ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್ ರಾಜೀನಾಮೆ ಕೇಳುವ ಅಗತ್ಯವಿಲ್ಲ: ವೆಂಕಯ್ಯ

By Mahesh
|
Google Oneindia Kannada News

Venkaiah defends Ananth Kumar
ಬೆಂಗಳೂರು, ಡಿ.26: 2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಿ ಕಾರ್ಪೊರೆಟ್ ಲಾಬಿಗರ್ತಿ ನೀರಾ ರಾಡಿಯಾ ಜೊತೆ ಸಂಸದ ಅನಂತ್ ಕುಮಾರ್ ಸಂಪರ್ಕ ಆಧಾರ ರಹಿತ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಆರೋಪದಲ್ಲಿ ಸ್ಪಷ್ಟತೆಯೇ ಇಲ್ಲ. ಆರೋಪ ಬಂದ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಎಂ ವೆಂಕಯ್ಯ ನಾಯ್ಡು ಹೇಳಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 87ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು. ಜನರ ಗಮನವನ್ನು 2ಜಿ ಹಗರಣದಿಂದ ಬೇರೆಡೆಗೆ ತಿರುಗಿಸಲು ಈ ರೀತಿ ಕಾಂಗ್ರೆಸ್ ಹುನ್ನಾರ ಹೂಡುತ್ತಿದ್ದಾರೆ. ವಿನಾಕಾರಣ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ದೂಷಿಸಿ, ನಮ್ಮ ನಾಯಕರನ್ನು ಹಗರಣಗಳಲ್ಲಿ ಸಿಲುಕಿಸುತ್ತಿದೆ ಎಂದರು.

ಹಳೆ ಕೇಸ್ ಮೊದಲು ತನಿಖೆ ಆಗಲಿ: ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್, ಎಸ್ ಎಂ ಕೃಷ್ಣ, ಅವರ ಮೇಲೆ ಕೂಡ ಆರೋಪಗಳು ಕೇಳಿ ಬಂದಿದ್ದವು. ಅವರ ವಿರುದ್ಧ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಗೌಡರ ಹಗರಣ ಪಟ್ಟಿ ನಗೆಪಾಟಲು : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಶುಕ್ರವಾರ ಬಿಡುಗಡೆ ಮಾಡಿರುವ ಆರೋಪ ಪಟ್ಟಿ ನಗೆ ಪಾಟಲಿಗೆ ಈಡಾಗುತ್ತದೆ. ದೇವೇಗೌಡರ ಆರೋಪಪಟ್ಟಿಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.

ದೇಶದ ಒಕ್ಕೂಟ ವ್ಯವಸ್ಥೆಗೆ ರಾಜ್ಯಪಾಲರು ಮಾರಕವಾಗಿದ್ದಾರೆ. ಪರೋಕ್ಷ ಆಡಳಿತ ನಡೆಸುತ್ತಿದ್ದಾರೆ ಎಂದು ದೋರಿದರು. ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಹೊಲಿಗೆ ಯಂತ್ರ, ಕಂಬಳಿ ಮತ್ತು ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. [ಅನಂತ್ ಕುಮಾರ್]

English summary
M Venkaiah Naidu defended BJP General Sectetary MP Ananth Kumar and said Ananth Kumar and corporate lobbyist Nira Radia link allegations are baseless. Opposition is framing BJP leaders in 2G Spectrum scam to divert people"s attention he added. ಅನಂತ್ ರಾಜೀನಾಮೆ ಕೇಳುವ ಅಗತ್ಯವಿಲ್ಲ: ವೆಂಕಯ್ಯ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X