ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ, ರಾಯಲಸೀಮೆಗೆ ದಕ್ಕದ ಕೃಷ್ಣಾ

By Mahesh
|
Google Oneindia Kannada News

Krishna Water Tribunal AP Reaction
ವಿಜಯವಾಡ, ಡಿ.30: ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪು ಬಹುಮಟ್ಟಿಗೆ ಕರ್ನಾಟಕದ ಪರ ವಾಲಿರುವುದು ಆಂಧ್ರದಲ್ಲಿ ನಿರಾಶೆ ಮೂಡಿಸಿದೆ. ಕರ್ನಾಟಕಕ್ಕೆ 50 ಟಿಎಂಸಿ ನಷ್ಟವಾದರೂ, ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 524.25 ಅಡಿಗೆ ಎತ್ತರಿಸಲು ಅನುಮತಿ ನೀಡುವ ಮೂಲಕ ನ್ಯಾಯಾಧೀಕರಣ ನೀಡಿರುವ ಐತಿಹಾಸಿಕ ತೀರ್ಪಿಗೆ ಆಂಧ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೀರಾವರಿ ಯೋಜನೆಗಳಿಗೆ ಹಾನಿ: ನ್ಯಾಯಾಧೀಕರಣದ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ. ಆಂಧ್ರ 1001 ಟಿಎಂಸಿ ನೀರು ಏನೇನು ಸಾಲದು. ವಿವಿಧ ಋತುಗಳಲ್ಲಿ ಜಲಾಶಯದಿಂದ ಎಷ್ಟೆಷ್ಟು ನೀರು ಬಿಡಬೇಕು ಎಂದು ಸೂಚಿಸಲಾಗಿದೆ. ಆದರೆ, ಈಗಾಗಲೇ ಅನೇಕ ನೀರಾವರಿ ಯೋಜನೆಗಳನ್ನು ಆಂಧ್ರ ಸರ್ಕಾರ ಹಮ್ಮಿಕೊಂಡಿದ್ದು, ಎಲ್ಲವೂ ನಾಶವಾಗಲಿದೆ.

ಪ್ರಕಾಶಂ, ವಿಜಯವಾಡ, ರಾಯಲಸೀಮಾ ಹಾಗೂ ತೆಲಂಗಾಣ ಪ್ರಾಂತ್ಯಗಳಿಗೆ ಜೀವನಾಡಿಯಾಗಿರುವ ಕೃಷ್ಣಾ ನೀರನ್ನು ಈ ರೀತಿ ಹಂಚುವುದು ಸರಿಯಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ಹಾಗೂ ಉದ್ದೇಶಿತ ಭಾರಿ ನೀರಾವರಿ ಯೋಜನೆಗಳಿಗೆ ಸುಮಾರು 50,000 ಕೋಟಿ ರು ಬಂಡವಾಳ ಹೂಡಲಾಗಿದೆ. ಈ ತೀರ್ಪಿನಿಂದ ಯೋಜನೆಗಳು ಹಾಳಾಗುತ್ತದೆ ಎಂದು ಮಾಜಿ ಸಂಸದ ವೈ ಶಿವಾಜಿ ಹೇಳಿದ್ದಾರೆ.

ತೆಲಂಗಾಣ ವಿವಾದ, ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ಜಟಾಪಟಿ ನಡುವೆ ಕೃಷ್ಣಾ ನದಿ ನೀರನ್ನು ಜನ ಮರೆತ್ತಿದ್ದಾರೆ ಎಂದು ಪಿಆರ್ ಪಿಯ ಹಿರಿಯ ನಾಯಕ ರಾಮಚಂದ್ರ ಪ್ರತಿಕ್ರಿಯಿಸಿದ್ದಾರೆ. ಅಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ಆಂಧ್ರದ ಹಲವಾರು ಫಲವತ್ತಾದ ಭೂಮಿ ಬರಡಾಗುವುದು ಇದು ಅನ್ಯಾಯ ಎಂದು ಸಿಪಿಐ(ಎಂ) ಮುಖ್ಯಸ್ಥ ಕೆ ನಾರಾಯಣ ಹೇಳಿದ್ದಾರೆ.

ಬಚಾವತ್ ಆಯೋಗದ 1974ರ ನಿರ್ದೇಶನದಲ್ಲಿ ಮಹಾರಾಷ್ಟ್ರಕ್ಕೆ 560 ಟಿಎಂಸಿ, ಕರ್ನಾಟಕಕ್ಕೆ 734 ಟಿಎಂಸಿ ಹಾಗೂ ಅಂಧ್ರಕ್ಕೆ 800 ಟಿಎಂಸಿ ನೀರು 2000 ಇಸವಿ ತನಕ ಲಭ್ಯವಾಗಿತ್ತು. ಈಗ ಬಿ ಸ್ಕೀಮ್ ನ ಪ್ರಕಾರ ಕರ್ನಾಟಕಕ್ಕೆ 117 ಟಿಎಂಸಿ, ಆಂಧ್ರಕ್ಕೆ 190 ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ 81 ಟಿಎಂಸಿ ಲಭ್ಯವಾಗಲಿದೆ. ಖಾರಿಫ್ ಋತುವಿನಲ್ಲಿ 8ರಿಂದ 9 ಟಿಎಂಸಿ ನೀರನ್ನು ಆಂಧ್ರಕ್ಕೆ ಕರ್ನಾಟಕ ಬಿಡಬೇಕು ಎಂದು ನ್ಯಾಯಾಧೀಕರಣ ಸೂಚಿಸಿದೆ. [ಅಣೆಕಟ್ಟು]

English summary
The Krishna Water Disputes Tribunal gave its verdict on sharing of the river water with Andhra Pradesh getting the biggest share, followed by Karnataka and Maharashtra. The reaction of the state representatives were mixed in nature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X