ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರವರೆಗೆ ಎಚ್ 1ಬಿ ವೀಸಾ ಶುಲ್ಕ ಇಳಿಕೆ ಇಲ್ಲ

By Mahesh
|
Google Oneindia Kannada News

H 1B and L1 fee hike till 2021
ವಾಷಿಂಗ್ಟನ್, ಡಿ.24: ಎಚ್ 1 ಬಿ ಮತ್ತು ಎಲ್ 1 ವೀಸಾಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಮಸೂದೆಗೆ ಅಮೆರಿಕ ಸಂಸತ್ತು ಅಂಗೀಕಾರ ನೀಡಿದೆ. ಇದರಿಂದ ಈ ವೀಸಾಗಳನ್ನು ಹೆಚ್ಚಾಗಿ ಬಳಸುತ್ತಿರುವ ಭಾರತೀಯ ವೃತ್ತಿಪರರ ಮೇಲೆ ತಲಾ 2000 ಡಾಲರ್ ಗಳಷ್ಟು ಅಧಿಕ ಹೊರೆ ಬೀಳಲಿದೆ. ಭಾರತೀಯ ಹೊರಗುತ್ತಿಗೆ ಕಂಪೆನಿಗಳಿಗೂ(ಬಿಪಿಒ) ಇದರ ಬಿಸಿ ತಟ್ಟಲಿದ್ದು, ವೀಸಾ ಶುಲ್ಕ ಹೆಚ್ಚಳ ನೀತಿ 2021ರ ಸೆಪ್ಟೆಂಬರ್ 30 ವರೆಗೂ ವಿಸ್ತರಣೆಯಾಗಲಿದೆ ಎಂದು ಅಮೆರಿಕದ ಕಾನೂನು ಇಲಾಖೆ ಪ್ರಕಟಿಸಿದೆ.

ನ್ಯೂಯಾರ್ಕಿನ ಅವಳಿ ಗೋಪುರ ನೆಲಸಮಗೊಂದ ನಂತರ ನಡೆದ "ಗ್ರೌಂಡ್ ಜೀರೋ" ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿ ಅನಾರೋಗ್ಯಕ್ಕೆ ತುತ್ತಾದವರಿಗೆ ಉಚಿತ ಚಿಕಿತ್ಸೆ ಹಾಗೂ ಪರಿಹಾರ ನೀಡಲು 430 ಕೋಟಿ ಡಾಲರ್ ನಿಧಿ ಸಂಗ್ರಹಿಸಲು ಈ ಮಸೂದೆ[James Zadroga Health and Compensation Act] ಯ ಉದ್ದೆಶ. ಕೆಲವು ವಿದೇಶಿ ಕಂಪೆನಿಗಳ ಮೇಲೆ( ಹೆಚ್ಚಾಗಿ ಭಾರತೀಯ ಕಂಪನಿಗಳ ಮೇಲೆ) ಶೇ.2 ರಷ್ಟು ಉತ್ಪಾದನಾ ತೆರಿಗೆ ವಿಧಿಸುವ ಜತೆಗೆ ಇನ್ನಿತರ ಕ್ರಮಗಳ ಮೂಲಕ ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನೂ ಮಸೂದೆ ಹೊಂದಿದೆ.

ಬಿಪಿಒ ಕಂಪನಿಗಳಿಗೆ ಹೊಡೆತ: ಎಚ್ 1ಬಿ ಹಾಗೂ ಎಲ್ 1 ವೀಸಾಗಳ ಮೇಲೆ ಹೆಚ್ಚುವರಿ ಶುಲ್ಕ ಸಂಗ್ರಹ ಕಾರ್ಯ ಮುಂದುವರೆಸಿ ಸುಮಾರು 800ಮಿಲಿಯನ್ ಡಾಲರ್ ನಷ್ಟು ಹಣವನ್ನು ಮುಂದಿನ 10 ವರ್ಷಗಳಲ್ಲಿ ಸಂಗ್ರಹಿಸುವ ಗುರಿಯಿದೆ. ಹೀಗಾಗಿ, ಹೊರಗುತ್ತಿಗೆ ಕಂಪನಿಗಳಾದ ವಿಪ್ರೋ, ಟಾಟಾ, ಇನ್ಫೋಸಿಸ್, ಮಹೀಂದ್ರಾ ಸತ್ಯಂ ಕಂಪನಿಗಳಿಗೆ ಹೊಡೆತ ಬೀಳಲಿದೆ. ಆದರೆ, ಮೈಕ್ರೋಸಾಫ್ಟ್, ಆರೇಕಲ್, ಇಂಟೆಲ್, ಆಪಲ್ ಮುಂತಾದ ಕಂಪನಿಗಳು ತೆರಿಗೆ ಹೊರೆಯಿಂದ ಬಚಾವಾಗಿದೆ. [ವೀಸಾ]

English summary
US lawmakers are targeting Indian outsourcing IT Firms by extending the heavy hike on H 1B and L1 visa fees by seven more years till Sept 30, 2021. Modified legislation is concerned about 9/11 health and compensation to 9/11 victims. Indian IT firms also have to pay 2 per cent excise fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X