ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ

By Mahesh
|
Google Oneindia Kannada News

Rural reporting award
ಮಂಗಳೂರು, ಡಿ.31: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪದ್ಯಾನ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪ.ಗೋ. ಪ್ರಶಸ್ತಿ) ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಮೂಲಕ ಪ್ರವೇಶಪತ್ರಗಳನ್ನು ಆಹ್ವಾನಿಸಲಾಗಿದೆ.

ನಿಯಮಗಳು ಇಂತಿವೆ: ಪ್ರಶಸ್ತಿಯು ಉ.ಕ., ದ.ಕ., ಚಿಕ್ಕಮಗಳೂರು, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯದ್ದಾಗಿರುತ್ತದೆ.

ಪ್ರಶಸ್ತಿಯು ಕನ್ನಡದ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಅರ್ಜಿ ಸಲ್ಲಿಸುವವರ ವಯಸ್ಸು 45ಕ್ಕೆ ಮೀರಿರ ಬಾರದು. ಗ್ರಾಮೀಣ ವರದಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. 2010ನೇ ಸಾಲಿನ ಪ್ರಶಸ್ತಿಗೆ 2010ರ ಜನವರಿ 1 ರಿಂದ ಮೊದಲ್ಗೊಂಡು ಅದೇ ಸಾಲಿನ ಡಿಸೆಂಬರ್‌ 31ರವರೆಗಿನ ವರದಿಗಳನ್ನು ಪರಿಗಣಿಸಲಾಗುವುದು.

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ವರದಿಯ ಮೂರು ಪ್ರತಿಗಳನ್ನು (ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸುವುದು. ವರದಿಯು ಪ್ರಕಟವಾದ ದಿನಾಂಕದ ಕುರಿತಂತೆ ಸೂಕ್ತ ದಾಖಲೆ ಅಗತ್ಯ. ಪ್ರಶಸ್ತಿಯು 5001 ರೂ. ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ಒಳ ಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ 2011ರ ಮಾರ್ಚ್‌ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಯುವುದು.

ಅರ್ಜಿಗಳನ್ನು ಕಳುಹಿಸಲು 2011ರ ಜನವರಿ 31 ಕೊನೆಯ ದಿನಾಂಕ. ಪ್ರವೇಶಪತ್ರಗಳನ್ನು ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾಭವನ, ಉರ್ವಮಾರ್ಕೆಟ್‌ ಮಂಗಳೂರು-6 ಇಲ್ಲಿಗೆ ಕಳುಹಿಸಲು ಕೋರಲಾಗಿದೆ. [ಪತ್ರಕರ್ತ]
ಕೃಪೆ: ಮೀಡಿಯಾ ಮಿರ್ಚಿ

English summary
South Canara Working Journalists Association is set to give Pa.Go(Padyana Gopalakrishna) memorial award to rural journalists from Uttar Kannada, Dakshina Kannada, Chikmagalur and Kasaragod districts. Jan.31,2011 is the last date for sending entries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X