• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಲೆ ಬಂದಾಗ ಬೆಳೆ ಇಲ್ಲ; ಬೆಳೆ ಬಂದಾಗ ಬೆಲೆ ಇಲ್ಲ

By * ಹೆಚ್.ಟಿ. ಮೋಹನ್ ಕುಮಾರ್, ಹಾಸನ
|

ಹಾಸನ, ಡಿ.27: ಕಾಫಿಗೆ ಬೆಲೆ ಬಂದಿದೆ. ಆದರೆ ಬೆಳೆಗಾರರ ಮುಖದಲ್ಲಿ ಕಳೆ ಇಲ್ಲ. ಬೆಳೆ ಇದ್ದಾಗ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಹೀಗೆ ಕಳೆದ 10 ವರ್ಷಗಳಿಂದ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತ್ತಾ ಬೆಳೆಗಾರರು ಸಾಲದಲ್ಲಿ ಸಿಲುಕಿ ಹಾಕಿಕೊಂಡು, ಕೇಂದ್ರ ಸರ್ಕಾರವು ಘೋಷಣೆ ಮಾಡಿದ ಪ್ಯಾಕೇಜ್‌ನಿಂದಲೂ ಹೊರಬರಲಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆಯಿಂದ ಉತ್ಪಾದನಾ ವೆಚ್ಚವು ಗಗನಕ್ಕೇರಿದೆ. ಕಳೆದ 5 ವರ್ಷಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಒಂದಲ್ಲಾ ಒಂದು ಸಮಸ್ಯೆಗೆ ಬೆಳೆಗಾರರು ಸಿಲುಕಿ ಹಾಕಿಕೊಂಡಿದ್ದಾರೆ. ಕರ್ನಾಟಕ ಬೆಳೆಗಾರರ ಒಕ್ಕೂಟವು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ, ಬೆಳೆಗಾರರನ್ನು ಸಂದರ್ಶಿಸಿದ ಸಂದರ್ಭದಲ್ಲಿ ಸುಮಾರು 40 ರಷ್ಟು ಕಾಫಿ ಹಾನಿ ಯಾಗಿದೆ ಎಂದು ಖಚಿತಪಡಿಸಿಕೊಂಡಿರುತ್ತಾರೆ.

ಈ ಪ್ರಕಾರವಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟವು ಅಂದಾಜಿಸಿರುವಂತೆ 1 ಲಕ್ಷ ಟನ್ ಅರೇಬಿಕಾ ಕಾಫಿಯಲ್ಲಿ ಕೇವಲ 60 ಸಾವಿರ ಟನ್‌ಗಳು ಮಾತ್ರ ಆಗಬಹುದೆಂದು ಖಚಿತಪಡಿಸಿದ್ದಾರೆ. ಕಾಫಿ ಬೆಳೆಯುವ ಎಲ್ಲಾ ದೇಶಗಳಲ್ಲೂ ಈ ಪರಿಸ್ಥಿತಿ ಮುಂದುವರಿದಿದ್ದರ ಪರಿಣಾಮವಾಗಿ ಕಾಫಿ ಬೆಳೆಗೆ ಬೆಲೆ ಬರುತ್ತಿದೆ. ಆದರೆ ಕಾಫಿ ಉತ್ಪಾದನಾ ವೆಚ್ಚವು ಹೆಚ್ಚಾಗಿರುವುದರಿಂದ ಮಾರುಕಟ್ಟೆಯ ಬೆಲೆಗೂ, ಕಾಫಿ ಬೆಳೆಗಾರರಿಗೆ ಸಿಗುತ್ತಿರುವ ಬೆಲೆಗೂ ಅಂತಹ ಏನೂ ಹೆಚ್ಚಿನ ಲಾಭ ಸಿಗುತ್ತಿಲ್ಲ. ಹಲವಾರು ವರ್ಷದಲ್ಲಿ ತನ್ನ ತೋಟವನ್ನು ಕಷ್ಟದಲ್ಲಿ ನಿರ್ವಹಣೆ ಮಾಡಿಕೊಂಡು ಬಂದರೂ ಬೆಲೆ ಬಂದಿರುವುದಕ್ಕೂ ಮತ್ತು ಬೆಳೆಗೂ ಸಮನಾಗಿ ಇದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಹೇಳುತ್ತಿದೆ. [ಕಾಫಿ]

English summary
Karnataka Coffee Growers Federation(KCGF) General Secretary H T Mohan Kumar said Coffee growers in Malnad region couldn"t able to come out of huddle even after center announcing package. Climate change, Monsoon gamble, labour problem made coffee growers life miserable. Market price is never match with what growers do get.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more