• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಜನ ಪದ್ಮಮ್ಮ ಮತ್ತಿತರರಿಗೆ ನಾಡೋಜ ಗೌರವ

By * ರೋಹಿಣಿ ಬಳ್ಳಾರಿ
|

ಬಳ್ಳಾರಿ, ಡಿ. 21 : ಸುಂದರವಾಗಿ ಸಿಂಗಾರಗೊಂಡ ನವರಂಗ ಬಯಲು ರಂಗಮಂದಿರದಲ್ಲಿ ತಣ್ಣಗೆ ಮೈಕೊರೆಯುವ ಚಳಿಯ ಇಳಿ ಸಂಜೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ, ರಂಗ ಕಲಾವಿದೆ ಹರಿಜನ ಪದ್ಮಮ್ಮ ಇವರಿಗೆ ನಾಡೋಜ ಪದವಿ ನೀಡಿ ಗೌರವಿಸಲಾಯಿತು.

ಈ ಪದವಿ ಪ್ರದಾನ ಸಮಾರಂಭದಲ್ಲಿ ನುಡಿಹಬ್ಬ 19ನೇ ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಾಂಕ ಪರಿಷತ್ತಿನ ನಿರ್ದೇಶಕರಾದ ಪ್ರೊ. ಎಚ್.ಎ.ರಂಗನಾಥ, ಕುಲಪತಿ ಡಾ. ಎ. ಮುರಿಗೆಪ್ಪ, ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ, ಡೀನ್‌ಗಳಾದ ಡಾ. ರಹಮತ್ ತರಿಕೆರೆ, ಟಿ.ಆರ್. ಚಂದ್ರಶೇಖರ್, ಡಾ. ಎಚ್.ಎಸ್. ಪಾಟೀಲ್ ಹಾಗೂ ಉಪ ಕುಲಸಚಿವರು, ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.

ರಾಜ್ಯಪಾಲ ಹಾಗೂ ಕುಲಾಧಿಪತಿಗಳಾಗಿರುವ ಹಂಸರಾಜ್ ಭಾರದ್ವಾಜ್ ಗೈರು ಹಾಜರಿಯಲ್ಲಿ ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯರೇ ಪ್ರಶಸ್ತಿ ಪ್ರದಾನ ಮಾಡಿದರು. ಆರಂಭದಲ್ಲಿ ಕುಲಪತಿ ಡಾ. ಎ.ಮುರಿಗೆಪ್ಪ ಸ್ವಾಗತಿಸಿದರು. ವಿ.ಎಸ್.ಆಚಾರ್ಯ ಅವರೇ ಡಿ.ಲಿಟ್ ಪದವಿಗಳನ್ನು ಸಹ ಪ್ರದಾನ ಮಾಡಿದರು.

ಆರಂಭದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ನಾಡೋಜ ಪದವಿ ಪಡೆದವರನ್ನು ಹಾಗೂ ಗಣ್ಯರನ್ನು ಕರೆತರಲಾಯಿತು. ನಾಡೋಜ ಪದವಿಗೆ ಪಾತ್ರರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಖ್ಯಾತ ಹಿನ್ನೆಲೆ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ ಗೈರು ಹಾಜರಾಗಿದ್ದರು. ಅವರ ಮನೆಗೆ ತೆರಳಿ ನಾಡೋಜ ಪದವಿ ಗೌರವ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ. ಎ.ಮುರಿಗೆಪ್ಪ ಅವರು ಹೇಳಿದರು.

English summary
Nadoja awards 2010 : Hampi Kannada University confers Nadoja awards to Baragur Ramachandrappa, MM Kalburgi, Harijan Padmamma on 19th Nada Habba celebration at Hampi. Dr. Veerendra Heggade and Dr PB Srinivas are other awardees, who were absent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X