ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011 ಉದ್ಯೋಗಿಗಳಿಗೆ ಸುಗ್ಗಿಯ ವರ್ಷ

By Mrutyunjaya Kalmat
|
Google Oneindia Kannada News

New Year Bonanza : 20PC jump in hiring
ನವದೆಹಲಿ, ಡಿ. 17 : ಸಾಫ್ಟ್ ವೇರ್ ಇಂಜಿನಿಯರ್ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಉದ್ಯೋಗಿಗಳ ಹಾಗೂ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ 2011 ಹೊಸ ವರ್ಷ ಸುಗ್ಗಿ ಕಾಲ. 2011ರಲ್ಲಿ ಭಾರತದ ಆರ್ಥಿಕ ಮಾರುಕಟ್ಟೆ ಗಮನಾರ್ಹ ರೀತಿಯಲ್ಲಿ ಚೇತರಿಕೆ ಕಂಡುಕೊಳ್ಳುವುದರ ಜೊತೆಗೆ ಒಟ್ಟಾರೆ ಶೇ. 20 ನೇಮಕಾತಿ ನಡೆಯುವ ಶುಭ ಸೂಚನೆ ನೀಡಿದೆ.

2009ರಲ್ಲಿ ಆಗಿದ್ದ ಆರ್ಥಿಕ ಕುಸಿತದಿಂದ ವಿಶ್ವದ ಮಾರುಕಟ್ಟೆ ಹೈರಾಣವಾಗಿ ಹೋಗಿತ್ತು. 2010ರ ಮಧ್ಯ ಭಾಗದಿಂದ ಕುಸಿತದ ಪ್ರಮಾಣ ತಕ್ಕ ಮಟ್ಟಿಗೆ ಸುಧಾರಣೆ ಕಂಡಿತ್ತು. ಸಾಫ್ಟ್ ವೇರ್ ಸೇರಿದಂತೆ ಬ್ಯಾಂಕಿಂಗ್, ಟೆಲಿಕಾಂ ಮತ್ತಿತರ ಸೇವಾ ಕ್ಷೇತ್ರದಲ್ಲಿ ಉದ್ಯೋಗಿಗಳ ನೇಮಕಾತಿ ಆರಂಭವಾಯಿತು. 2011ರಲ್ಲಿ ಎಲ್ಲ ವಲಯಗಳು ಸೇರಿ ಸುಮಾರು 10 ಲಕ್ಷ ಉದ್ಯೋಗಿಗಳು ಸೃಷ್ಟಿಯಾಗಲಿವೆ. ಮುಖ್ಯವಾಗಿ ಅನುಭವಿ ಹಾಗೂ ವೃತ್ತಿಪರತೆ ಹೊಂದಿರುವ ಉದ್ಯೋಗಿಗಳಿಗಂತೂ ಬಾರಿ ಡಿಮ್ಯಾಂಡ್.

2011ವರ್ಷದ ಆರಂಭದಿಂದಲೇ ಹೊಸ ನೇಮಕಾತಿಗಳು ಆರಂಭಗೊಳ್ಳುತ್ತವೆ. ಈಗಾಗಲೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಡಿಮೆ ಎಂದರೂ ಶೇ. 20 ರಷ್ಟು ಸಂಬಳ ಏರಿಕೆಯಾಗಲಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ವಿಶ್ಲೇಷಕರು ಹೇಳಿದ್ದಾರೆ.

ಅನುಭವಿ ಮತ್ತು ವೃತ್ತಿಪರತೆ ಹೊಂದಿರುವ ಉದ್ಯೋಗಿಗಳನ್ನು ಕಂಪನಿಯಲ್ಲಿ ಉಳಿಸಿಕೊಳ್ಳುವುದು ಕಂಪನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಉದ್ಯೋಗಳಿಗಾಗಿ ಕಂಪನಿ ಕಂಪನಿಗಳ ಮಧ್ಯ ಪೈಪೋಟಿ ಹೆಚ್ಚಲಿದೆ. ಇದರಿಂದ ಉದ್ಯೋಗಿಗಳಿಗೆ ಭಾರಿ ಡಿಮ್ಯಾಂಡ್ ಬರಲಿದೆ ಎಂದು ಸ್ಟಾಪಿಂಗ್ ಸರ್ವೀಸ್ ಕಂಪನಿಯಾದ ಪ್ಯುಚರ್ ಸ್ಟೇಪ್ ಕಂಟ್ರಿಯ ಮ್ಯಾನೇಜರ್ ಅಸೀಮ್ ಹೊಂಡಾ ತಿಳಿಸಿದ್ದಾರೆ. ಆದರೆ ಇನ್ಫೋಸಿಸ್ ಮುಖ್ಯಕಾರ್ಯನಿರ್ವಾಹಕ ಕ್ರಿಸ್ ಗೋಪಾಲಕೃಷ್ಣ ಅವರು ಶೀಘ್ರದಲ್ಲೇ ಇನ್ನೊಂದು ಆರ್ಥಿಕ ಕುಸಿತ ಎದುರಾಗಲಿದೆ ಎಂದು ಭವಿಷ್ಯ ನುಡಿದಿರುವುದು ಸಹ ಇದೆ.

English summary
Bountiful days are in store on job street in the New Year, as in-bloom-again industry is expected to accelerate hiring by as much as 20 per cent and reward employees with an identical hike in salaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X