ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ನೀರು ಹಂಚಿಕೆ ತೀರ್ಪು; ರಾಮುಲು ತೃಪ್ತಿ

By Mahesh
|
Google Oneindia Kannada News

Minister Sriramulu on Krishna Tribunal Verdict
ಬಳ್ಳಾರಿ, ಡಿ. 31: ಕೃಷ್ಣ ಟ್ರಿಬುನಲ್ 'ಕೃಷ್ಣಾ ಬೇಸಿನ್ ಮಾನಿಟರ್ ಬೋರ್ಡ್" ರಚಿಸಲು ನೀಡಿರುವ ಆದೇಶವನ್ನು ಸ್ವಾಗತಿಸುತ್ತಿರುವುದಾಗಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಕೃಷ್ಣ ಟ್ರಿಬುನಲ್‌ನ ತೀರ್ಪಿನ ಹಿನ್ನಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಬಿ. ಶ್ರೀರಾಮುಲು, ಆಲಮಟ್ಟಿ ಆಣೆಕಟ್ಟಿನ ಕುರಿತು ಕೃಷ್ಣಾ ಇಂಟರ್ ಸ್ಟೇಟ್ ವಾಟರ್ ಟ್ರಿಬುನಲ್ ಗುರುವಾರ ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪು ರಾಜ್ಯಕ್ಕೆ ಅನುಕೂಲಕರ ಆಗಿದೆ ಎಂದು ತಿಳಿಸಿದ್ದಾರೆ.

ಕೃಷ್ಣ ಜಲಾನಯನ ಪ್ರದೇಶದ ಮಹಾರಾಷ್ಟ್ರದಲ್ಲಿ ಶೇ. 26.8, ಕರ್ನಾಟಕದಲ್ಲಿ ಶೇ. 43.8 ಮತ್ತು ಆಂಧ್ರದಲ್ಲಿ 29.4 ರಷ್ಟು ವಿಸ್ತಾರವಾಗಿದೆ. ಪ್ರಸ್ತುತ ಡ್ಯಾಂನ ಎತ್ತರವನ್ನು 519.2 ಮೀಟರ್‌ನಿಂದ 524.2 ಮೀಟರ್‌ಗೆ ಎತ್ತರಿಸಿದಾಗ 26,000 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಭೂ ಸಂತ್ರಸ್ತ ರೈತರಿಗೆ ಸರ್ಕಾರ ಶೀಘ್ರವೇ ಸೂಕ್ತ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಮೂಲಕ 102 ಟಿಎಂಸಿ ನೀರು ಹೆಚ್ಚುವರಿಯಾಗಿ ಸಂಗ್ರಹ ಆಗಲಿದೆ. 8 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. 'ಬಿ" ಸ್ಕೀಂನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಲಿದ್ದು ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. [ಅಣೆಕಟ್ಟು]

English summary
Minister Sri Ramulu has welcomed Krishna Water Tribunal Verdict on sharing river water with Andra Pradesh and Maharashtra. He said formation of Krishna Basin Monitor Board is good. But Karnataka's demand under B scheme are not fulfilled he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X