ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿ ಬ್ಯಾಂಕಿನಲ್ಲಿ ಗೋಲ್ ಮಾಲ್, 400 ಕೋ. ಗುಳುಂ

By Mrutyunjaya Kalmat
|
Google Oneindia Kannada News

Citi Bank
ಗುರಗಾಂವ್, ಡಿ. 29 : ಸಾವಿರಾರು ಕೋಟಿ ರುಪಾಯಿ 2ಜಿ ಸ್ಪೆಕ್ಟ್ರಂ ಹಗರಣದ ಮಾಸುವ ಮುನ್ನವೇ ಅಮೆರಿಕನ್ ಮೂಲದ ಸಿಟಿ ಬ್ಯಾಂಕ್ ನಲ್ಲಿ 350 ಕೋಟಿ ರುಪಾಯಿಗಳ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಬ್ಯಾಂಕಿನ ರಿಲೇಷನ್ ಶಿಪ್ ಅಧಿಕಾರಿಯೇ ಈ ಹಗರಣದ ಪ್ರಮುಖ ರೂವಾರಿಯಾಗಿದ್ದಾನೆ.

ಸಿಟಿ ಬ್ಯಾಂಕ್ ಗುರಗಾಂವ್ ಡಿಎಲ್ ಎಫ್ ಶಾಖೆ-2ರಲ್ಲಿ ಈ ಹಗರಣ ನಡೆದಿದೆ. ಬ್ಯಾಂಕಿನ ರಿಲೇಷನ್ ಶಿಪ್ ಅಧಿಕಾರಿ ಶಿವರಾಜ್ ಪುರಿ ಹಗರಣದ ಪ್ರಮುಖ ಆರೋಪಿಯಾಗಿದ್ದಾನೆ. ಸುಮಾರು ಏಳೆಂಟು ವರ್ಷಗಳಿಂದ ಬ್ಯಾಂಕಿನ ರಿಲೇಷನ್ ಶಿಪ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಿವರಾಜ್ ಪುರಿ, 2009ರ ಸೆಪ್ಟೆಂಬರ್ ಬ್ಯಾಂಕಿನಲ್ಲಿ ನಕಲಿ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆದು ಬ್ಯಾಂಕಿಗೆ ಸುಮಾರು 350 ಕೋಟಿ ರುಪಾಯಿಗಳನ್ನು ಪಂಗನಾಮ ಹಾಕಿದ್ದಾನೆ.

ಗುರಗಾಂವ್ ನ ಡಿಎಲ್ಎಫ್ ಶಾಖೆಯಲ್ಲಿ ನಕಲಿ ಹೆಸರಿನಲ್ಲಿ ಭಾರಿ ಮೊತ್ತದ ಹಣ ವಹಿವಾಟ ನಡೆದಿರುವ ಬಗ್ಗೆ ಬ್ಯಾಂಕಿನ ಸಹಾಯಕ ಉಪಾಧ್ಯಕ್ಷ ಬಿನೂ ಸೋಮನ್ ಅವರಿಗೆ ಸಂಶಯ ಬಂದಿದೆ. ತಕ್ಷಣ ಬ್ಯಾಂಕಿನ ಲೆಕ್ಕಾಧಿಕಾರಿಗಳಿಂದ ತನಿಖೆ ನಡೆಸಿದಾಗ ಗುರಗಾಂವ್ ಡಿಎಲ್ಎಫ್-2 ಶಾಖೆಯಿಂದ ಸುಮಾರು 300 ರಿಂದ 350 ಕೋಟಿ ರುಪಾಯಿಗಳು ಮಂಗಮಾಯವಾಗಿರುವುದು ಗೊತ್ತಾಗಿದೆ. ತಕ್ಷಣವೇ ಗುರಗಾಂವ್ ಪೊಲೀಸ್ ಠಾಣೆಗೆ ಅವರು ದೂರು ಸಲ್ಲಿಸಿದ್ದಾರೆ.

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಬ್ಯಾಂಕಿನ ರಿಲೇಷನ್ ಶಿಪ್ ಅಧಿಕಾರಿ ಶಿವರಾಜ್ ಪುರಿ ಅವರೆ ನಕಲಿ ಹೆಸರಿನಲ್ಲಿ ಅಪಾರ ಪ್ರಮಾಣದ ಹಣವನ್ನು ಬ್ಯಾಂಕಿನಿಂದ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಶಿವರಾಜ್ ಪುರಿ ನಾಪತ್ತೆಯಾಗಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದು, ಸದ್ಯಕ್ಕೆ ಸುಮಾರು 18 ನಕಲಿ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

English summary
This was just what India wanted to hear, the perfect year-end gift. Yes, its yet another scam. This time it has come from the American banking giant Citibank. A case of possible fraud was reported at DLF-II branch, Gurgaon and is reportedly estimated at Rs 300-350 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X