ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಹಮತ್ ತರೀಕೆರೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Mahesh
|
Google Oneindia Kannada News

Rahamat Tarikeri
ಬೆಂಗಳೂರು, ಡಿ.21: ಹಂಪಿ ಕನ್ನಡ ವಿವಿಯ ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ ಡಾ. ರಹಮತ್ ತರೀಕೆರೆ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ಡಾ. ತರೀಕೆರೆ ಅವರ 'ಕತ್ತಿಯಂಚಿನ ದಾರಿ" ಸಾಹಿತ್ಯ ವಿಮರ್ಶ ಸಂಕಲನಕ್ಕೆ ಈ ಪ್ರಶಸ್ತಿ ಲಭಿಸಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳದಲ್ಲಿ ಆ.26, 1959ರಲ್ಲಿ ಜನಿಸಿದ ಡಾ. ರಹಮತ್ ತರಿಕೇರೆ ಸ್ವಂತ ಊರು ತರೀಕೆರೆ ಸೇರಿದಂತೆ ಶಿವಮೊಗ್ಗ, ಮೈಸೂರಿನಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಭಾಷಾ ನಿಕಾಯದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕತ್ತಿಯಂಚಿನ ದಾರಿ ಬಗ್ಗೆ: ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ), ಸಂಕಲನವನ್ನು 2006ರಲ್ಲಿ ಬೆಂಗಳೂರಿನ ಅಭಿನವ ಪ್ರಕಾಶನ ಪ್ರಕಟಿಸಿದೆ. ಈ ಸಂಕಲನವನ್ನು ಡಾ. ತರಿಕೇರೆ ತಮ್ಮ ಧರ್ಮ ಪತ್ನಿಗೆ ಅರ್ಪಿಸಿದ್ದರು.

ಇದರಲ್ಲಿ ಕುವೆಂಪು, ರಾಮಚಂದ್ರ ಶರ್ಮ, ನಿಸಾರ್ ಅಹ್ಮದ್, ತೇಜಸ್ವಿ, ಡಿ.ಆರ್. ನಾಗರಾಜ, ಶಾಂತಿನಾಥ ದೇಸಾಯಿ, ಕಾರಂತ ಮುಂತಾದ ಆಧುನಿಕ ಲೇಖಕರ ಕುರಿತು ಹಾಗೂ ಬಸವಣ್ಣ, ರಾಘವಾಂಕ, ವಡ್ಡಾರಾಧನೆ, ಶೂನ್ಯಸಂಪಾದನೆ ಮುಂತಾದ ಆಧುನಿಕ ಪೂರ್ವ ಲೇಖಕರು ಮತ್ತು ಕೃತಿಗಳ ಮೇಲೆ ವಿಶ್ಲೇಷಣಾ ಲೇಖನಗಳಿವೆ. ಕೆ.ವಿ.ಸುಬ್ಬಣ್ಣ, ಪಿ.ಲಂಕೇಶ್, ಶಂಕರ ಮೊಕಾಶಿ ಪುಣೇಕರ, ಎಚ್.ಎಂ.ಚನ್ನಯ್ಯ ಅವರ ವ್ಯಕ್ತಿಚಿತ್ರಗಳಿವೆ. ಅದೇ ರೀತಿ ಕನ್ನಡ ಮುಸ್ಲಿಂ ಜಾನಪದ ಮತ್ತು ಮುಸ್ಲಿಂ ತತ್ವಪದಕಾರರ ಕುರಿತ ಎರಡು ಲೇಖನಗಳಿವೆ.

