ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಜಿಪಂ, ತಾಪಂ: ಕ್ರಾಸ್ ಓಟಿಂಗ್ ಆತಂಕ

By * ರೋಹಿಣಿ, ಬಳ್ಳಾರಿ
|
Google Oneindia Kannada News

Bellary voters
ಬಳ್ಳಾರಿ, ಡಿ. 26: ಅಭ್ಯರ್ಥಿಗಳಲ್ಲಿ 'ಕ್ರಾಸ್‌ ಓಟಿಂಗ್"ನ ಆತಂಕ, ಮತಯಂತ್ರಗಳ ಬಳಕೆಯ ಗೊಂದಲ, ಮತದಾರರನ್ನು ತಮ್ಮತ್ತ ಸೆಳೆಯಲು ಕೋಳಿ, ಅಕ್ಕಿ, ಹಣ, ಸೀರೆ ಹಂಚುತ್ತಿರುವ ಅಭ್ಯರ್ಥಿಗಳ ಕೊನೆಯ ಕಸರತ್ತು. ಗುಟ್ಟುಬಿಡದ ಮತದಾರ.

ಬಳ್ಳಾರಿ ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ, 135 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಬಹುತೇಕ ಶೇ.70 ರಷ್ಟು ಅಭ್ಯರ್ಥಿಗಳಲ್ಲಿ 'ಕ್ರಾಸ್‌ಓಟಿಂಗ್'ನ ಭಯ ತೀವ್ರವಾಗಿ ಕಾಡುತ್ತಿದೆ. ಸಿರುಗುಪ್ಪ ತಾಲೂಕಿನಲ್ಲಿ ಮಾತ್ರ ಬಿಜೆಪಿಯನ್ನು ಮಣಿಯಲು ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧಿಸಿವೆ.

ಕುಡತಿನಿ, ಕುರುಗೋಡು, ಮೋಕಾ, ರೂಪನಗುಡಿ, ಏಳಬೆಂಚೆ ಸೇರಿ ಬಳ್ಳಾರಿ ತಾಲೂಕಿನ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಜಿಲ್ಲಾ - ತಾಲೂಕು ಪಂಚಾಯಿತಿಗೆ ಮತಗಳು ಕ್ರಾಸ್‌ಓಟಿಂಗ್ ಆಗಲಿವೆ. ಜಾತಿ, ಉಪಜಾತಿ, ಪ್ರತಿಷ್ಠೆಗಳ ಮೂಲಕ ಈ ಕ್ರಾಸ್‌ಓಟಿಂಗ್ ವ್ಯವಸ್ಥೆ ಜಾರಿ ಆಗುತ್ತಿದೆ. ಈ ವ್ಯವಸ್ಥೆ ರಹಸ್ಯವಾಗಿ ನಿರ್ಧಾರಕ್ಕೆ ಬಂದು ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮತಯಂತ್ರಗಳ ಮೂಲಕವೇ ಮತ ಚಲಾವಣೆ ಮಾಡಿರುವ ಗ್ರಾಮೀಣ ಮತದಾರರು, ಇದೇ ಪ್ರಥಮಬಾರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತಯಂತ್ರಗಳಲ್ಲಿ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಆದರೆ, ತಾಲೂಕು - ಜಿಲ್ಲಾ ಪಂಚಾಯಿತಿಯ ಪ್ರತ್ಯೇಕ ಮತಯಂತ್ರಗಳ ಮಾಹಿತಿಯನ್ನು ಅಭ್ಯರ್ಥಿಗಳು, ಪಕ್ಷಗಳು ಮತದಾರರಿಗೆ ನೀಡಿಲ್ಲ.

ಹೊಸಪೇಟೆ ತಾಲೂಕಿನಲ್ಲಿ ಬಿಜೆಪಿ - ಕಾಂಗ್ರೆಸ್ ನೇರ ಸ್ಪರ್ಧೆ ಏರ್ಪಟ್ಟಿದೆ. ಮರಿಯಮ್ಮನಹಳ್ಳಿ ಫಿರ್ಕಾದಲ್ಲಿ ಕ್ರಾಸ್‌ಓಟಿಂಗ್ ಭೂತ ಅನೇಕರನ್ನು ಕಾಡುತ್ತಿದೆ. ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಂಡೂರು - ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಬಿಜೆಪಿ ಬಿರುಸಿನ ಪ್ರಚಾರ ನಡೆಸಿವೆ.

ಮತದಾರರನ್ನು ತಮ್ಮತ್ತ ಸೆಳೆಯಲು ಕೊನೆಯ ಸುತ್ತಿನ ಕಸರತ್ತಾಗಿ ಅಭ್ಯರ್ಥಿಗಳು, ಪಕ್ಷಗಳು ಹಂಚುವ ಕೋಳಿ, ಹಣ, ಸೀರೆ, ಅಕ್ಕಿಯನ್ನು ಪಡೆಯುತ್ತಿರುವ ಮತದಾರರು, ತಾವು ಮತ ಚಲಾಯಿಸಲು ನಿರ್ಧರಿಸಿರುವ ಅಭ್ಯರ್ಥಿ, ಪಕ್ಷಗಳ ಕುರಿತು ಮೌನ ಮುರಿಯುತ್ತಿಲ್ಲ. ಮತ ಚಲಾಯಿಸುವ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. [ಬಳ್ಳಾರಿ]

English summary
Bellary Zilla Panchayat and Taluk Panchayat election candidates fear cross voting by voters. Though voting progress is peaceful in many parts of the District, Hospet and Kudatini Gram Panchayat witnessed Congress-JDS workers clash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X