• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಡು ಜೊತೆಗೆ ವಾಚ್ ಫ್ರೀ ಎಂದು ಬಿಜೆಪಿ

By Mahesh
|

ಮಾಲೂರು, ಡಿ.19: ವೈಕುಂಠ ಏಕಾದಶಿ ದಿನದಂದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇಗುಲಗಳಲ್ಲಿ ಲಾಡು ವಿತರಿಸಲು ಚುನಾವಣಾ ಆಯೋಗ ಅನುಮತಿ ನೀಡಿದ್ದನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿದೆ. ಡಿ.17ರಂದು ಇಲ್ಲಿನ ಟೇಕಲ್ ಜಿಲ್ಲಾ ಪಂಚಾಯತಿ ಕ್ಷೇತ್ರದ ದೇಗುಲಗಳಲ್ಲದೆ ಎಲ್ಲಾ ಪ್ರೌಢಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಲಾಡು ಜೊತೆಗೆ ಕೈಗಡಿಯಾರವನ್ನು ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ. ಈ ಸಂಬಂಧ ಮಾರ್ಕೊಂಡಯ್ಯ ಎಂಬ ಕಾರ್ಯಕರ್ತನನ್ನು ಚುನಾವಣಾ ಅಧಿಕಾರಿಗಳು ಬಂಧಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಿಂದ ಸುಮಾರು 50 ಲಡ್ಡು ಹಾಗೂ 150 ಕೈಗಡಿಯಾರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಈ ಪ್ರಸಾದ ಹಂಚಿಕೆಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ ಪರಿಣಾಮ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

ಕೃಷ್ಣಯ್ಯ ಶೆಟ್ಟಿ ಕೃಪೆ: ಕರ್ನಾಟಕ ಮುಜರಾಯಿ ಮಂಡಳಿಯ ಅಧ್ಯಕ್ಷ ಎನ್ ಕೃಷ್ಣಯ್ಯ ಶೆಟ್ಟಿ ಅವರು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿ ವೈಕುಂಠ ಏಕಾದಶಿಯ ಪ್ರಯುಕ್ತ ಪ್ರಸಾದ ರೂಪದಲ್ಲಿ ಮಾತ್ರ ಲಾಡುಗಳ ವಿತರಣೆ ಮಾಡಲು ಅವಕಾಶ ನೀಡಬೇಕು ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ ಎಂದು ಕೋರಿದ್ದರು. ಅದರಂತೆ, ಆಯೋಗ ಕೂಡಾ ಅನುಮತಿ ನೀಡಿದ್ದು, ಆದರೆ, ಶೆಟ್ಟರ ಅನುಯಾಯಿಗಳು ಇದನ್ನು ಸಮರ್ಥವಾಗಿ ಬಳಸಿಕೊಂಡು ವಾಚು ವಿತರಿಸಲು ಮುಂದಾಗಿದ್ದು, ಗೊಂದಲ ಗಲಭೆಗೆ ಕಾರಣವಾಯಿತು.

English summary
Malur zilla panchayat BJP activists have misused the permission given by State Election Commission to distribute laddus on Vaikunta Ekadasi. BJP activist held for distributing Wrist watch along with Laddus. Earlier Mujarai dept chief Krishnaiah Shetty manage to get permission to Laddus distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more