ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಮದ್ಯ ವಶ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

illicci liquor seize, Kodagu zp election
ಕುಶಾಲನಗರ, ಡಿ.26: ಇದೇ ತಿಂಗಳ 31 ರಂದು ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯ ಪ್ರಚಾರ ಕಾರ್ಯ ಕೊಡಗಿನಲ್ಲಿ ಬಿರುಸಿನಿಂದ ಸಾಗಿದ್ದು, ಮತದಾರರನ್ನು ಓಲೈಸಿಕೊಳ್ಳುವಲ್ಲಿ ಅರ್ಭ್ಯರ್ಥಿಗಳು ಮುಂದಾಗಿದ್ದು, ಕೆಲವರು ಕೈಮುಗಿದು ವಿನಯದಿಂದ ಮತ ಕೇಳುತ್ತಿದ್ದರೆ, ಇನ್ನು ಕೆಲವರು ಹೆಂಡ ಹಂಚುವ ಮೂಲಕ ಮತ ಕೇಳುವ ಕಾರ್ಯಕ್ಕೆ ಮುಂದಾಗಿರುವುದು ಕೆಲವೆಡೆ ಕಂಡು ಬಂದಿದೆ.

ಚುನಾವಣಾಧಿಕಾರಿಗಳು ಅಕ್ರಮ ಮದ್ಯ ಹಂಚುವಿಕೆ ಇನ್ನಿತರೆ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವ ಅಭ್ಯರ್ಥಿಗಳ ಬಗ್ಗೆ, ಪಕ್ಷದ ಕಾರ್ಯ ವೈಖರಿ ಬಗ್ಗೆ ನಿಗಾಯಿಟ್ಟಿದ್ದು, ಆದರೂ ಎಲ್ಲರ ಕಣ್ಣು ತಪ್ಪಿಸಿ ಮತದಾರರಿಗೆ ಮದ್ಯ ಹಂಚಿ ಮತ ಕೇಳುವ ಕಾರ್ಯಕ್ಕೆ ಕೆಲವರು ಮುಂದಾಗಿರುವುದು ಕಂಡು ಬಂದಿದೆ. ಈ ನಡುವೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ಕುಶಾಲನಗರ ಪೊಲೀಸರು ವಶ ಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಸಮೀಪದ ಮುಳ್ಳುಸೋಗೆ ಗ್ರಾ.ಪಂ.ಉಪಾಧ್ಯಕ್ಷ ಎಂ.ಎಸ್.ಶಿವಾನಂದ ಎಂಬುವರ ಸಹೋದರ ಎಂ.ಎಸ್. ಕುಮಾರ ಬಂಧಿತ ಆರೋಪಿಯಾಗಿದ್ದಾನೆ. ಈತ ಮತದಾರರಿಗೆ ಹಂಚಲು ಮದ್ಯವನ್ನು ಮನೆಯೊಂದರಲ್ಲಿ ಶೇಖರಿಸಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಜಯಪ್ರಕಾಶ್ ಅಕ್ಕರಕಿ ನೇತೃತ್ವದಲ್ಲಿ ಸಂಚಾರಿ ಠಾಣಾಧಿಕಾರಿ ನಾಗೇಶ್ ಮತ್ತು ಸಿಬ್ಬಂದಿಗಳು ಮಧ್ಯರಾತ್ರಿಯ ಸಮಯದಲ್ಲಿ ದಾಳಿ ಮಾಡಿ ಹಾರಂಗಿ ರಸ್ತೆಯಲ್ಲಿರುವ ಮನೆಯೊಂದರಲ್ಲಿದ್ದ ಸುಮಾರು 30 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

English summary
Kodagu ZP TP Election to be held on Dec.31. Kushalanagara Police have seized illicit liquor worth Rs. 30,000 which was meant to distribute to voters in Mullusoge gram panchayat said DYSP Jayaprakash Akkariki.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X