ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ’ಕೇಸರಿ ಉಗ್ರರು’ ಹೇಳಿಕೆಗೆ ಮೋದಿ ಖಂಡನೆ

By Mahesh
|
Google Oneindia Kannada News

Narendra Modi slams Rahul
ಮುಂಬೈ, ಡಿ.19: ಕಾಂಗ್ರೆಸ್ ಮಹಾಕಾರ್ಯದರ್ಶಿ ರಾಹುಲ್ ಗಾಂಧಿ ಹಿಂದೂ ಭಯೋತ್ಪಾದನೆಯ ಕುರಿತಂತೆ ಹೇಳಿಕೆ ನೀಡಿರುವುದನ್ನು ಬಿಜೆಪಿ ನಾಯಕ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಹಿಂದೂ ಮೂಲಭೂತವಾದಿಗಳ ಭಯೋತ್ಪಾದನೆಯಿಂದಾಗಿ ಸಮಾಜದಲ್ಲಿ ಧಾರ್ಮಿಕ ಒತ್ತಡ ಉಂಟಾಗಿದ್ದು, ಮುಸ್ಲಿಂ ಬಾಂಧವ ರೊಂದಿಗೆ ರಾಜಕೀಯ ತಿಕ್ಕಾಟ ಆರಂಭವಾಗಿದೆ ಎಂದು ರಾಹುಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಶನಿವಾರ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರ ಮೋದಿ, ರಾಹುಲ್ ಗಾಂಧಿಯವರ ಈ ಹೇಳಿಕೆ ಪಾಕಿಸ್ತಾನಕ್ಕೆ ಸಹಾಯಕವಾಗುವಂಥದ್ದು ಎಂದು ಲೇವಡಿ ಮಾಡಿದ್ದಾರೆ. 'ನೆನ್ನೆಯಷ್ಟೇ ಕಾಂಗ್ರೆಸ್‌ನ ರಾಹುಲ್ ಗಾಂಧಿ ಇಂಥ ಹೇಳಿಕೆಗಳನ್ನು ಅಮೆರಿಕಾಕ್ಕೆ ನೀಡಿರುವುದನ್ನು ವಿಕಿಲೀಕ್ಸ್ ಬಿಡುಗಡೆಗೊಳಿಸಿದೆ. ಇದರಿಂದ ಇಷ್ಟು ದಿನ ಅಮೆರಿಕಾ ಏತಕ್ಕಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತು ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದು ಮೋದಿ ಅಭಿಪ್ರಾಯಪಟ್ಟರು.

ರಾಹುಲ್ ವಿರುದ್ಧ ಉಮಾ ಕಿಡಿ: ಹಿಂದೂ ಸಂಘಟನೆಗಳ ಕುರಿತಂತೆ ಅವಹೇಳನಕಾರಿ ಮಾತುಗಳ ನ್ನಾಡಿದ್ದಾರೆಂದು ಬಿಜಿಪಿಯ ಮಾಜಿ ನಾಯಕಿ ಉಮಾ ಭಾರತಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ. ಅಲ್ಲದೇ, ಮುಂಬೈ ದಾಳಿಯ ಸಂದರ್ಭದಲ್ಲಿ ಹತರಾಗಿದ್ದ ಹೇಮಂತ್ ಕರ್ಕರೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನ ನಾಯಕ ದಿಗ್ವಿಜಯ ಸಿಂಗ್‌ರನ್ನೂ ಉಮಾ ಭಾರತಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಆಧುನಿಕ ಜಿನ್ನಾ: ಹಿಂದೂ ಸಂಘಟನೆಗಳನ್ನು ಉಗ್ರರಿಗೆ ಹೋಲಿಸುವ ಮೂಲಕ ರಾಹುಲ್ ಗಾಂಧಿ ಅವರು ಆಧುನಿಕ ಮಹಮ್ಮದ್ ಆಲಿ ಜಿನ್ನಾ ಎನಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಪ್ರವೀನ್ ತೊಗಡಿಯಾ ಹೇಳಿದ್ದಾರೆ. ಪಾಕಿಸ್ತಾನದ ವಕ್ತಾರನಂತೆ ಇದೇ ರೀತಿ ಮುಂದುವರೆದರೆ "ರಾಹುಲ್ ಹಠಾವೋ ಆಂದೋಲನ" ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

English summary
Gujarat Chief Minister Narendra Modi has slammed Rahul Gandhi saying that his remarks over Hindu terrorism have created a wrong impression on India, which made United States to support Pakistan despite of its terror acts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X