ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎಎಲ್ ದೇಶದ ತ್ವರಿತ ಬೆಳವಣಿಗೆಯ ನಿಲ್ದಾಣ

By Mahesh
|
Google Oneindia Kannada News

BIAL air traffic 2010
ಬೆಂಗಳೂರು, ಡಿ.24: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್) ನ ಏರ್ ಟ್ರಾಫಿಕ್ ವಿವರಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಬಿಡುಗಡೆ ಮಾಡಿದ್ದು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿಲ್ದಾಣ ಎಂದು ಘೋಷಿಸಿದೆ. 2010 ರಲ್ಲಿ ಸುಮಾರು 11.24 ಮಿಲಿಯನ್ ಪ್ರಯಾಣಿಕರು ಪಯಣಿಸಿದ ಅಂಕಿ ಅಂಶ ದೊರೆತಿದೆ.

ಮೇ 2008ರಿಂದ ಇಲ್ಲಿವರೆಗಿನ ಅಂಕಿ ಅಂಶಗಳ ಪ್ರಕಾರ ಡಿ.17, 2010 ದಿನವೊಂದರಲ್ಲೇ ಸುಮಾರು 38,134 ಪ್ರಯಾಣಿಕರನ್ನು ಸಂಭಾಳಿಸಿದ್ದು ಸರ್ವಕಾಲಿಕ ದಾಖಲೆಯಾಗಿದೆ. ಕಾರ್ಗೊ ವಿಮಾನಯಾನದಲ್ಲೂ ಶೇ.31ರಷ್ಟು ಪ್ರಗತಿ ಉಂಟಾಗಿದೆ. ಈ ವರ್ಷ ಫೆಡ್ ಎಕ್ಸ್ ನಿಂದ ಭಾರತ ಹಾಗೂ ಯುರೋಪಿಗೆ, ಡೆಕ್ಕನ್ ಕಾರ್ಗೊ ಕೊಯಮತ್ತೂರ್, ನಾಗಪುರ ಹಾಗೂ ಹೈದರಾಬಾದಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ಬಿಐಎಲ್ ಅಧ್ಯಕ್ಷ ಮಾರ್ಸೆಲ್ ಹೇಳಿದರು.

ಹೊಸ ವರ್ಷಕ್ಕೆ ಹೊಸ ಮಾರ್ಗಗಳು: ವರ್ಷಕ್ಕೆ ಎರಡು ಅಂತಾರಾಷ್ಟ್ರೀಯ ಮಾರ್ಗಗಳನ್ನು ಸೇರ್ಪಡೆ ಮಾಡಿಕೊಳ್ಳುವ ಉದ್ದೇಶವನ್ನು ಬಿಐಎಎಲ್ ಹೊಂದಿದೆ. ಬೆಂಗಳೂರಿನಿಂದ ಈಶಾನ್ಯ ಏಷ್ಯಾ, ಚೀನಾ, ಆಫ್ರಿಕಾ ಹಾಗೂ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಸಾಧಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಮುಂದಿನ ತಿಂಗಳಿನಿಂದ ಎಟಿಹಾದ್ ಏರ್ ಲೈನ್ಸ್ ಮೂಲಕ ಅಬು ದಾಬಿಗೆ ನೇರ ವಿಮಾನ ಸಂಪರ್ಕ ಆರಂಭವಾಗಲಿದೆ. ಥಾಯ್ ಏರ್ ಏಷ್ಯಾ, ಥಾಯ್ ಟೈಗರ್, ಡಿಎಚ್ ಎಲ್ ಕಾರ್ಗೊ, ಟಿಎನ್ ಟಿ ಕಾರ್ಗೊ, ಚೀನಾ ಸದರನ್ ಹಾಗೂ ಎಎನ್ಎ ಏರ್ ವೇಸ್ ಗಳು ಬೆಂಗಳೂರಿನಿಂದ ವಿಮಾನಯಾನ ಆರಂಭಿಸಲು ಉತ್ಸುಕವಾಗಿದೆ ಎಂದು ಬಿಐಎಎಲ್ ನ ಅಧ್ಯಕ್ಷ ಮಾರ್ಸೆಲ್ ಹಂಗರ್ ಬೂಹ್ಲರ್ ಹೇಳಿದ್ದಾರೆ. [ಬಿಐಎಎಲ್]

English summary
Airports Authority of India(AAI) has released Bengaluru Internatrional Airport Limited(BIAL) air traffic stastics for 2010. Figures and fact made BIA the fastest growing airport in the country. BIAL plans for 2011: new routes connecting South East Asia, China, Africa and the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X