ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ನ್ಯಾಯಾಧೀಕರಣ ತೀರ್ಪಿಗೆ ಆಂಧ್ರ ಕ್ಯಾತೆ

By Mrutyunjaya Kalmat
|
Google Oneindia Kannada News

Almatti Dam
ಹೈದರಾಬಾದ್, ಜ. 2 : ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಕೆಲ ಅಂಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆಂಧ್ರಪ್ರದೇಶ ಹೇಳಿದೆ. ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣದ ತೀರ್ಪಿನಲ್ಲಿ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲ ಅಂಶಗಳಿವೆ. ಈ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸುತ್ತಿದೆ. ಇದಾದ ಬಳಿಕ ನ್ಯಾಯಾಧೀಕರಣದಲ್ಲೇ ಮೇಲ್ಮನವಿ ಸಲ್ಲಿಸುವುದಾಗಿ ಆಂಧ್ರ ಸರಕಾರ ಸ್ಪಷ್ಟಪಡಿಸಿದೆ.

ರಾಜ್ಯಕ್ಕೆ ನಷ್ಟವನ್ನುಂಟು ಮಾಡುವಂಥ ಅಂಶಗಳ ವಿರುದ್ಧ ಖಂಡತವಾಗಿಯೂ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ಆಂಧ್ರ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಪೈಕಿ ಆಂಧ್ರಕ್ಕೆ ಹೆಚ್ಚು ಪಾಲು ಅಂದರೆ 1001 ಟಿಎಂಸಿ ನೀರು ನೀಡಿತ್ತು.

ಆಂಧ್ರ ಪ್ರದೇಶ ಪಾಲಿಗೆ ಇದು ಲಾಭ ತರುವ ಸಂಗತಿಯೇ ಆದರೂ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್ ನಿಂದ 524.25 ಮೀಟರ್ ಗೆ ಹೆಚ್ಚಿಸಲು ಅನುಮತಿ ನೀಡಿತ್ತು. ಕೃಷ್ಣಾ ನ್ಯಾಯಾಧೀಕರಣದ ಈ ತೀರ್ಪನ್ನು ಆಂಧ್ರಪ್ರದೇಶ ಸರಕಾರ ವಿರೋಧಿಸಿದೆ. ಇದರಿಂದ ರಾಜ್ಯದ ಕೃಷ್ಣಾ ಕೊಳ್ಳದ 13.5 ಲಕ್ಷ ಎಕರೆ ಪ್ರದೇಶದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾವು ನ್ಯಾಯಾಯಧೀಕರಣದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.(ಆಲಮಟ್ಟಿ ಅಣೆಕಟ್ಟು)

English summary
Andhra Pradesh will file an appeal before the Krishna River Water Disputes Tribunal in respect of certain issues in the verdict that would affect the state's interests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X