ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಿಎಸ್ ಹಿಂದೂ ಅರ್ಚಕರಿಗೆ ತರಬೇತಿ ಶಿಬಿರ

By Mahesh
|
Google Oneindia Kannada News

Balagangadharanath Swamiji
ಬೆಂಗಳೂರು, ಡಿ.21: ಭಗವಂತನ ಪೂಜೆ ಸಾಕ್ಷಾತ್ ದರ್ಶನ ಸಾಧ್ಯವಾಗುವಂತೆ ಇರಬೇಕೆಂದು ಆದಿಚುಂಚನಗಿರಿ ಮಠದ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾಸ್ವಾಮಿಕರೆ ನೀಡಿದ್ದಾರೆ. ಶ್ರೀಪೀಠದಿಂದ ನೀಡುತ್ತಿರುವ ಎಲ್ಲಾ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಅಭ್ಯಾಸ ನಡೆಸಿ ಭಕ್ತರಿಗೆ ಸಂತಸವಾಗುವಂತೆ ದೇವರ ಪೂಜಾಕಾರ್ಯದಲ್ಲಿ ತೊಡಗಬೇಕೆಂದು ಮಾರ್ಗದರ್ಶನ ನೀಡಿದರು.

ನಗರದ ಬಿಜಿಎಸ್ ಆಧ್ಯಾತ್ಮಿಕ ಸಭಾ ಭವನದಲ್ಲಿ ನಡೆದ ರಾಜ್ಯ ಮಟ್ಟದ ಮೂರನೇ ಆರ್ಚಕರ ವೃತ್ತಿ ಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಗಳಾದವರು ಹೇಗಿರಬೇಕೆಂಬುದನ್ನು ತಿಳಿಸುವ ಉದ್ದೇಶದಿಂದ ಈ ಶಿಬಿರ ಏರ್ಪಡಿಸಲಾಗಿದೆ.

ಸಮಾರಂಭದಲ್ಲಿ ಶಿಬಿರದ ಸಂಚಾಲಕ ಹಾಗೂ ಪ್ರಾಚಾರ್ಯ ಪ್ರೊ.ಸಿ.ನಂಜುಡಯ್ಯ, ಕೊಳದ ಮಠದ ಡಾ.ಶಾಂತರವೀರ ಮಹಾಸ್ವಾಮಿ, ಚಿತ್ರದುರ್ಗ ಸದ್ಗುರು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ನಾಗಸಂದ್ರ ಮಠದ ಶ್ರೀ ಸಿದ್ಧಲಿಂಗಸ್ವಾಮಿ ಉಪಸ್ಥಿತರಿದ್ದರು.

ಶ್ರೀಕ್ಷೇತ್ರದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 16 ದಿನಗಳ ಶಿಬಿರದಲ್ಲಿ ರಾಜ್ಯದ 26 ಜಿಲ್ಲೆಗಳಿಂದ 650 ಮಂದಿ ಅರ್ಚಕರು ಭಾಗವಹಿಸುತ್ತಿದ್ದಾರೆ. ಅವರಿಗೆ 30 ಮಂದಿ ವಿದ್ವಾಂಸರಿಂದ ಶಿಕ್ಷಣ ತರಬೇತಿ ನೀಡಲಾಗುತ್ತಿದೆ. ಅರ್ಚಕರಿಗೆಲ್ಲ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. [ಬಾಲಗಂಗಾಧರನಾಥ ಸ್ವಾಮೀಜಿ]

English summary
Balgangadharanath Swamiji inugurated Hindu priest(archaks) trainting camp at Adichunchanagiri mutt Bangalore branch. Over 650 priests from around 26 districts are getting training for 16 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X