

ಎಚ್ ಟಿಸಿ 7 ಮೊಜಾರ್ಟ್ ವಿಶೇಷತೆಗಳು:

* 3.7ಸೂಪರ್ LCD ಟಚ್ ಸ್ಕ್ರೀನ್
* 8 MP, 3264x2448 ಪಿಕ್ಸಲ್ಸ್ ಜೊತೆಗೆ Xenon ಫ್ಲಾಶ್
* ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 7 OS
* 1 GHz ಕ್ವಾಲ್ ಕಾಮ್ Snapdragon MSM8250 ಚಿಪ್ ಸೆಟ್
* 512 MB ROM, 576 MB RAM
* 3ಜಿ HSDPA, 7.2 Mbps; HSUPA, 2 Mbps
* ವೈ-ಫೈ 802.11 b/g/n
* ಜಿಪಿಆರ್ ಎಸ್, EDGE,
* ಸ್ಟಿರಿಯೋ ಎಫ್ ಎಂ ರೇಡಿಯೋ
* SRS ಹಾಗೂ ಡಾಲ್ಬಿ ಮೊಬೈಲ್ ಸೌಂಡ್
* ಬ್ಲೂ ಟೂಥ್, ಜಾವಾ
* Li-Ion 1300 mAh ಬ್ಯಾಟರಿ

130 ಗ್ರಾಂ ತೂಕದ ಎಚ್ ಟಿಸಿ 7 ಮೊಜಾರ್ಟ್ 26,490 ರು ಲಭ್ಯವಿದ್ದು, ಬೆಲೆ ಮಾತ್ರ ಕೊಂಚ ಹೆಚ್ಚು ಎನಿಸಿದರೂ, ಉನ್ನತ ಮಟ್ಟದ ಸೌಲಭ್ಯಗಳು ನೀಡಿರುವುದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಕಂಪೆನಿ ಹೇಳಿದೆ. ಭಾರತದ ಹೆಚ್ಚು ಗ್ರಾಹಕರನ್ನು ತಲುಪಲು ಟಾಟಾ ಡೊಕೊಮೊ ಜೊತೆ ಎಚ್ ಟಿಸಿ ಕೈಜೋಡಿಸಿದೆ. [ಸ್ಮಾರ್ಟ್ ಫೋನ್ ]

English summary
Taiwan-based manufacturer of smartphones, HTC, has announced the launch of its latest Windows Phone 7 smartphone, HTC 7 Mozart, in India at an attractive price of Rs 26,490. HTC 7 Mozart is the second device in Indian market running on Microsoft's Windows Phone 7 OS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X