• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿ ವ್ಯಾಪಾರಕ್ಕೆ ಮುಕ್ತಿ ಫುಡ್ ಕೋರ್ಟ್ ಗೆ ಜೈ: ಡಿಸಿ

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಡಿ.19: ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಹ ತಿಂಡಿ ಗಾಡಿಗಳಿಗೆ ಶಾಶ್ವತ ಸ್ಥಳ ಕಲ್ಪಿಸಲು ಫುಡ್‌ಕೋರ್ಟ್ ಮಾದರಿಯಲ್ಲಿ ಸ್ಥಳ ಗುರುತು ಮಾಡಿ ತಿಂಡಿ ಗಾಡಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳಲ್ಲಿ ಈ ರೀತಿಯ ತಿಂಡಿ ಗಾಡಿಗಳ ವ್ಯಾಪಾರ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ಆದರೆ 30ಅಡಿಗಿಂತ ಕಡಿಮೆ ಇರುವಂತಹ ರಸ್ತೆಗಳಲ್ಲಿ ಈ ರೀತಿಯ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶ ನೀಡಿದ್ದು, ಅದರಂತೆ ಕಸ್ತೂರರ್ಬಾ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ತಿಂಡಿ ಗಾಡಿಗಳಿಗೆ ಬೇರೆ ಕಡೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದರು.

ಆರೋಗ್ಯಕ್ಕೆ ಸ್ವಚ್ಛತೆಗೆ ಆದ್ಯತೆ: ಕಸ್ತೂರರ್ಬಾ ರಸ್ತೆಯಲ್ಲಿ ತಿಂಡಿ ಗಾಡಿಗಳಿಗೆ ಬೇರೆ ಕಡೆ ವ್ಯಾಪಾರ ಮಾಡಲು ಹತ್ತು- ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಏಕೆಂದರೆ ಈ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳಿವೆ. ನಗರಸಭೆ ಇದೆ, ಇದರ ಜೊತೆಗೆ ಗಾಂಧಿ ಪಾರ್ಕ್ ಕೂಡ ಇದ್ದು, ಇಲ್ಲಿ ಪ್ರತಿನಿತ್ಯ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ ಇದರಿಂದಾಗಿ ಈ ರಸ್ತೆಯಲ್ಲಿ ಸಾಕಷ್ಟು ಅನಾನುಕೂಲಗಳು ಉಂಟಾಗಿದ್ದು, ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ. ಹೀಗಾಗಿ ತಿಂಡಿ ಗಾಡಿಗಳ ಮಾಲೀಕರುಗಳಿಗೆ ಈ ರಸ್ತೆಯನ್ನು ಬಿಟ್ಟು ಬೇರೆ ಕಡೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ಮಾಡುತ್ತೇವೆ. ಇದಕ್ಕಾಗಿ ಸೂಕ್ತ ಜಾಗ ಪರಿಶೀಲನೆ ಮಾಡಬೇಕಾಗಿದೆ ಎಂದು ಹೇಳಿದರು.

ಘಟನೆಯೊಂದನ್ನು ನೆನೆಪಿಸಿಕೊಂಡ ಅವರು, ಅಲ್ಲಿನ ತಿಂಡಿ ಗಾಡಿಗಳ ವ್ಯಾಪಾರಸ್ಥರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಪೊಲೀಸರಿಗೆ ಈ ರೀತಿಯ ಪರಿಸ್ಥಿತಿ ಇದೆ ಎಂದರೆ ಇನ್ನು ಸಾರ್ವಜನಿಕರಿಗೆ ಎಷ್ಟು ತೊಂದರೆ ಇದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಫುಡ್‌ಕೋರ್ಟ್ ತೆರೆಯಲು ಜಿಲ್ಲಾಡಳಿತ ಯೋಚಿಸುತ್ತಿದೆ ಎಂದರು.

ಸದ್ಯಕ್ಕೆ ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಸಂಜೆ 6ಗಂಟೆಯ ನಂತರ ವ್ಯಾಪಾರ ಪ್ರಾರಂಭಿಸಬೇಕು ಮತ್ತು 11 ಗಂಟೆಯೊಳಗೆ ವ್ಯಾಪಾರವನ್ನು ಮುಗಿಸಬೇಕು. ಜೊತೆಗೆ ಪ್ರತಿಯೊಬ್ಬ ತಳ್ಳು ಗಾಡಿಯವರು ಕಸದ ಬುಟ್ಟಿ ಇಡಬೇಕು. ಜೊತೆಗೆ ಕಸದ ಬುಟ್ಟಿಗೆ ಹಾಕಿಸುವ ಜವಾಬ್ದಾರಿ ಮಾಲೀಕರದೇ ಆಗಿದೆ. ಇದನ್ನು ಮೀರಿದರೆ ಅಂಗಡಿಗಳನ್ನು ಅಲ್ಲಿಂದ ಖಾಲಿ ಮಾಡಿಸುವುದಾಗಿ ಹೇಳಿದರು.

English summary
Shivamogga Deputy Commissioner V Ponnuraj has come up with an idea to set up Food Court to foot path eateries in Shimoga City. He is concentrating on Kasurba Road foot path vendors and asked public to maintain cleaniness. Until further arrangements were made foot path vendors can do do business between 6PM to 11 PM he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X