ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ

By Mrutyunjaya Kalmat
|
Google Oneindia Kannada News

Sourav Ganguly
ಸಿಲಿಗುರಿ(ಪಶ್ಚಿಮ ಬಂಗಾಲ), ಡಿ. 29 : ಫೆಬ್ರವರಿ ತಿಂಗಳು ಆರಂಭವಾಗಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಸಮರ್ಥ ತಂಡವಾಗಿದೆ ಎಂದು ಏಕದಿನ ಪಂದ್ಯದ ಯಶಸ್ವಿ ನಾಯಕ ಎನಿಸಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಸಿಲಿಗುರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ತಂಡ ಯುವಕರಿಂದ ಕೂಡಿದೆ. ಪ್ರತಿ ಆಟಗಾರರೂ ಉತ್ತಮ ಫಾರ್ಮನಲ್ಲಿದ್ದಾರೆ. ಮುಖ್ಯವಾಗಿ ಸ್ಫೋಟಕ ಬ್ಯಾಟ್ಸ್ ಮನ್ ಯೂಸುಫ್ ಪಠಾಣ ಮತ್ತು ಆಫ್ ಸಿನ್ನರ್ ಆರ್ ಅಶ್ವಿನ್ ಅವರುಗಳಿಂದ ಭಾರತ ಈ ಸಾರಿ ವಿಶ್ವಕಪ್ ಗಮನಾರ್ಹ ಕೊಡುಗೆ ನೀಡುವ ಸಾಧ್ಯತೆ ಇದೆ ಎಂದರು.

ನಾನಂತೂ ವಿಶ್ವಕಪ್ ಪಂದ್ಯಾವಳಿಯನ್ನು ಎದಿರು ನೋಡುತ್ತಿದ್ದು, ತಾಯ್ನಾಡಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ನನ್ನನ್ನು ಸೇರಿದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2003ರಲ್ಲಿ ಸಾಧಿಸಲಾಗದ್ದನ್ನು 2011ರಲ್ಲಿ ಸಾಧಿಸುವ ಎಲ್ಲ ಸೂಚನೆಗಳೂ ಇವೆ ಎಂದು ಸೌರವ್ ಹೇಳಿದರು. 2003ರ ವಿಶ್ವಕಪ್ ನ ಫೈನಲ್ ನಲ್ಲಿ ಸೌರವ್ ಬಳಗ ಕಾಂಗರೂಗಳ ಆರ್ಭಟಕ್ಕೆ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಗೊಂಡಿತ್ತು.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಟೆಸ್ಟ್ ನಲ್ಲಿ ಕೆಲವು ಕಾರಣಗಳಿಂದ ತಂಡ ಸೋತಿದೆ. ದರ್ಬಾನಿನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಮಹತ್ವದ ಘಟ್ಟಕ್ಕೆ ಬಂದು ತಲುಪಿದ್ದು, ನಮ್ಮವರೆ ಗೆಲ್ಲುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಗಂಗೂಲಿ ಹೇಳಿದರು. ಫೆ.19 ರಿಂದ ವಿಶ್ವಕಪ್ ಆರಂಭವಾಗಲಿದ್ದು, ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಪಂದ್ಯಗಳು ನಡೆಯಲಿವೆ.(ಸೌರವ್ ಗಂಗೂಲಿ)

English summary
Former Indian cricket captain Sourav Ganguly said he is hopeful the recently announced Indian squad would win the forthcoming World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X