ಪ್ರಶಸ್ತಿ ವಿವಿಗೆ ಅರ್ಪಣೆ: ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಡಾ. ತರೀಕೆರೆ, ಪ್ರಶಸ್ತಿ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದರ ಜೊತೆಗೆ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ತಿಳಿದಿದ್ದೇನೆ. ನಾನು ಹಂಪಿ ಕನ್ನಡ ವಿವಿಗೆ ಬಂದ ನಂತರ ಬರೆದ ಸಂಕಲನಕ್ಕೆ ಪ್ರಶಸ್ತಿ ಲಭಿಸಿರುವುದರಿಂದ ನನ್ನ ಬೌದ್ಧಿಕ ಹಸಿವನ್ನು ನೀಗಿಸಿ, ನನ್ನನ್ನು ಸಾಹಿತ್ಯಕವಾಗಿ ಪ್ರಬುದ್ಧಗೊಳಿಸಿದ ತಾಯಿ ಸಮಾನ ವಿವಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ವಿನಮ್ರವಾಗಿ ಅವರು ಹೇಳಿದರು.

ಈವರೆಗಿನ ಮುಖ್ಯ ಪ್ರಕಟಣೆಗಳು: ಪ್ರತಿ ಸಂಸ್ಕೃತಿ, ಕತ್ತಿಯಂಚಿನ ದಾರಿ, ಚಿಂತನೆಯ ಪಾಡು (ಸಾಹಿತ್ಯ ವಿಮರ್ಶೆ); ಮರದೊಳಗಣ ಕಿಚ್ಚು, ಸಾಂಸ್ಕೃತಿಕ ಅಧ್ಯಯನ (ಸಂಸ್ಕೃತಿ ಚಿಂತನೆ); ಮಾತು ತಲೆಯೆತ್ತುವ ಬಗೆ, ಇಲ್ಲಿ ಯಾರೂ ಮುಖ್ಯರಲ್ಲ (ಕನ್ನಡ ಸಾಹಿತ್ಯ ಮೀಮಾಂಸೆ); ಲೋಕವಿರೋಧಿಗಳ ಜತೆಯಲ್ಲಿ (ಸಂದರ್ಶ ನಗಳು); ಕರ್ನಾಟಕದ ಸೂಫಿಗಳು, ಕರ್ನಾಟಕದ ನಾಥಪಂಥ (ಸಂಶೋಧನೆ); ವಸಾಹತು ಪ್ರಜ್ಞೆ ಮತ್ತು ವಿಮೋಚನೆ, (ಅನುವಾದ); ಅಂಡಮಾನ್ ಕನಸು, (ಪ್ರವಾಸ ಕಥನ); ಧರ್ಮಪರೀಕ್ಷೆ (ಚಿಂತನೆ); ಕನ್ನಡ ಸಂಶೋಧನೆ ತಾತ್ವಿಕ ವಿಚಾರ (ಸಂಶೋಧನ ವಿಧಾನ); ಹೊಸತಲೆಮಾರಿನ ತಲ್ಲಣ (ಸಂಪಾದನೆ) ಮುಂತಾದವು.

ಪ್ರಶಸ್ತಿಗಳು: 1993ರಲ್ಲಿ ಪ್ರತಿ ಸಂಸ್ಕೃತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ
1998ರಲ್ಲಿ ಕರ್ನಾಟಕ ಸೂಫಿಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ,
2000ರಲ್ಲಿ ಅಂಡಮಾನ್ ಕನಸು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ
2008ರಲ್ಲಿ ಜಿಎಸ್‌ಎಸ್ ಪ್ರಶಸ್ತಿ, (ಸಾಹಿತ್ಯ ವಿಮರ್ಶೆಯ ಕೆಲಸಕ್ಕೆ)

ಇದಲ್ಲೆ ಧರ್ಮಪರೀಕ್ಷೆ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪಿ.ಲಂಕೇಶ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಾಮಾನಾಯಕ ಪ್ರಶಸ್ತಿಗಳು ಲಭಿಸಿವೆ.[ಸಾಹಿತ್ಯ ಅಕಾಡೆಮಿ]

English summary
Kannada writer Rahamath Tarikere bagged Kendra Sahitya Akademi Awards 2010 for his work Kattiyanchina Daari. He is Dean of the Languages Discipline at the Hampi Kannada University. the literary works in 22 languages have won the awards for 2010 said academy secretary Agrahara Krishnamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X