ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ತಂಡಕ್ಕೆ ಸದಸ್ಯನಾಗುವ ಹೆಬ್ಬಯಕೆ

By Mrutyunjaya Kalmat
|
Google Oneindia Kannada News

Vinay Kumar
ಬೆಂಗಳೂರು, ಡಿ. 31 : 2011ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ನ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವ ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ವಿಶ್ವಕಪ್ ನ ಅಂತಿಮ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

15 ಸದಸ್ಯರ ತಂಡದಲ್ಲಿ ನಾನೊಬ್ಬನಾಗಬೇಕು ಎಂಬುದು ನನ್ನ ಏಕೈಕ ಗುರಿ. ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಸಂತಸ ತಂದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದಲೂ ತಂಡಕ್ಕೆ ನೆರವಾಗುವುದು ನನ್ನ ಮೊದಲ ಧ್ಯೇಯ. ಆರಂಭದಲ್ಲಿ ಆಲ್ ರೌಂಡರ್ ಆಗಿ ಆಡಲು ಆರಂಭಿಸಿದ್ದೆ. ನಂತರ ಬೌಲಿಂಗ್ ನತ್ತ ಹೆಚ್ಚು ಕೇಂದ್ರೀಕರಿಸಿದೆ. ಇದೀಗ ಎರಡೂ ಕಡೆಗೂ ಒತ್ತು ನೀಡುತ್ತಿದ್ದೇನೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.

ಒಂದು ವೇಳೆ ಅಂತಿಮ ತಂಡದಲ್ಲಿ ಸ್ಥಾನ ಪಡೆದರೆ ಫೆಬ್ರವರಿ 12 ಕ್ಕೆ 26ನೇ ವರ್ಷಕ್ಕೆ ಕಾಲಿರಿಸಲಿರುವ ಬಲಗೈ ಮಧ್ಯಮ ವೇಗಿ ವಿನಯ್ ಕುಮಾರ್ ಗೆ ಹುಟ್ಟುಹಬ್ಬದ ಕೊಡುಗೆಯೂ ಆಗಲಿದೆ.

English summary
World cup probable's team member Davanagere express, medim pacer Vinay Kumar said confidently, I'm traying to include in 15 member squad of Indian Cricket team of World cup 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X