ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರದ ಈ ಮೇಕೆ ತಿನ್ನದ ವಸ್ತುವೇ ಇಲ್ಲ!

By * ಪೂರ್ಣಚಂದ್ರ ಮಾಗಡಿ, ರಾಮನಗರ
|
Google Oneindia Kannada News

This goat eats anything and everything
ರಾಮನಗರ, ಜ. 3 : ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತಿದೆ. ಆದರೆ ಈ ಬಕಾಸುರ ಆಡು ಮುಟ್ಟದ ವಸ್ತುವೇ ಇಲ್ಲ! ಸೋಪು, ಎಲೆಕ್ಟ್ರಿಕ್ ವೈರ್, ಟೂಥ್‌ಪೇಸ್ಟ್, ಗ್ರೀಸ್‌ ಯಾವುದೇ ಇರಲಿ ಸ್ವಾಹ. ಅಷ್ಟೇ ಯಾಕೆ, ಯಾರ ಬಾಯಲ್ಲಾದ್ರು ಸಿಗರೇಟ್ ಕಂಡ್ರೆ ಸಾಕು ಬಾಯಿಂದ ಸಿಗರೇಟ್ ಕಿತ್ಕೊಂಡು ಗುಳುಂ ಮಾಡಿಬಿಡುತ್ತದೆ.

ಅವು ಇವು ತಿಂದು ಬೇಜಾರಾದಾಗ ಆಗಾಗ್ಗೆ ನೈಂಟಿ ಎಣ್ಣೆ ಹಾಕಿ ಜುಮ್ಮಂತ ಓಡಾಡಿಕೊಂಡಿರುತ್ತದೆ. ರಾಮನಗರ ಜಿಲ್ಲೆ ಕೇತೋಹಳ್ಳಿ ರೈಲ್ವೆ ಗೇಟ್ ಬಳಿ ಪ್ರತಿನಿತ್ಯ ಬರುವ ಮೇಕೆ (ಕರಿಯ) ಎಲ್ಲರ ಫೆವರಿಟಿ ಪ್ರಾಣಿಯಾಗಿದೆ. ಅರೆ ನೋಡೀ ಸ್ವಾಮಿ ನಾನಿರೋದೆ ಹೀಗೆ ಅಂತ ಸಖತ್ ಎಂಜಾಯ್ ಮಾಡೋ ಈ ಕರಿಯ ಸಿಕ್ಕಿದ್ದನ್ನೆಲ್ಲಾ ತಿಂದ್ರೂ ಆರೋಗ್ಯದಲ್ಲಿ ಮಾತ್ರ ಏರುಪೇರಾಗಿಲ್ಲ. ಗ್ಯಾಸು, ಅಸಿಡಿಟಿ, ಹೊಟ್ಟೆ ತೊಳೆಸುವುದು... ಯಾವ ತೊಂದರೆಯೂ ಇಲ್ಲ.

ರೈಲ್ವೆ ಗೇಟ್ ಬಳಿ ಬರೋ ಯಾರೇ ಆಗಲೀ ಸಿಗರೇಟ್ ಹಚ್ಚಿ ಬಾಯಲ್ಲಿಟ್ರೆ ಸಾಕು ಉರಿಯೋ ಸಿಗರೇಟನ್ನೇ ಕಸಿದುಕೊಂಡು ಸ್ವಾಹ ಮಾಡೋದೇ ಈ ಕರಿಯನ ವಿಶೇಷವಾಗಿದೆ. ಆದ್ದರಿಂದಲೇ ಈ ಮೇಕೆ ಎದುರು 5 ರೂಪಾಯಿ ಬಂಡವಾಳ ಹಾಕಿ ಸಿಗರೇಟ್ ಸೇದಿದ್ರೆ ಒಂದು ಧಮ್ ಕೂಡ ಸೇದೋಕೆ ಆಗಲ್ಲ ಅಂತ ರೈಲ್ವೆ ಇಲಾಖೆಯ ನೌಕರ ಪುಟ್ಟರಾಜು ಹೇಳುತ್ತಾರೆ.

ಅಂಬಾಡಹಳ್ಳಿಯಲ್ಲಿ ವಿಚಿತ್ರ ಮೇಕೆಮರಿ ಜನನ

ಆಗಾಗ್ಗೆ ಕಿಕ್ ತೆಗೆದುಕೊಳ್ಳಲು ಯಾವುದೇ ಬ್ರ್ಯಾಂಡ್‌ನ ಮದ್ಯವನ್ನಾಗಲೀ ನೈಂಟಿ ಲೆಕ್ಕದಲ್ಲಿ ಕುಡಿದ್ರೂ ಕೂಡ ಅಳ್ಳಾಡೋ ಜೀವ ಅಲ್ಲ ಈ ಮೇಕೇದು. ಸದಾ ರೈಲ್ವೆ ಗೇಟ್ ಟ್ರ್ಯಾಕ್ ಬಳಿಯೇ ಬೀಡು ಬಿಡೋ ಈ ಮೇಕೆ ರೈಲಿನ ಶಬ್ಧ ಕೇಳಿದ ತಕ್ಷಣವೇ ರೈಲು ಪ್ರಯಾಣಿಕರಿಗೆ ತನ್ನ ಮುಖದರ್ಶನ ಮಾಡಿಸಿ ದೈನಂದಿನ ಆಹಾರಕ್ಕೆ ಸಿದ್ಧವಾಗುತ್ತದೆ.

ಕಲಿಗಾಲ ಕಣ್ರಪ್ಪೋ ನಡೀಬಾರದ್ದೆಲ್ಲಾ ನಡೀತಾದೆ, ಕಲ್ಲುಕೋಳಿ ಕೂಗೋ ಸಮಯ ಹತ್ತಿರವಾಗ್ತಾ ಐತೆ, ಕಲ್ಲು ಬಸವ ಗುಟರೋ ಹಾಕ್ತೈತೆ ಅಂತ ಹೇಳೋ ಈ ಸಂದರ್ಭದಲ್ಲಿ ವೈರ್. ಸೋಪು, ಸಿಗರೇಟ್, ಗ್ರೀಸ್‌ನ್ನೇ ಭಕ್ಷ್ಯ ಭೋಜನವನ್ನಾಗಿಸಿಕೊಂಡು ಸುರಪಾನ ಮಾಡಿ ಲೈಫು ಇಷ್ಟೇನೇ ಅಂತ ಎಂಜಾಯ್ ಮಾಡುತ್ತಿರೋ ಈ ಮೇಕೆ ಸದ್ಯಕ್ಕೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. [ರಾಮನಗರ]

English summary
Here is a different story of a peculiar goat. This goat in Ketohalli in Ramnagar district eats literally everything. Fondly called as Kariya has a liking for tooth paste, wire, soap. It also snatches cigarette for the smokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X