ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಪಂ ಚುನಾವಣೆ : ಮತಗಟ್ಟೆ ಅಧಿಕಾರಿ ಅಮಾನತು

By Mrutyunjaya Kalmat
|
Google Oneindia Kannada News

EVM's
ಬೆಂಗಳೂರು, ಡಿ. 31 : ಎರಡನೇ ಹಂತದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಕೆಲಕಡೆಗಳಲ್ಲಿ ಬಿರುಸಿನಿಂದ ಮತದಾನ ಶುರುವಾಗಿದ್ದರೆ, ಇನ್ನೂ ಕೆಲ ಕಡೆಗಳಲ್ಲಿ ನೀರಸ ಮತದಾನ. ಮಂಡ್ಯ ಜಿಲ್ಲೆಯ ಬಾಚನಹಳ್ಳಿಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಪಕ್ಷದ ಪರವಾಗಿ ಮತಯಾಚನೆ, ಅಮಾನತು. ಹಾಸನ ಜಿಲ್ಲೆ ಚಿಕ್ಕೋನಹಳ್ಳಿಯಲ್ಲಿ ಮತಯಂತ್ರವನ್ನು ಬಾವಿಗೆ ಎಸೆದ ಘಟನೆ ನಡೆದಿದೆ.

ಗುಲ್ಬರ್ಗಾ ಜಿಲ್ಲೆಯ ಚಂದ್ರಕಾಂತ ಮನ್ನಳ್ಳಿ ಎಂಬ ಬಿಜೆಪಿ ಅಭ್ಯರ್ಥಿ ಅಪಹರಣ ಮಾಡಲಾಗಿದ್ದು, ಇದೀಗ ಅವರ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದಾರೆ. ಕೆಲವಡೆ ಮತದಾರರ ಹೆಸರು ನಾಪತ್ತೆಯಾಗಿದ್ದರಿಂದ ಆಕ್ರೋಶಗೊಂಡ ಮತದಾರರು ಪ್ರತಿಭಟನೆ ಆರಂಭಿಸಿದ್ದಾರೆ. ದ. ಕನ್ನಡ ಶೇ. 12, ಕೊಡಗು ಶೇ. 10, ಧಾರವಾಡ ಶೇ. 10 ಸೇರಿದಂತೆ ಒಟ್ಟು ರಾಜ್ಯಾದ್ಯಂತ ಶೇ. 7 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಚುನಾವಣಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಾಂತಿಯುತ ಮತದಾನಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

595 ಜಿಲ್ಲಾ ಪಂಚಾಯತಿ ಮತ್ತು 2163 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಒಟ್ಟು 18,203 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 4036 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. 1,54,49, 775 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ 1,09,218 ಸಿಬ್ಬಂದಿಗಳು, 15 ಸಾವಿರ ಗೃಹ ರಕ್ಷಕ ದಳ, 190 ಡಿಎಆರ್ ಮತ್ತು ಕೆಎಸ್ಆರ್ ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬಿಜಾಪುರ, ಬೆಳಗಾವಿ, ಬಾಗಲಕೋಟಿ, ಗದಗ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆ ಸೇರಿ 17 ಜಿಲ್ಲೆಯಲ್ಲಿ ಮತದಾನ ನಡೆದಿದೆ.

English summary
The second phase of Zilla and Taluk Panchayat elections starts in 17 districts across Karnataka. Where a 1.54 crore strong electorate would decide the electoral prospects of 8,752 candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X