ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರಕ್ಕೆ ನಿವೇಶನ ನೀಡದಿದ್ದರೆ ಹೋರಾಟ

By Mrutyunjaya Kalmat
|
Google Oneindia Kannada News

Ashok Singhal
ಅಯೋಧ್ಯೆ, ಜ.2 : ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿಯ 67 ಎಕರೆ ನಿವೇಶನವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡದಿದ್ದರೆ ದೇಶಾದ್ಯಂತ ಮತ್ತೊಂದು ಬೃಹತ್ ಚಳವಳಿ ಆರಂಭಿಸುವುದಾಗಿ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ತಿಂಗಳೊಳಗೆ ಶಿಲಾನ್ಯಾಸವನ್ನು ನೆರವೇರಿಸುತ್ತೇವೆ. ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸಲು ನಮಗೆ ನಿವೇಶನ ಬೇಕು ಎಂದು ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ. ಪ್ರಸಕ್ತ ಮಂದಿರ ನಿರ್ಮಾಣಕ್ಕಾಗಿ ಯಾವುದೇ ಚಳವಳಿ ಇಲ್ಲ. ಒಂದು ವೇಳೆ ನಿವೇಶನ ನೀಡಿದಿದ್ದಲ್ಲ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.

ಶಿಲ್ಪಿಗಳ ಅಂದಾಜಿನಂತೆ ಮಂದಿರ ನಿರ್ಮಾಣ ಆರಂಭಿಸಿದರೆ ಒಂದೂವರೆ ವರ್ಷದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಂದಿರ ನಿರ್ಮಾಣ ಪೂರ್ತಿಗೊಳಿಸಲು ದೀರ್ಘ ಸಮಯ ಬೇಕಾಗುತ್ತದೆ ಎಂದ ಅವರು, ಮಂದಿರ ನಿರ್ಮಾಣಕ್ಕೆ ರಾಮಭಕ್ತರು ದೇಣಿಗೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು.(ಅಶೋಕ್ ಸಿಂಘಾಲ್)

English summary
Vishwa Hindu Parishad said it would launch a fresh agitation if the entire 67 acres of land at the Ram Janmabhoomi-Babri Masjid site in Ayodhya is not alloted for the construction of the Ram temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X