• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಡೂರಿನಲ್ಲಿ ಬಿಜೆಪಿಗೆ ಮಣ್ಣು ತಿನ್ನಿಸಿದ ಮತದಾರ

By * ರೋಹಿಣಿ ಬಳ್ಳಾರಿ
|

ಬಳ್ಳಾರಿ, ಜ. 4 : ಕೆಎಂಎಫ್ ಅಧ್ಯಕ್ಷ, ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಸಂಡೂರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಟ್ಟ ಶ್ರಮ, ಹೂಡಿತ ತಂತ್ರಗಳೆಲ್ಲಾ ತಲೆಕೆಳಗಾಗಿವೆ.

ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಪ್ರಾರಂಭ ಆದಾಗಿನಿಂದಲೂ ಜಿ. ಸೋಮಶೇಖರರೆಡ್ಡಿ ಅವರು ಸಂಡೂರು ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ, ಪ್ರಚಾರ ನಿರ್ವಹಿಸುವ ಎಲ್ಲಾ ಜವಾಬ್ದಾರಿವಹಿಸಿದ್ದರು.

ಬಳ್ಳಾರಿಯಿಂದ ಪಡ್ಡೆ ಹುಡುಗರ ಗುಂಪುಗಳನ್ನು ಕಟ್ಟಿಕೊಂಡು 5 - 6 ಸ್ಕ್ರಾಪಿಯೋಗಳಲ್ಲಿ ನಿತ್ಯ ನಸುಕಿನ 7 ಗಂಟೆಗೆಲ್ಲಾ ಸಂಡೂರು ತಾಲೂಕಿನ ಹಳ್ಳಿಗಳಲ್ಲಿ ಮುಖಂಡರು, ಮತದಾರರ ಮನೆಯಂಗಳಗಳಲ್ಲಿ ಪ್ರತ್ಯಕ್ಷ ಆಗಿ ಮತ ಕೇಳಿದರೂ ಮತದಾರರು ಅವರ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡಿದ್ದಾರೆ.

ಸಂಡೂರು ಶಾಸಕ ಇ. ತುಕಾರಾಂ, ಸಂತೋಷ್ ಲಾಡ್ - ಅನಿಲ್ ಲಾಡ್ : ಕಾರ್ತಿಕ್ ಘೋರ್ಪಡೆ - ವೆಂಕಟರಾವ್ ಘೋರ್ಪಡೆ ಅವರ ಬಿಗಿ ಹಿಡಿತದಲ್ಲಿ ಇರುವ ಮತದಾರರು ಬಿಜೆಪಿಗೆ ನಿರೀಕ್ಷಿತ ಗೆಲುವು ನೀಡದೇ ಬೊಮ್ಮಘಟ್ಟ ಮತ್ತು ಕಾಳಿಂಗೇರಿ ಕ್ಷೇತ್ರಗಳಲ್ಲಿ ಮಾತ್ರ ಆಶೀರ್ವಾದ ಮಾಡಿದ್ದಾರೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಇದೇ ಮೊದಲಬಾರಿಗೆ ಖಾತೆಯನ್ನು ತೆರೆದಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿ, ಭವಿಷ್ಯದ ಚುನಾವಣೆಯಲ್ಲಿ ಶಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದೂರಾಲೋಚನೆ ಹೊಂದಿದ್ದ ಬಿಜೆಪಿ ಮತ್ತು ರೆಡ್ಡಿ ಬ್ರದರ್‍ಸ್‌ಗೆ ಈ ಫಲಿತಾಂಶ ಭಾರೀ ಮುಖಭಂಗ ಮಾಡಿದಂತಾಗಿದೆ. ಯಥಾಪ್ರಕಾರ ಈ ತಾಲೂಕಿನಲ್ಲಿ ಕಾಂಗ್ರೆಸ್‌ನ 15 ಸದಸ್ಯರು ಗೆಲುವು ಸಾಧಿಸಿದ್ದಾರೆ. [ಪಂಚಾಯಿತಿ ಚುನಾವಣೆ]

English summary
Reddy brothers face humuliation in Sandur taluk in panchayat election, as voters vote for congress. Though BJP takes back seat in Bellary, in Karnataka BJP is in the drivers seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X