ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕೃಷ್ಣಾ ನೀರು ಹಂಚಿಕೆ ನ್ಯಾಯಾಧೀಕರಣ ತೀರ್ಪು

By Mrutyunjaya Kalmat
|
Google Oneindia Kannada News

Water drop
ನವದೆಹಲಿ,ಡಿ. 30 : ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರ ಇಂದು ಮಹತ್ವದ ತೀರ್ಪನ್ನು ನೀಡಲಿದೆ. ಜಿಪಂ, ತಾಪಂ ಚುನಾವಣೆಯ ಕಾವಿನ ನಡುವೆಯೂ ಜನರು ಭಾರಿ ಕುತೂಹಲ ಹಾಗೂ ಆತಂಕದಿಂದ ಈ ತೀರ್ಪನತ್ತ ಮುಖ ಮಾಡಿದ್ದಾರೆ.

ಆಲಮಟ್ಟಿ ಆಣೆಕಟ್ಟು ಎತ್ತರ ಆಗುವುದೋ ಅಥವಾ ಈಗಿರುವಂತೆಯೇ 519.6 ಮೀಟರ್ ಗೆ ಸೀಮಿತವಾಗುವುದೋ ಎಂಬ ಚರ್ಚೆ ಈ ಭಾಗದ ಜನರಲ್ಲಿ ಮನೆ ಮಾಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ತೀರ್ಪಿನಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬ್ರಿಜೇಶ್ ಮಿಶ್ರಾ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ ಕೆ ಶೇಟ್, ನ್ಯಾ. ಎಸ್ ಪಿ ಶ್ರೀವಾಸ್ತವ ನೇತೃತ್ವದ ನ್ಯಾಯಾಧೀಕರಣ 2004ರ ಎಪ್ರಿಲ್ 2 ರಿಂದ ಕಾರ್ಯಾರಂಭ ಮಾಡಿದೆ.

ಈ ನ್ಯಾಯಾಧೀಕರಣ ಅವಧಿ ಮುಗಿದರೂ, ವಾದ-ವಿವಾದ ಇನ್ನೂ ಪೂರ್ಣಗೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಇದರ ಅವಧಿಯನ್ನು ಮುಂದೂಡಲಾಗಿದೆ. ಕೇಂದ್ರ ಸರಕಾರವು ಅಂತಿಮ ಗಡುವು ವಿಧಿಸಿರುವುದರಿಂದ ಡಿ.30ರಂದು ಅಂತಿಮ ತೀರ್ಪು ಹೊರಬರಲಿದೆ. ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ನಡುವೆ1969ರಿಂದ ತಿಕ್ಕಾಟವಿದೆ.

English summary
The Justice Brijesh Kumar Tribunal constituted six years ago to consider fresh claims among Krishna River riparian states, Andhra Pradesh, Karnataka and Maharashtra, will deliver its verdict on Thursday in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X