ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ. 31 ರಾತ್ರಿ 8ರ ನಂತರವೇ ಮದ್ಯ ಮಾರಾಟ

By Mahesh
|
Google Oneindia Kannada News

ZP Election and New year celebrations
ಬೆಂಗಳೂರು, ಡಿ. 22: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಿ.31ರಂದು ರಾತ್ರಿ 8 ಗಂಟೆ ನಂತರವೇ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಇದರ ಜೊತೆಗೆ ನಗರದ ಬ್ರಿಗೇಡ್ ರಸ್ತೆ ಸುತ್ತಮುತ್ತ ನಡೆಯುವ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ನಿಯಮಾವಳಿಗಳನ್ನು ರೂಪಿಸಿದ್ದು ಸದ್ಯದಲ್ಲೇ ಪ್ರಕಟಿಸಲಿದ್ದಾರೆ.

ಗುಲ್ಬರ್ಗದಲ್ಲಿ ಜ.1ರಂದು ಚುನಾವಣೆ ಇರುವ ಕಾರಣ, ಅಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಲು ಸಾಧ್ಯವೇ ಇಲ್ಲ. ಉಳಿದ 17 ಜಿಲ್ಲೆಗಳಲ್ಲಿ 31ರಂದು ರಾತ್ರಿ ಎಂಟು ಗಂಟೆಯ ನಂತರ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಅಬಕಾರಿ ಇಲಾಖೆಯಿಂದ ಆಯೋಗಕ್ಕೆ ಮನವಿ ಬಂದರೆ ಮಾತ್ರ ಮದ್ಯ ಮಾರಾಟ ಅವಕಾಶ ನೀಡುವ ಇಂಗಿತ ಆಯೋಗ ವ್ಯಕ್ತಪಡಿಸಿದೆ.

ನೀತಿ ಸಂಹಿತೆ ನಿರ್ಬಂಧವಿಲ್ಲ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಹಾಗೂ ವಿ.ವಿ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆ, ಸರ್ಕಾರದ ಅನುದಾನಿತ ಕಾರ್ಯಕ್ರಮಗಳು, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ನೇಮಕ, ಚುನಾವಣಾ ಕಾರ್ಯಕ್ಕೆಂದು ವರ್ಗಾವಣೆಗೊಂಡ ಸಿಬ್ಬಂದಿಯನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿನ ಯಾವುದೇ ಇಲಾಖೆಗಳಲ್ಲಿಯ ಸಿಬ್ಬಂದಿ ವರ್ಗಾವಣೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಚುನಾವಣಾ ಆಯೋಗ ನೀಡಿರುವ ಹೇಳಿಕೆ ಪ್ರಕಾರ ಈ ಮೇಲ್ಕಂಡ ಪ್ರಕ್ರಿಯೆಗಳು ಚುನಾವಣಾ ನೀತಿ ಸಂಹಿತೆಯಿಂದ ಹೊರಗೆ ಉಳಿಯಲಿವೆ. [ಹೊಸ ವರ್ಷ]

English summary
Karnataka Zilla and Taluk Panchayat Election model code of conduct is implemented in 17 districts. Second phase of polls begins on Jan.1 in Gulbarga. State Election Commission has restricted New Year 2011 celebrations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X