ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ ಬಿಪಿಒ ಉದ್ಯೋಗಿ ಕೊಲೆ, ಪತಿ ಮೇಲೆ ಶಂಕೆ

By Mahesh
|
Google Oneindia Kannada News

Dell employee murder case
ಬೆಂಗಳೂರು, ಡಿ.19: ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಸುರೇಖಾ ಅವರ ಮರ್ಡರ್ ಕೇಸ್ ಹೊಸ ತಿರುವು ಪಡೆದು ಕೊಂಡಿದೆ. ಆಕೆ ಪತಿ ಆನಂದ್ ನಾರಾಯಣ್ ಮಿಶ್ರಾ ಅವರು ಶುಕ್ರವಾರ ತಡ ರಾತ್ರಿ ನಗರಕ್ಕೆ ಬಂದಿದ್ದು, ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ. ಸುರೇಖಾ ಪೋಷಕರು ಹಾಗೂ ಸಂಬಂಧಿಕರು, ನೆರೆ ಹೊರೆಯವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದ್ದು, ಮೇಲ್ನೋಟಕ್ಕೆ ಸುರೇಖಾ ಅವರ ಪತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಫೋಟೋ ಸುಳಿವು: ಮಿಶ್ರಾ ಅವರು ಡಿ.14ರಂದು ಒಡಿಶಾಗೆ ಹೋಗಿದ್ದರು. ಕೊಲೆ ಘಟನೆ ನಡೆಯುವುದಕ್ಕೂ ಮುನ್ನ ಅವರು ಪತ್ನಿಯ ಮೊಬೈಲ್‌ಗೆ ಕರೆ ಮಾಡಿರುವುದು ತನಿಖೆಯಿಂದ ಧೃಡಪಟ್ಟಿದೆ. ಸುರೇಖಾ ಅವರ ಮನೆಯಲ್ಲಿ ಫೋಟೊ ಆಲ್ಬಂ ಪತ್ತೆಯಾಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬನ ಛಾಯಾಚಿತ್ರವಿದೆ. ಆ ಛಾಯಾಚಿತ್ರದಲ್ಲಿದ್ದ ವ್ಯಕ್ತಿಯೇ ಕೊಲೆ ನಡೆದ ದಿನ ಬೆಳಗ್ಗೆ ಅವರ ಮನೆಗೆ ಬಂದು ಹೋಗಿದ್ದ ಎಂಬುದನ್ನು ನೆರೆಹೊರೆಯವರು ಖಚಿತಪಡಿಸಿದ್ದಾರೆ. ಆ ವ್ಯಕ್ತಿಯ ಪತ್ತೆ ಕಾರ್ಯ ಮುಂದುವರೆದಿದೆ. ಸುರೇಖಾ ಅವರ ಮೊಬೈಲ್ ಕರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದೆ ಎಂದು ಜೆಪಿ ನಗರ ಪೊಲೀಸರು ಹೇಳಿದರು.

ಛಾಯಾಚಿತ್ರದಲ್ಲಿರುವ ವ್ಯಕ್ತಿ ಸುರೇಖಾರ ಸ್ನೇಹಿತನೇ ಅಥವಾ ಮಿಶ್ರಾ ಅವರು ಆ ವ್ಯಕ್ತಿಗೆ ಸುಪಾರಿ ಕೊಟ್ಟು ಪತ್ನಿಯನ್ನು ಕೊಲೆ ಮಾಡಿಸಿದ್ದಾರೆಯೇ ಎಂಬ ದೃಷ್ಟಿಕೋನದಿಂದ ಕೇಸ್ ಆನ್ನು ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಜೆಪಿನಗರ ಠಾಣಾಧಿಕಾರಿಗಳು ತಿಳಿಸಿದರು.

English summary
JP Nagar Police are investigating the Dell Employee Payal Sureka murder case and Surekh"s husband Anand Mishra is found to be prime suspect. Police are interrogating Surekha"s relatives and neighbors and the mystery friend whose photo found in the Surekha"s album
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X