• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗವಾಯಿಗಳ ಸ್ಮರಣೆಯಲ್ಲಿ ತಬಲಾ ಸಿಂಫೋನಿ

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಡಿ.20: ರಾಜ್ಯದ ಹಲವಾರು ನಗರಗಳಲ್ಲಿ ಸ್ವರನಾದ ಯಾತ್ರೆ ಎಂಬ ಸಂಗೀತ ಯಾತ್ರೆಯನ್ನು ಬೆಂಗಳೂರಿನ ಸುನಾದ ಕಲಾ ಪ್ರತಿಷ್ಠಾನ ಹಾಗೂ ನ್ಯೂಯಾರ್ಕ್‌ನ ಛಂದಾಯನ ಸಂಗೀತ ಶಾಲೆ ಇವರ ಸಹಯೋಗದಲ್ಲಿ ಪಂಡಿತ್ ಡಾ: ಪುಟ್ಟರಾಜ ಕವಿ ಗವಾಯಿ ಸಂಸ್ಮರಣ ವೇದಿಕೆ ವತಿಯಿಂದ 'ತಬಲಾಫೀಲಿಯಾ(ವಿಭಿನ್ನ ಬಗೆಯ ತಬಲ ಸ್ವರಮೇಳ) ಕಾರ್ಯಕ್ರಮವನ್ನು ಡಿ.22ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ವೇದಿಕೆಯ ಸಂಚಾಲಕ ನಿಶಾಂತ್ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರಲ್ಲಿ 22 ಪ್ರಖ್ಯಾತ ತಬಲ ವಾದಕರು ತಬಲ ಸ್ವರಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೇರಿಕ, ಸ್ವಿಡ್ಜರ್ ಲ್ಯಾಂಡ್, ದೆಹಲಿ, ಕೋಲ್ಕತ್ತಾ ಹಾಗೂ ರಾಜ್ಯದ ಗಾಯಕರು ಹಾಗೂ ತಬಲ ವಾದಕರು ಭಾಗವಹಿಸುವ ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ತಂಡ ಹಾಗೂ ಗುಣಮಟ್ಟದ್ದಾಗಿದೆ ಎಂದರು.

ಅಂತಾರಾಷ್ಟ್ರೀಯ ಖ್ಯಾತಿಯ ಪಂಡಿತ್ ಸಮೀರ್ ಚರ್ಟಜಿಯವರ ಕಲ್ಪನೆಯಿಂದ ಮೂಡಿಬರುತ್ತಿರುವ ಈ ತಬಲ ಸ್ವರಮೇಳ ಜೀವನದ ಹಲವಾರು ಮಜಲುಗಳಾದ ಸೌಂದರ್ಯ, ಪರಂಪರೆ ಹಾಗೂ ಭಾವನೆಗಳನ್ನು ಮನಮುಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ತಬಲ ಲಯಕ್ಕೆ ಆಲಾಪನೆಯೊಂದಿಗೆ ನಾಲ್ವರು ಗಾಯಕರು ಧ್ವನಿಗೂಡಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಪಾಸ್‌ಗಳನ್ನು ವಿತರಿಸಲಾಗುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ 94481 27254, 92433 22238ಗೆ ಸಂಪರ್ಕಿಸಬಹುದು. [ಪುಟ್ಟರಾಜ ಗವಾಯಿ]

English summary
In memory of Pt Puttaraj Gawai Bangalore based Sunaada Art Foundation in association with the Chandayana School of Music, New York are conducting Tabla Filia-a Tabla Symphony Program at Kuvempu Ranga Mandir here on Dec.22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X